ಶಾಲೆಗಳಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ: ಜಿಲ್ಲಾಧಿಕಾರಿ

Wednesday, March 16th, 2022
Ayushman

ಮಂಗಳೂರು : ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಹೇಳಿದರು. ಅವರು ನಗರದ ವೆನ್‍ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ಮಾನ್ ವಿಭಾಗದಲ್ಲಿ ಮಾ.16ರ ಬುಧವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಕೋರ್ಬೇ ವ್ಯಾಕ್ಸ್ ಲಸಿಕೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವ ಮುನ್ನೆಚ್ಚರಿಕಾ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಾದ್ಯಂತ ಲಸಿಕೆಗಳು ಲಭ್ಯವಿದ್ದು, ಈಗಾಗಲೇ ಜನರು […]

ನಾಗರಿಕರಿಗೆ ತೊಂದರೆ ಕೊಡುತ್ತಿದ್ದ ವೈದ್ಯಾಧಿಕಾರಿಗೆ ತುರ್ತು ವರ್ಗಾವಣೆ

Wednesday, June 9th, 2021
Health Center

ಬಂಟ್ವಾಳ: ಇಲ್ಲಿನ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರು ಸಹಿತ ರೋಗಿಗಳಿಗೆ ಸೂಕ್ತ ಸ್ಪಂದನೆ ಮತ್ತು ಚಿಕಿತ್ಸೆ ನೀಡುತ್ತಿಲ್ಲ ಎಂಬ ನಾಗರಿಕರ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ವೈದ್ಯಾಧಿಕಾರಿ ಡಾ.ಮಧುಸೂದನ್ ಇವರನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಇವರ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿ ಬಂದಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೂಡಾ ನಿರ್ಣಯ ಕೈಗೊಂಡು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾ […]

ಗ್ರಾಮಸ್ಥರ ಕೋವಿಡ್ ಪರೀಕ್ಷೆ ನಡೆಸಲು ಬರಲಿವೆ ಮೊಬೈಲ್ ಕ್ಲಿನಿಕ್

Monday, May 17th, 2021
R Ashoka

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ 19 ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆ ಕೈಗೊಳ್ಳುವ ವೈದ್ಯಾಧಿಕಾರಿಗಳ ತಂಡವಿರುವ ಮೊಬೈಲ್ ವಾಹನಗಳು ಹಳ್ಳಿಗಳಿಗೆ ತೆರಳಲಿದ್ದು, ಈ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಆತಂಕಿತಗೊಂಡಿದ್ದು, ಅವರ ಆರೋಗ್ಯ ಕಾಳಜಿ ಮತ್ತು ಅವರಿಗೆ […]

ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆ ಮೈಸೂರು ವೈದ್ಯಾಧಿಕಾರಿಯನ್ನು ಬಲಿ ಪಡೆದಿದೆ

Saturday, August 22nd, 2020
dyfi

ಮಂಗಳೂರು  : ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಕೊರೊನಾ ಪ್ರಕರಣ ನಿಭಾಯಿಸಲು ವೈದ್ಯರು ಸಹಿತ ನುರಿತ ಸಿಬ್ಬಂಧಿಗಳ ವ್ಯವಸ್ಥೆ ಮಾಡದೆ ಬರೇ ಇರುವ ವೈದ್ಯರುಗಳಿಂದಲೇ ವಿಪರೀತ ಕೆಲಸಗಳನ್ನು ನಿರ್ವಹಿಸಿದ ಕಾರಣ ಒತ್ತಡಕ್ಕೆ ಸಿಲುಕಿದ ವೈದ್ಯರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯ ನಿರ್ಮಾಣ ಇದು ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆ. ಮೈಸೂರಿನ ತಾಲೂಕು ವೈದ್ಯಾಧಿಕಾರಿ ಡಾ ನಾಗೇಂದ್ರ ಅವರನ್ನು ಬಲಿಪಡೆದಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಉರ್ವಸ್ಟೋರ್ ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಸರಕಾರಿ […]

ಕೊರೋನ ಸೋಂಕು ಗುರುವಾರ : ದಕ್ಷಿಣ ಕನ್ನಡ ಜಿಲ್ಲೆ 238, ಉಡುಪಿ ಜಿಲ್ಲೆ 109, ಕಾಸರಗೋಡು ಜಿಲ್ಲೆ 18

Thursday, July 16th, 2020
Corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಾಖಲೆಯ 238 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,738ಕ್ಕೆ ಏರಿಕೆಯಾಗಿದೆ. ಗುರುವಾರ ಹೊಸದಾಗಿ ಸೋಂಕು ಪತ್ತೆಯಾದ 238 ಮಂದಿಯಲ್ಲಿ ಕೇವಲ 23 ಮಂದಿಗೆ ಮಾತ್ರ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯ 17 ಪ್ರಕರಣಗಳು ಇವೆ. ವಿದೇಶದಿಂದ ಬಂದ 19 ಮಂದಿಗೆ ಮಾತ್ರ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ […]

ಕಾಸರಗೋಡು ಜಿಲ್ಲೆಯಲ್ಲಿ ಎಂಟು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

Tuesday, June 30th, 2020
kasaragod-corona

ಕಾಸರಗೋಡು : ಜಿಲ್ಲೆಯಲ್ಲಿ ಮಂಗಳವಾರ ಜಿಲ್ಲೆಯಲ್ಲಿ ಎಂಟು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ ಮೂವರು ವಿದೇಶ, ಮೂವರು ಹೊರ ರಾಜ್ಯ ಹಾಗೂ ಓರ್ವನಿಗೆ ಸಂಪರ್ಕದಿಂದ ಸೋಂಕು ತಗಲಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮ್ ದಾಸ್ ತಿಳಿಸಿದ್ದಾರೆ. ವಿದೇಶದಿಂದ ಬಂದ ಕುಂಬಳೆ, ಬದಿಯಡ್ಕ ತಲಾ ಇಬ್ಬರು, ಪನತ್ತಡಿ, ಮಡಿಕೈ, ಚೆಂಗಳ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಕಾಸರಗೋಡು ಜಿಲ್ಲೆಯ ಓರ್ವ ಎರ್ನಾಕುಲಂ ತ್ರಿಪ್ಪಣಿತ್ತರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಮಂಗಳವಾರ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಚಿಕಿತ್ಸೆಯಲ್ಲಿದ್ದ ಮಂಗಲ್ಪಾಡಿ, ಕುಂಬಳೆ, […]

ಕಾಸರಗೋಡು ಜಿಲ್ಲೆಯಲ್ಲಿ 18 ಮಂದಿಗೆ ಕೊರೋನಾ ವೈರಸ್ : ವೈದ್ಯಾಧಿಕಾರಿ

Thursday, May 28th, 2020
kerala-corona

ಕಾಸರಗೋಡು :  ಮಹಾರಾಷ್ಟ್ರದಿಂದ ಆಗಮಿಸಿದ 13 ಮಂದಿ ಸಹಿತ ಜಿಲ್ಲೆಯಲ್ಲಿ ಗುರುವಾರ  18 ಮಂದಿಗೆ ಕೊರೋನಾ ವೈರಸ್ ತಗುಲಿರುವುದು  ಖಚಿತವಾಗಿದೆ. ಒಬ್ಬ ಮಹಿಳೆ ಮತ್ತು 17 ಮಂದಿ ಪುರುಷರು ರೋಗಬಾಧಿತರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಮಹಾರಾಷ್ಟ್ರವಲ್ಲದೆ ಕುವೈತ್‌ನಿಂದ ಆಗಮಿಸಿದ ಇಬ್ಬರು, ಖತಾರ್‌ನಿಂದ ಬಂದ ಒಬ್ಬರು, ಷಾರ್ಜಾ ದಿಂದ ಆಗಮಿಸಿದ ಒಬ್ಬರು, ತಮಿಳುನಾಡಿನಿಂದ ಬಂದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಖಚಿತಗೊಂಡವರ ಸಂಖ್ಯೆ 67ಕ್ಕೇರಿದೆ. ಮೇ 20ರಂದು ತಮಿಳುನಾಡಿನಿಂದ ಆಗಮಿಸಿದ್ದ 23 […]

ಚಿಕ್ಕಮಗಳೂರು : ಗರ್ಭಿಣಿ , ವೈದ್ಯಾಧಿಕಾರಿ ಸೇರಿ ಐವರಿಗೆ ಕೊರೋನಾ

Wednesday, May 20th, 2020
corona Chikamagaluru

ಚಿಕ್ಕಮಗಳೂರು :  ಕೊಪ್ಪದ ಕೇಂದ್ರದಲ್ಲಿ ಕ್ವಾರಂಟೈನಲ್ಲಿದ್ದ ಮೂವರಿಗೆ ಕೋವಿಡ್-19 ಪತ್ತೆಯಾಗಿದೆ, ಕಾಫಿನಾಡಿನಲ್ಲಿ ಒಂದೇ ದಿನ ಐವರಿಗೆ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಮರಳಿದ್ದ ಎನ್.ಆರ್.ಪುರ ತಾಲ್ಲೂಕಿನ ಕೆರೆಗದ್ದೆಯ ಈ ಮೂವರು ಕ್ವಾರಂಟೈನಲ್ಲಿದ್ದರು. 7 ವರ್ಷ ಮತ್ತು 10 ವರ್ಷದ ಬಾಲಕ, 17 ವರ್ಷದ ಯುವತಿಗೆ ಕೋವಿಡ್ ದೃಢಪಟ್ಟಿದೆ. ತರೀಕೆರೆಯ ಗರ್ಭಿಣಿ (27) ಮತ್ತು ಮೂಡಿಗೆರೆಯ ವೈದ್ಯಾಧಿಕಾರಿಗೆ ಕೋವಿಡ್ ಪತ್ತೆಯಾಗಿದೆ.

ಡಾ| ರಂಗನಾಥ್ ಎಸ್. ಶೆಟ್ಟಿ ಜೋಗೇಶ್ವರಿ ನಿಧನ

Tuesday, April 1st, 2014
Dr.Ranganath Shetty

ಮುಂಬಯಿ :  ಉಪನಗರ ಜೋಗೇಶ್ವರಿ ಪೂರ್ವದ ಪ್ರಸಿದ್ಧ ವೈದ್ಯಾಧಿಕಾರಿ, ಡಾ| ರಂಗನಾಥ್ ಎಸ್.ಶೆಟ್ಟಿ (68.) ಅವರು ಇಂದಿಲ್ಲಿ ಸೋಮವಾರ (31.03.2014) ಮುಂಜಾನೆ ತನ್ನ ಸ್ವನಿವಾಸ ಗೋರೆಗಾಂವ್ ಪೂರ್ವದ ಪೇರುಭಾಗ್ ಅಲ್ಲಿನ ಧನವಂತಿ ಅಪಾರ್ಟ್ ಮೆಂಟ್ ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮೂಲತಃ ಮಂಗಳೂರು ಬಳ್ಕುಂಜೆ ಸನಿಹದ ಮುಂಡ್ಕೂರು ಉಳೆಪಾಡಿ ಕಲೆಂಬಿ ನಿವಾಸದವರಾಗಿದ್ದ ರಘುನಾಥ್ ಶೆಟ್ಟಿ ಹಲವಾರು ವರ್ಷಗಳಿಂದ ಜೋಗೇಶ್ವರಿ ಪೂರ್ವದಲ್ಲಿ ಪಾರಸ್ ನಗರದಲ್ಲಿ ಕ್ಲಿನಿಕ್ ಮೂಲಕ ವೈದ್ಯಕೀಯ ಸೇವಾ ನಿರತರಾಗಿದ್ದರು. ಮೃತರು ಪತ್ನಿ ಶ್ರೀಮತಿ ಸುಕನ್ಯಾ ಆರ್.ಶೆಟ್ಟಿ, ಏಕೈಕ ಸುಪುತ್ರಿ ಡಾ| […]