ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ, ಬೆಂಗಳೂರು ಮೂಲದ ಆರೋಪಿ ಬಂಧನ

Friday, June 18th, 2021
surya-NK

ಮಂಗಳೂರು : ತುಳು ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸೂರ್ಯ ಎನ್ ಕೆ. ಬೆಂಗಳೂರಿನ ಶ್ರೀ ರಾಂಪುರ ನಿವಾಸಿ ಎನ್ನಲಾಗಿದೆ ಆರೋಪಿ ಸೂರ್ಯ ಎನ್ ಕೆ.ಪಾದರಕ್ಷೆಯಲ್ಲಿ ತುಳುನಾಡಿನ ಧ್ವಜದ ಚಿತ್ರ ಬಿಡಿಸಿ ತುಳುಭಾಷೆಗೆ ತುಳುನಾಡಿಗೆ ಅವಮಾನ ಎಸಗಿದ್ದ. ಚಪ್ಪಲಿಯಲ್ಲಿ ತುಳು ಧ್ವಜ ಬಳಸಿ ಎಡಿಟ್ ಮಾಡಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಿದ್ದ. ಈತ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಈಗ ತುಳುನಾಡು ಚಪ್ಪಲ್ […]

ಮಹಾನಗರ ಪಾಲಿಕೆಯ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ..!

Saturday, June 30th, 2018
mangaluru

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿವೆ. ಪಾಲಿಕೆ ಚುನಾವಣೆ ಸಮೀಪಿಸುತ್ತಿರುವಂತೆ ನಗರಾಭಿವೃದ್ಧಿ ಇಲಾಖೆಯು ವಾರ್ಡ್ ವಾರ್ ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಈ ಮೂಲಕ ಮುಂದಿನ ಮಾರ್ಚ್ನಲ್ಲಿ ನಡೆಯುವ ಪಾಲಿಕೆ ಚುನಾವಣೆಗೆ ರಾಜಕೀಯ ಲೆಕ್ಕಾಚಾರ ಆರಂಭಗೊಂಡಿದೆ. ಇದರ ನಡುವೆ ಕರಡು ಮೀಸಲಾತಿ ಪಟ್ಟಿ ಹಾಲಿ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯು ಒಟ್ಟು 60 ವಾರ್ಡ್ಗಳನ್ನು ಹೊಂದಿದ್ದು, ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿ ಪ್ರಕಟಗೊಳ್ಳುತ್ತಿದೆ. ಅಂತೆಯೇ […]

ಬಿಜೆಪಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಲಿ : ಮೊದಿನ್ ಬಾವಾ ಸವಾಲು

Tuesday, May 8th, 2018
programme-congress

ಮಂಗಳೂರು: ಕಳೆದ ಐದು ವರ್ಷದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಪಟ್ಟಿಯನ್ನು ಈಗಾಗಲೇ ಜನರ ಮುಂದಿಟ್ಟಿದ್ದೇನೆ. ತಾನು ಅಭಿವೃದ್ಧಿ ಕೆಲಸ ಮಾಡಲಿಲ್ಲ ಎನ್ನುವ ಬಿಜೆಪಿಯು ಕೈಗೆತ್ತಿಕೊಂಡ ಕಾಮಗಾರಿಗಳ ಪಟ್ಟಿಯನ್ನು ಜನತೆಯ ಮುಂದಿಡಲಿ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊದೀನ್ ಬಾವಾ ಸವಾಲು ಹಾಕಿದ್ದಾರೆ. ಸುರತ್ಕಲ್ ನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾರಿಯ ಚುನಾವಣೆ ಕೈಗೆತ್ತಿಕೊಂಡ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಡೆಯಲಿದೆ ಎಂದ ಅವರು, ಸುರತ್ಕಲ್‌ನಲ್ಲಿ ೧೨೬ ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ, ಬೋಂದೆಲ್‌ನಲ್ಲಿ ೭ […]

ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮೊಹಿಯುದ್ದೀನ್ ಬಾವಾ

Friday, April 27th, 2018
mohiuddin-bava

ಮಂಗಳೂರು: ಕಾಂಗ್ರೆಸ್ ಸರಕಾರದ ಸಾಧನೆ ಮತ್ತು ಅಭಿವೃದ್ಧಿ ಕಾರ್ಯವನ್ನು ಕಾರ್ಯಕರ್ತರು ಮತದಾರರಿಗೆ ತಿಳಿ ಹೇಳುವ ಮೂಲಕ ಪಕ್ಷದತ್ತಾ ಒಲವು ತೋರಿಸಲು ವಾಹಕರಾಗಿ ಕೆಲಸ ಮಾಡ ಬೇಕು ಎಂದು ಶಾಸಕ ಮೊದಿನ್ ಬಾವಾ ಹೇಳಿದರು. ಅವರು ಚೊಕ್ಕಬೆಟ್ಟುವಿನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಕಲ್ಯಾಣಕ್ಕಾಗಿ ಉತ್ತಮ ಯೋಜನೆ ಜಾರಿ ಮಾಡಿದವರು. ಅನ್ನ ಭಾಗ್ಯ, ಕ್ಷೀರ ಭಾಗ್ಯ, ವಸತಿ ಮತ್ತಿತರ ಸೌಲಭ್ಯಗಳು ಬಡ ವರ್ಗಕ್ಕೆ ನೇರವಾಗಿ ತಲುಪುವ ಸೌಲಭ್ಯಗಳಾಗಿವೆ. ಸರ್ವರಿಗೂ ಉತ್ತಮ […]

ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸಮ್ಮಾನ

Monday, April 16th, 2018
congress

ಮಂಗಳೂರು: ದೇಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಅನೇಕ ನಾಯಕರು ಇಂದೂ ಪಕ್ಷದ ಏಳಿಗೆಗಾಗಿ ಚಿಂತಿಸುತ್ತಲೇ ಇರುತ್ತಾರೆ . ಅಂತಹ ನಾಯಕರನ್ನು ಗುರುತಿಸಿ, ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಸಮ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಾಸಕ ಮೊದಿನ್ ಬಾವಾ ಹೇಳಿದರು. ಸುರತ್ಕಲ್ 6ನೇ ವಾರ್ಡ್‌ನ ಕಾರ್ಯಕರ್ತರ ,ನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸ್ವರೂಪವೇ ಬದಲಾಗಿದೆ. ಎಲ್ಲ ಕಡೆಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಸಮುದಾಯ ಭವನ, ರಸ್ತೆ, […]

ಪರಿಶಿಷ್ಟರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ : ಶಾಸಕ ಲೋಬೋ

Wednesday, February 7th, 2018
j-r-lobo

ಮಂಗಳೂರು: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇತ್ತೀಚಿಗೆ 4-02-18 ಉರ್ವದ ಬಿಲ್ಲವ ಸಂಘದಲ್ಲಿ ಜರಗಿತು. ಕಾರ್ಯಕ್ರಮವನ್ನು ಶಾಸಕರಾದ ಜೆ.ಆರ್.ಲೋಬೋರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿದ್ದ ಅನೇಕ ಪರಿಶಿಷ್ಟ ಕಾಲನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದು, ವಸತಿ ರಹಿತರಿಗೆ ಆಶ್ರಯ ಯೋಜನೆಯಲ್ಲಿ ಮನೆ, ಕಾಂಕ್ರೀಟ್ ರಸ್ತೆ, ದೈವಸ್ಥಾನ, ಭಜನಾ ಮಂದಿರದ ಅಭಿವೃದ್ಧಿಗೆ ನೆರವು, ಪರಿಶಿಷ್ಟ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ನೂತನ […]