ಎಂಸಿಎಫ್ ಸಿಎಸ್ಆರ್ ನಿಧಿಯಿಂದ ನವೀಕರಣಗೊಂಡ ಶಾಲಾ ಕಟ್ಟಡ ಉದ್ಘಾಟನೆ

Thursday, December 17th, 2020
school

  ಕಾವೂರು : ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು ನಾವು ಶ್ರಮ ವಹಿಸುತ್ತೇವೆ.ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗೀ ಶಾಲೆ ಗಳಿಗಿಂತ ಸರಕಾರಿ ಶಾಲೆ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಶಿಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ. ಮರಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣ ಕಟ್ಟಡವನ್ನು ಎಂಸಿಎಫ್ ಸಿಎಸ್ಆರ್ ನಿಧಿಯಿಂದ ನವೀಕರಣಗೊಳಿಸಿದ್ದು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಶಾಲೆಯಲ್ಲಿ ಇಂದು 260 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.ನಗರ ಪ್ರದೇಶದಲ್ಲಿ ಇದು […]

ನೂತನ ಶಾಲಾ ಕಟ್ಟಡದ ಉದ್ಘಾಟನೆ

Monday, July 25th, 2016
School-Building

ಕುಂಬಳೆ: ಕಾಸರಗೋಡು ಜಿಲ್ಲಾ ಅಭಿವೃದ್ದಿ ಪ್ಯಾಕೇಜಿನಲ್ಲಿ ಒಳಪಟ್ಟ ಅಂಗಡಿಮೊಗರು ಹಯರ್ ಸೆಕಂಡರಿಶಾಲೆಯ ಹೊಸಕಟ್ಟಡವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಸಕಲ ಸೌಲಭ್ಯಗಳಿರುವ ಶಾಲೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿದೆ. ಜಿಲ್ಲೆಯ ಅಭಿವೃದ್ದಿ ಯೋಜನೆಯಡಿ ಸುಮಾರು 54 ಲಕ್ಷರೂ.ವಿನಿಯೋಗಿಸಿ ಸ್ಥಾಪಿಸಲಾದ ಹೊಸಕಟ್ಟಡವು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲಿ ಎಂದು ಹಾರೈಸಿದರು. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಜೆ.ಅರುಣಾ, ಗ್ರಾ.ಪಂ ಸದಸ್ಯ […]

ಸಾಹಸ ಮತ್ತು ಸಾಧನೆಗಳಿಂದ ಸಮಾಜ ಅಭಿವೃದ್ಧಿ : ಡಾ|ಶಿವಾನಂದ ಬೇಕಲ್

Tuesday, February 2nd, 2016
Ramakshatriya

ಕಾಸರಗೋಡು: ಇತಿಹಾಸದ ಸಾಧನೆ ಹೆಜ್ಜೆ ಹೆಜ್ಜೆಗೆ ಸ್ಮರಿಸುತ್ತಾ ಸಾಹಸ ಮತ್ತು ಸಾಧನೆಗಳಿಂದ ಸಮಾಜವನ್ನು ಅಭಿವೃದ್ಧಿ ಸಾಗಿಸಬಹುದು. ಸಜ್ಜನಿಕೆ, ಸೌಜನ್ಯ, ಸಂಸ್ಕೃತಿ, ಸಂಸ್ಕಾರ ಅದ್ಭುತಗಳಿಂದ ಕೂಡಿದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯವರ ಸಮಾಜ ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ನಡೆಸುತ್ತಾ ಒಟ್ಟು ಸಮಾಜದಲ್ಲಿ ಗುರುತಿಸುವ ಮಟ್ಟಿಗೆ ಅಭಿವೃದ್ಧಿಯತ್ತ ಸಾಗಿದ್ದೇವೆ. ಇನ್ನಷ್ಟು ಸಾಧನೆಗೆ ಸಮಾಜದ ಒಗ್ಗಟ್ಟು, ಏಕತೆಯನ್ನು ರೂಢಿಸಿಕೊಳ್ಳಬೇಕೆಂದು ಆಕಾಶವಾಣಿ ಮತ್ತು ದೂರದರ್ಶನದ ನಿವೃತ್ತ ನಿರ್ದೇಶಕ ಡಾ|ಶಿವಾನಂದ ಬೇಕಲ್ ಅವರು ಹೇಳಿದರು. ಬೇಕಲ ಪಾಲಕುನ್ನಿನ ಶ್ರೀ ಅಂಬಿಕಾ ಸಭಾಭವನದಲ್ಲಿ ಆಯೋಜಿಸಿದ […]