ಕೊಡಿಯಾಲ್‌ ಬೈಲಿನ ಶಾರದಾ ವಿದ್ಯಾಲಯಕ್ಕೆ ರಜತ ಸಂಭ್ರಮ

Saturday, January 20th, 2018
sharada-college

ಮಂಗಳೂರು: ಕೊಡಿಯಾಲ್‌ ಬೈಲ್‌ನಲ್ಲಿ 1992ರಲ್ಲಿ ಸ್ಥಾಪನೆಗೊಂಡ ತುಳುನಾಡು ಎಜುಕೇಶನಲ್‌ ಟ್ರಸ್ಟ್‌ನ ಆಶ್ರಯದಲ್ಲಿ ಆರಂಭವಾದ ವಿದ್ಯಾಸಂಸ್ಥೆ ಶಾರದಾ ವಿದ್ಯಾಲಯವು ಇಪ್ಪತ್ತೈದು ಸಂವತ್ಸರವನ್ನು ಪೂರೈಸಿ ರಜತಪರ್ವದ ಸಂಭ್ರಮದಲ್ಲಿದೆ. ‘ನಹಿ ಜ್ಞಾನೇನ ಸದೃಶಂ’ ಎಂಬು ದು ಇದರ ಧ್ಯೇಯ ವಾಕ್ಯ. ಜ್ಞಾನ ದಾಸೋಹದೊಂದಿಗೆ ಇಂದು ನಾಡಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ. ಭಾರತೀಯ ಸಂಸ್ಕೃತಿ, ಜೀವನ ಮೌಲ್ಯಗಳ ಆಧಾರಿತ ಪರಿಕಲ್ಪನೆಗಳಿಂದ ಒಡಗೂಡಿ ಯೋಗ, ಸಂಗೀತ, ಕ್ರೀಡೆ, ಸಂಸ್ಕೃತ, ನೈತಿಕ ಶಿಕ್ಷಣ ಎಂಬ ಪಂಚಮುಖೀ ಶಿಕ್ಷಣ ಕ್ರಮಗಳನ್ನು ಅನುಸರಿಸಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ […]

ದಿ| ಕೆ. ಅನಂತರಾಮ ರಾವ್ ಸಂಸ್ಮರಣೆ ಕಾರ್ಯಕ್ರಮ.

Sunday, October 10th, 2010
ಕೆ. ಅನಂತರಾಮ ರಾವ್ ಸಂಸ್ಮರಣೆ ಕಾರ್ಯಕ್ರಮ.

ಮಂಗಳೂರು: ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸಾಧನೆಮಾಡಿದ ಹಿರಿಯ ಸಾಹಿತಿ ದಿ| ಕೆ. ಅನಂತರಾಮ ರಾವ್ ಅವರ ಸಂಸ್ಮರಣೆ ಕಾರ್ಯಕ್ರಮ ಇಂದು ಬೆಳಿಗ್ಗೆ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ನಾರಾಯಣ ಭಟ್ ರಾಮಕುಂಜ ಬರೆದ ‘ಉತ್ತಮ ಶಾಲೆಗೊಂದು ಮಾರ್ಗದರ್ಶಿ’ ಕೃತಿಯನ್ನು ವಿಶ್ವೇಶ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ದಿ| ಅನಂತರಾಮರು ಅಪಾರ ಸೇವೆಯನ್ನು ಮಾಡಿದ್ದಾರೆ. ಅವರ ಜೀವಿತದಲ್ಲಿ ಸಂಪೂರ್ಣ […]