ಕೊಡಗು ವಿ.ವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಜನಾರ್ದನ್ ನೇಮಕ

Thursday, March 7th, 2024
ಕೊಡಗು ವಿ.ವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಜನಾರ್ದನ್ ನೇಮಕ

ಬೆಳ್ತಂಗಡಿ: ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸೆನೆಟ್ ಸದಸ್ಯನಾಗಿ ಶ್ರಿ ಕ್ಷೇತ್ರ ಧರ್ಮಸ್ಥಳದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಜನಾರ್ದನ್ ನೇಮಕಗೊಂಡಿದ್ದಾರೆ. ಇವರು ರುಡ್ ಸೆಟ್, ಮತ್ತು ಅರ್ ಸೆಟಿಗಳ ರಾಷ್ಟ್ರೀಯ ನಿರ್ದೇಶಕರಾಗಿದ್ದು ದೇಶದಾದ್ಯಂತ 560 ಕ್ಕು ಅಧಿಕ ಅರ್ ಸೆಟಿಗಳ ಸ್ಥಾಪನೆಗೆ ಅರ್ ಸೆಟಿ ಅದ್ಯಕ್ಷ ಡಾ ಡಿ ವೀರೇಂದ್ರ ಹೆಗ್ಗಡೆಯವರೊಂದಿಗೆ ಶ್ರಮಿಸಿದ್ದರು. ಅರ್ ಸೆಟಿಗಳು ಪ್ರತಿವರ್ಷ 4 ಲಕ್ಷಕ್ಕು ಅಧಿಕ ನಿರುದ್ಯೋಗಿ ಯುವ ಜನತೆಗೆ ತರಬೇತಿ ನೀಡುತ್ತಿದ್ದು ಇದರಲ್ಲಿ ಪ್ರತಿ ವರ್ಷ 3 […]

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ – ನವೆಂಬರ್ 29 ರಿಂದ ಡಿಸೆಂಬರ್ 3, 2021

Sunday, November 28th, 2021
Dharmasthala-Deepothsava

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 74ನೆ ವರ್ಷದ ಜನ್ಮ ದಿನಾಚರಣೆ

Thursday, November 25th, 2021
Veerendra Hegde Birthday

ಉಜಿರೆ: ಧರ್ಮಸ್ಥಳದಲ್ಲಿ ಗುರುವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 74ನೆ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ದೇವಳದ ನೌಕರರು, ಊರಿನ ನಾಗರಿಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ,  ಆಪ್ತರು, ಅಭಿಮಾನಿಗಳು ಹಾಗೂ ಭಕ್ತರು ಶ್ರದ್ಧಾ-ಭಕ್ತಿಯಿಂದ ಹೆಗ್ಗಡೆಯವರಿಗೆ ಜನ್ಮ ದಿನದ ಶುಭಾಶಯ ಅರ್ಪಿಸಿದರು. ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೆಗ್ಗಡೆ ದಂಪತಿಗಳಿಗೆ ವಿಶೇಷ ಪ್ರಸಾದ ನೀಡಿ ಶುಭ ಹಾರೈಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪಟ್ನಶೆಟ್ಟಿ ಸುಧೇಶ್ ಕುಮಾರ್ ಜೈನ್, ಬಸದಿಗಳ ಆಡಳಿತ ಮೊಕ್ತೇಸರ ಆನಡ್ಕ […]

ಧರ್ಮಸ್ಥಳದ ವತಿಯಿಂದ ಶಾಲೆಗಳಿಗೆ ಬೆಂಚು, ಡೆಸ್ಕ್ ವಿತರಣೆ

Tuesday, December 29th, 2020
Dharmasthala Bench

ಉಜಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10,200 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಒಂದು ಕೋಟಿ ಎಪ್ಪತ್ತೆಂಟು ಲಕ್ಷದ ಐವತ್ತು ಸಾವಿರ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಬೆಂಚು ಮತ್ತು ಡೆಸ್ಕ್ ಗಳನ್ನು ವಿತರಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ ಹೊಸಪೇಟೆ ಜಿಲ್ಲೆಗಳ 287 ಶಾಲೆಗಳಿಗೆ 255೦ ಬೆಂಚು ಮತ್ತು ಡೆಸ್ಕ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು. ಕಳೆದ ಹತ್ತು ವರ್ಷಗಳಲ್ಲಿ 29 ಜಿಲ್ಲೆಗಳ 9213 ಶಾಲೆಗಳಿಗೆ […]

ಮುಂದಿನ ವರ್ಷದಿಂದ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ

Sunday, October 4th, 2020
online Bajane

ಉಜಿರೆ: ಧರ್ಮಸ್ಥಳದ ವತಿಯಿಂದ ಮುಂದಿನ ವರ್ಷದಿಂದ ಆನ್ ಲೈನ್ ಮೂಲಕ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ ನೀಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಶನಿವಾರ ಕರ್ನಾಟಕ ಭಜನಾ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ ಪ್ರಾರ್ಥನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಭಜನಾ ತರಬೇತಿ ಕಮ್ಮಟ ದಿಂದಾಗಿ ಜನರಲ್ಲಿ ಭಜನೆ ಬಗ್ಗೆ ಗೌರವ, ಭಕ್ತಿ, ಶಿಸ್ತು, ಸಂಯಮ, ನಾಯಕತ್ವ ಗುಣ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಧಾರ್ಮಿಕ ಪ್ರಜ್ಞೆ ಮೂಡಿಬಂದಿದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ದೇವರ ಅಪ್ಪಣೆ […]

ಧರ್ಮಸ್ಥಳದ ವಿರುದ್ಧ ಅಪಪ್ರಚಾರ, 25 ರೂ ಲಕ್ಷ ಪರಿಹಾರ ಪಾವತಿಸುವಂತೆ ಕೋರ್ಟ್ ಆದೇಶ

Sunday, August 9th, 2020
veerendraHeggade

ಮಂಗಳೂರು: ಧರ್ಮಸ್ಥಳದ ಆರ್ಥಿಕ ವ್ಯವಹಾರಗಳು, ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ವಿರುದ್ಧ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡಿದ್ದಕ್ಕೆ ಬೆಳ್ತಂಗಡಿಯ ಹಿರಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯ  ಕ್ಷೇತ್ರಕ್ಕೆ ರೂ  25 ಲಕ್ಷ ಪರಿಹಾರ ಪಾವತಿಸುವಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ.ಸೋಮನಾಥ ನಾಯಕ್‌ ಅವರಿಗೆ ಆದೇಶಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಕುರಿತು ಯಾವುದೇ ಹೇಳಿಕೆ, ಪ್ರಕಟಣೆ ನೀಡದಂತೆ ನ್ಯಾಯಾಲಯ ಸೋಮನಾಥ ನಾಯಕ್‌ ಅವರಿಗೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಅದನ್ನು ಉಲ್ಲಂಘಿಸಿದ ಅಪರಾಧಕ್ಕಾಗಿ 2013ರಲ್ಲೇ ಮೂರು ತಿಂಗಳ […]

ಎಸ್​ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ

Sunday, July 19th, 2020
sdm dharwad

ಧಾರವಾಡ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಮತ್ತು ಸಾರ್ವಜನಿಕರ ಸಹಕಾರವೂ ಮುಖ್ಯ. ಲಾಕ್ಡೌನ್ಗಿಂತ ಸ್ವಯಂ ನಿರ್ಬಂಧ ಹೆಚ್ಚು ಪರಿಣಾಮಕಾರಿಯಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ಸತ್ತೂರಿನ ಎಸ್ಡಿಎಂ ಆಸ್ಪತ್ರೆಯಲ್ಲಿ ಸಂಜೆ ಕೋವಿಡ್ ತಪಾಸಣೆ ವೈರಾಲಜಿ ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ತ್ವರಿತ ಪತ್ತೆಗೆ ಮತ್ತೊಂದು ಪ್ರಯೋಗಾಲಯ ಪ್ರಾರಂಭವಾಗುತ್ತಿರುವುದು ನೆರವಾಗಲಿದೆ. ಕೊರೊನಾ ವಾರಿಯರ್ಗಳಾಗಿರುವ […]

ಮಂಜುನಾಥ ಸ್ವಾಮಿ ದೇವರ ನಂದಾದೀಪ ನಂದಿ ಹೋಗಿದೆ ಎಂದು ಕಿಡಿಗೇಡಿಗಳ ಅಪಪ್ರಚಾರ : ಹೆಗ್ಗಡೆ ಸ್ಪಷ್ಟನೆ

Saturday, March 28th, 2020
Nanda deepa

ಧರ್ಮಸ್ಥಳ : ಇತ್ತೀಚೆಗೆ ಕಾಪು ಮಾರಿಗುಡಿಯಲ್ಲಿ ಕಪ್ಪು ಚಹಾಕ್ಕೆ ಬೆಲ್ಲ ಸೇರಿಸಿ ಕುಡಿದರೆ ಕೊರೊನಾ ವಾಸಿಯಾಗುತ್ತದೆ ಎಂದು ಪ್ರಚಾರ ಮಾಡಿದಂತೆ. ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ನಂದಾದೀಪ ನಂದಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದ ಹಿನ್ನಲೆಯಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದು, ಅಂತಹ ಅಪಪ್ರಚಾರದ ಮಾತುಗಳಿಗೆ ಯಾರೂ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ. ದೇಗುಲದ ಬಾಗಿಲು ರಾತ್ರಿ 8 ಗಂಟೆಗೆ ಹಾಕಲಾಗುತ್ತದೆ. ಬೆಳಗ್ಗೆ ಐದು ಗಂಟೆಗೆ ಬಾಗಿಲು ತೆರೆಯುತ್ತಾರೆ, ಮಧ್ಯದಲ್ಲಿ […]

ದಂಡಕ್ಕಿಂತ ವಾಹನ ಸವಾರರ ಮನ ಪರಿವರ್ತನೆ ಮುಖ್ಯ : ಡಾ. ವೀರೇಂದ್ರ ಹೆಗ್ಗಡೆ

Saturday, September 14th, 2019
Dr.Veerendra-Hegde

ಮಂಗಳೂರು : ನೂತನವಾಗಿ ಜಾರಿಯಾಗಿರುವ ದಂಡ ನಿಯಮದ ಜತೆಗೆ ವಾಹನ ಸವಾರರ ಮನ ಪರಿವರ್ತನೆ ಮುಖ್ಯ. ಎಲ್ಲವೂ ದಂಡದಿಂದಲೇ ಸಾಧ್ಯವಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅಪಘಾತಗಳು ಆಗುವ ಸಂಖ್ಯೆ, ಮರಣಗಳ ಸಂಖ್ಯೆಗಳನ್ನು ಕಂಡಾಗ ಸಂಕಟವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾಯ್ದೆಗಳ ಅಗತ್ಯತೆ ಇದೆ. ಬಹಳಷ್ಟು ಮಂದಿ ಅಪಘಾತಕ್ಕೆ ಬಲಿಯಾಗುತ್ತಲೇ ಇದ್ದಾರೆ. ಆದ್ದರಿಂದ ಶಿಸ್ತು ಪಾಲಿಸಲೇಬೇಕು. ಆದ್ದರಿಂದ ಸರ್ಕಾರ ಕನಿಷ್ಠ 30 ದಿನಗಳ ಕಾಲ ಸಮಯ ನೀಡಿ, ಜನರ ಮನ ಪರಿವರ್ತನೆ ಮಾಡಬೇಕು […]

ವಿವಿಧ ಬಣ್ಣಗಳ ಚಿತ್ತಾರದಿಂದ ಕಣ್ಮನ ಸೆಳೆದ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿ

Tuesday, February 19th, 2019
Bahubali

ಧರ್ಮಸ್ಥಳ :  ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮಸ್ತಕಾಭಿಷೇಕದ ಮೂರನೆ ದಿನವಾದ ಸೋಮವಾರ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು. ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಮಸ್ತಕಾಭಿಷೇಕ ನಡೆಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮಸ್ತಕಾಭಿಷೇಕ ನಡೆಯಿತು. ಜಲಾಭಿಷೇಕದ ಬಳಿಕ ಬೆಳ್ತಂಗಡಿಯ ಶ್ರೀನಿವಾಸ ಶೆಟ್ಟಿ ಮತ್ತು ಕುಟುಂಬಸ್ಥರು ಇಕ್ಷುರಸದ ಅಭಿಷೇಕ ನಡೆಸಿ ಪುಣ್ಯಭಾಗಿಗಳಾದರು. ವೇಣೂರಿನ ಸುನಂದಾದೇವಿ ಇಂದ್ರ ಕ್ಷೀರಾಭಿಷೇಕ ನಡೆಸಿದರು. […]