“ಆರಾಟ” ಕನ್ನಡ ಸಿನಿಮಾ ಬಿಡುಗಡೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ: ರಾಜೇಶ್ ನಾಯ್ಕ್

Friday, June 21st, 2024
Arata-film

ಮಂಗಳೂರು: ಪಿ.ಎನ್.ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ “ಆರಾಟ” ಕನ್ನಡ ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆರಾಟ ಕನ್ನಡ ಸಿನಿಮಾ ನಮ್ಮ ಸಂಸ್ಕೃತಿಯನ್ನು, ನಮ್ಮ ಪರಂರೆಯನ್ನು ಬಿಂಬಿಸುವ ಸಿನಿಮಾ ಆಗಿದೆ. ಸಿನಿಮಾವನ್ನು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸ ಬೇಕೆಂದರು. ಮುಖ್ಯ ಅತಿಥಿ ಕಟೀಲು ಯಕ್ಷಗಾನ‌ ಮೇಳದ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ ಶುಭಹಾರೈಸಿದರು. ಸಮಾರಂಭದಲ್ಲಿ ಶಿವಪ್ರಸಾದ್ ಕಂಡೆಲ್ ಕಾರ್, ಶಿವಪ್ರಸಾದ್ಆಳ್ವ, ವಿಜಯಕುಮಾರ್ ಕೊಡಿಯಾಲ್ […]

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ, ಶಾಸಕ ರಾಜೇಶ್ ನಾಯ್ಕ್ ಖಂಡನೆ

Saturday, June 15th, 2024
Rajesh-Naik-Ulepady

ಬಂಟ್ವಾಳ : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏಕಾಏಕಿ ಶೇ.4ರಷ್ಟು ಹೆಚ್ಚಿಸಿದ ರಾಜ್ಯ ಸರಕಾರದ ನೀತಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಜನವಿರೋಧಿ ನೀತಿ ಕಾಂಗ್ರೆಸ್ ಸರ್ಕಾರ ತನ್ನ ಅಸಲಿ ಬುದ್ದಿಯನ್ಬು , ಜನವಿರೋಧಿ ನೀತಿಯನ್ನು ಮತ್ತೆ ಪ್ರದರ್ಶಿಸಿದೆ ಎಂದು ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆಯ ಮೂಲಕ ಜನರಿಗೆ ಮೋಸ ಮಾಡಿ ಅಧಿಕಾರ ಪಡೆದ ಕಾಂಗ್ರೆಸ್ ಸರಕಾರದ ಬೊಕ್ಕಸ ಖಾಲಿಯಾಗಿದ್ದು ಈಗ ತೆರಿಗೆ ಹೆಚ್ಳಳ ಮಾಡುವ ಮೂಲಕ […]

ಅಧಿಕಾರ ಪಡೆಯಲು ಮಾತ್ರ ಬಿಜೆಪಿ ಬಂದಿಲ್ಲ, ಬಲಿಷ್ಟ ಭಾರತದ ನಿರ್ಮಾಣಕ್ಕಾಗಿಯೇ ಬಿಜೆಪಿ : ಶಾಸಕ ರಾಜೇಶ್ ನಾಯ್ಕ್

Thursday, September 9th, 2021
Rajesh Naik

ಬಂಟ್ವಾಳ  : ಅಧಿಕಾರ ಪಡೆಯಲು ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಭಾರತೀಯ ಜೀವನ ಮೌಲ್ಯವನ್ನು , ಸಾರ್ವಭೌಮತ್ವ ವನ್ನು , ರಾಷ್ಟ್ರೀಯ ವಿಚಾರಗಳನ್ನು ಉಳಿಸುವ ಬೆಳೆಸುವ ಮೂಲಕ ಬಲಿಷ್ಟ ಭಾರತದ ನಿರ್ಮಾಣ ಕಾರ್ಯ ವೇ ಬಿಜೆಪಿ ಪಕ್ಷದ ತತ್ವವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ನೆಟ್ಲಮುಡ್ನೂರು ಗ್ರಾ.ಪಂ.ವ್ಯಾಪ್ತಿಯ 2 ಬೂತ್ ಗಳ ಅಧ್ಯಕ್ಷ ರುಗಳ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿದ 6 ನೇ ದಿನದ ಕಾರ್ಯಕ್ರಮ ದಲ್ಲಿ ಅವರು […]

ಮೂರನೇ ಅಲೆಯ ಜೊತೆಗೆ ಇನ್ನೆಷ್ಟು ಅಲೆಗಳು ಬಂದರೂ ಅದನ್ನು ಎದುರಿಸುವ ಶಕ್ತಿ ಮೋದಿ ಸರಕಾರಕ್ಕಿದೆ : ಶಾಸಕ ರಾಜೇಶ್ ನಾಯ್ಕ್

Tuesday, September 7th, 2021
Rajesh Naik

ಬಂಟ್ವಾಳ  : ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಲ್ಲಿರುವ ವರೆಗೆ ಕೊರೋನ ಮೂರನೇ ಅಲೆಯ ಜೊತೆಗೆ ಇನ್ನೆಷ್ಟು ಅಲೆಗಳು ಬಂದರೂ ಅದನ್ನು ಎದುರಿಸುವ ಶಕ್ತಿ ಭಾರತಕ್ಕೆ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಅರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ನಿಂದ ಜಗತ್ತಿನ ಸೂಪರ್ ಪವರ್ ದೇಶಗಳು ತತ್ತರಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ […]

ಬಿಸಿರೋಡು ಅಭಿವೃದ್ಧಿಗೆ ಸರ್ವ ಸಹಕಾರ : ಕಂದಾಯ ಸಚಿವ ಅಶೋಕ್

Monday, October 21st, 2019
bantwal development

ಮಂಗಳೂರು : ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ. ರೋಡು ಪೇಟೆಯ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕೆ ತೊಡಕಾಗಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಪೇಟೆಯ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಅವರು ಸೋಮವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಬಿ.ಸಿ. ರೋಡು ಅಭಿವೃದ್ಧಿ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. ಮುಖ್ಯವಾಗಿ ಬಿ.ಸಿ. ರೋಡ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ಸುವ್ಯಸ್ಥಿತ ರೀತಿಯಲ್ಲಿ ಇಲ್ಲದೇ ಇರುವುದು ಪ್ರಮುಖ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಹೆದ್ದಾರಿಯ […]

ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡಿ : ಶಾಸಕ ರಾಜೇಶ್ ನಾಯ್ಕ್

Thursday, May 24th, 2018
Rajesh Naik

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ಪ್ರಥಮ ಇಲಾಖಾ ಬೇಟಿ ತಹಶಿಲ್ದಾರರ ಕಚೇರಿ ಗೆ ಬೇಟಿ ನೀಡಿ ತಹಶಿಲ್ದಾರ ರವಿ ಜೊತೆ ಔಪಚಾರಿಕ ವಾಗಿ ಮಾತನಾಡಿದರು. ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಸಿಗುವಂತೆ ಮಾಡಿ, ಯಾವುದೇ ಇಲಾಖಾ ಸವಲತ್ತುಗಳನ್ನು ತಾರತಮ್ಯವಿಲ್ಲದೆ ಸರಿಯಾಗಿ ನೀಡುವಂತೆ ಹೇಳಿದರು. ಬಾಕಿ ಇರುವ ಎಲ್ಲಾ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ಶೀಘ್ರವೇ ನೀಡುವಂತೆಯೂ ತಿಳಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ […]