ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಪ್ರಸ್ತಾಪಗಳು ಸರಕಾರದ ಮುಂದಿಲ್ಲ: ಶಾಸಕ ಕಾಮತ್ ಸ್ಪಷ್ಟನೆ

Wednesday, September 16th, 2020
Income tax Road

ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡು ಕಚೇರಿಯ ಹುದ್ದೆಯನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾಪ ಇದೆ. […]

ಗೃಹ ರಕ್ಷಕ ಕಮಾಂಡರ್ ಗಳಿಗೆ ಶಾಸಕ ಕಾಮತ್ ನೇತೃತ್ವದಲ್ಲಿ ಕಿಟ್ ವಿತರಣೆ

Saturday, May 2nd, 2020
Home Guard

ಮಂಗಳೂರು : ನಗರ ದಕ್ಷಿಣ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ಗೃಹರಕ್ಷಕ ಕಮಾಂಡರ್ ಗಳಿಗೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಡಾಕ್ಟರ್ ಮುರಳಿ ಮೋಹನ ಅವರ ಮೂಲಕ ಉಚಿತ ಕಿಟ್ ವಿತರಿಸಲಾಯಿತು. ಇದೇ ಸಂಧರ್ಭದಲ್ಲಿ ಭಾರತೀಯ ಹೋಮಿಯೋಪತಿಕ್ ಡಾಕ್ಟರ್ ಸಂಘದಿಂದ ಭಾರತ ಸರಕಾರ ಆಯುಷ್ ಇಲಾಖೆಯಿಂದ ಅನುಮೋದಿಸಲ್ಪಟ್ಟ ಔಷಧಿಗಳನ್ನು ಕೂಡ ಉಚಿತವಾಗಿ ನೀಡಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಪೂಜ್ಯ ಮೇಯರ್ ಶ್ರೀ ದಿವಾಕರ್, ಬಿಜೆಪಿ ದಕ್ಷಿಣದ ಅಧ್ಯಕ್ಷರಾಗಿರುವ ವಿಜಯ ಕುಮಾರ್ ಶೆಟ್ಟಿ ಮೂಲಕ ಈ […]

ಪೇಜಾವರ ಶ್ರೀ ಗಳ ನಿಧನಕ್ಕೆ ಶಾಸಕ ಕಾಮತ್ ತೀವ್ರ ಸಂತಾಪ

Sunday, December 29th, 2019
Vedavyasa

ಉಡುಪಿ: ಶ್ರೀ ಕೃಷ್ಣನಗರಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಇಂದು ಮುಖ್ಯಪ್ರಾಣಐಕ್ಯ ಸೇರಿದ್ದು, ಇಡೀ ಕರುನಾಡು ಸ್ತಬ್ಧವಾಗಿದೆ. ಶ್ರೀಗಳ ಅಗಲಿಕೆಗೆ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಸಂತಾಪ ಸೂಚಿಸಿದ್ದಾರೆ. ಜನರಿಗಾಗಿ ಅದರಲ್ಲಿಯೂ ಬಡವರಿಗಾಗಿ ಬದುಕಿದವರು ಶ್ರೀಗಳು. ಬಡತನ ನಿರ್ಮೂಲನೆ, ಅನ್ನ ದಾಸೋಹ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟ ದಿವ್ಯ ಚೇತನ. ದೇಶದ ಸಂಸ್ಕೃತಿ ಪ್ರತೀಕರಾಗಿದ್ದರು. ಆಧ್ಯಾತ್ಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಪೇಜಾವರ ಶ್ರೀಗಳು. ಸಮಾಜಕ್ಕೆ ಶ್ರೀಗಳು […]

ಜಪ್ಪಿನಮೊಗರು ವಾರ್ಡ್ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇನೆ : ಶಾಸಕ ಕಾಮತ್

Monday, December 16th, 2019
kamath

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ವಾರ್ಡಿನ ನಾಯಕ್ ಹಿತ್ಲು ಬಳಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಜೆಯುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಬಗ್ಗೆ ಮಾತನಾಡಿರುವ ಅವರು, ಕಳೆದ ಒಂದೂವರೆ ವರ್ಷಗಳಿಂದ ಜಪ್ಪಿನಮೊಗರು ವಾರ್ಡಿನ ಸಮಗ್ರ ಅಭಿವೃದ್ಧಿಯ ಕುರಿತು ಹೆಚ್ಚಿನ ಗಮನ ಹರಿಸಿದ್ದು, ಈಗಾಗಲೇ ವಿವಿಧ ಕಾಮಗಾರಿಗಳಿಗೆ ವಿಶೇಷ ಅನುದಾನ ಒದಗಿಸಲಾಗಿದೆ. ನಾಯಕ್ ಹಿತ್ಲು ಪರಿಸರದ ಸಾರ್ವಜನಿಕರು ಹಾಗೂ ಸ್ಥಳೀಯ […]

ಮಂಗಳೂರು : ಎಂಟು ಕೆರೆಗಳ ಅಭಿವೃದ್ಧಿಗೆ 3.65 ಕೋಟಿ ರೂ. ಬಿಡುಗಡೆ; ಶಾಸಕ ಕಾಮತ್

Saturday, December 14th, 2019
kamath

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಂಟು ಕೆರೆಗಳ ಅಭಿವೃದ್ಧಿಗೆ 3.65 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯ ಅನುದಾನದಡಿ ಈ ಹಣ ಬಿಡುಗಡೆಯಾಗಿದೆ. ಕೆರೆಗಳ ಅಭಿವೃದ್ಧಿ ಸದ್ಯದ ಅವಶ್ಯಕತೆಯಾಗಿದೆ‌. ಈ ನಿಟ್ಟಿನಲ್ಲಿ ಸದ್ಯ 8 ಕೆರೆಗಳ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು. ಕದ್ರಿ ಕೈ ಬಟ್ಟಲು ಕೆರೆ ಅಭಿವೃದ್ಧಿಗೆ 90 ಲಕ್ಷ ರೂ., ಜೋಗಿಮಠ […]

ಒಂದೇ ದಿನ 72 ಕಡೆಗಳಲ್ಲಿ ದಾಖಲೆಯ ಗುದ್ದಲಿಪೂಜೆ – ಶಾಸಕ ಕಾಮತ್

Friday, October 18th, 2019
Mangalore--south

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 72 ಕಡೆಗಳಲ್ಲಿ ಇಂದು ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯ ಮೇರೆಗೆ ಸ್ಥಳೀಯ ಮುಖಂಡರು ನೆರವೇರಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ವಿವಿಧ ವಾರ್ಡ್`ಗಳಾಗಿ ಇಂದು ಒಂದೇ ದಿನದಲ್ಲಿ ಒಟ್ಟು 72 ಕಾಮಗಾರಿಗಳಿಗೆ ಸ್ಥಳೀಯ ಮುಖಂಡರ ಮೂಲಕ ಗುದ್ದಲಿಪೂಜೆ ನೆರವೇರಿತು. ಲೋಕೋಪಯೋಗಿ ಇಲಾಖೆಯಿಂದ 6.29 ಕೋಟಿ ವೆಚ್ಚದಲ್ಲಿ ಒಟ್ಟು 28 ಕಾಮಗಾರಿಗಳು,ಸಾಮಾನ್ಯ ನಿಧಿ […]