ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಕಿಂಗ್‌ಪಿನ್‌ ಶಿವಕುಮಾರ್ ಕೋವಿಡ್‌ನಿಂದ ಸಾವು

Wednesday, May 19th, 2021
shivakumar

ತುಮಕೂರು  : ಶಿಕ್ಷಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದ ವಿವಿಧ ಪಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ಕಿಂಗ್‌ಪಿನ್‌ ಶಿವಕುಮಾರ್ ಕೋವಿಡ್‌ನಿಂದ  ಸಾವನ್ನಪ್ಪಿದ್ದಾನೆ. ಶಿವಕುಮಾರ್ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಕಾಗ್ಗೆರೆ ಗ್ರಾಮದವರಾಗಿದ್ದು,  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಮಂಗಳವಾರ  ಸಾವನ್ನಪ್ಪಿದ್ದಾನೆ. ಮೇ 16ರಂದು ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಆತನಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಗುಬ್ಬಿ ಪೊಲೀಸ್‌ ಠಾಣೆಯಲ್ಲಿ 2011ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. 2012ರಲ್ಲಿ […]

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪೂರ್ವ ತಯಾರಿ ಅಗತ್ಯ : ಐಟಿಡಿಪಿ ಅಧಿಕಾರಿ ಶಿವಕುಮಾರ್ ಸಲಹೆ

Tuesday, January 7th, 2020
trining

ಮಡಿಕೇರಿ : ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಯುವ ಜನರು ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಸಲಹೆ ಮಾಡಿದ್ದಾರೆ. ನಗರದ ಬ್ಲಾಸಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಎಎಸ್ ಮತ್ತು ಐಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ನಡೆದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯ ತಯಾರಿ ಅತೀ […]

ಪ್ರೌಢಶಿಕ್ಷಣ ಇಲಾಖೆಯನ್ನು ಶೀಘ್ರ ಸರಿಪಡಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಎಬಿವಿಪಿ ಯಿಂದ ಪ್ರತಿಭಟನೆ

Friday, December 7th, 2018
protest

ಮಂಗಳೂರು: ಇಂದು ಮಣ್ಣಗುಡ್ಡ ಸರ್ಕಲಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಆ ಪ್ರತಿಭಟನೆಯಲ್ಲಿ ಮಹಾನಗರ ಕಾರ್ಯಕಾರಿಣಿ ಸದಸ್ಯರಾದ ಗಿರೀಶ್ ನಾಯಕ್ ರವರು ಈ ಕೆಳಗಿನಂತೆ ಮಾತನಾಡಿದರು ಮತ್ತು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು. ವಿದ್ಯಾರ್ಥಿ ಜೀವನದ ಮುಖ್ಯ ಘಟಕಗಳು ಎಂದರೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ. ಈ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸುವುದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ. ವಿಪರ್ಯಾಸವೆಂದರೆ ಸರ್ಕಾರದ ಒಳಜಗಳಗಳಿಂದ ತೆರವಾದ ಮಂತ್ರಿ ಸ್ಥಾನವನ್ನು ಇಲ್ಲಿವರೆಗೆ ಭರ್ತಿ ಮಾಡದೆ ಈ ರಾಜ್ಯ ಸರ್ಕಾರ ನಿರ್ಲಕ್ಷ್ಯ […]

ದಿಢೀರ್ ನಾಪತ್ತೆಯಾಗಿದ್ದ ಮಂಗಳೂರು ಯುವಕ ಕೇರಳದಲ್ಲಿ ಪತ್ತೆ: ಮದನ್ ಮೇಲಿದ್ದ ಅನುಮಾನಕ್ಕೆ ತೆರೆ!

Monday, December 3rd, 2018
Madan

ಮಂಗಳೂರು: ದಿಢೀರ್ ನಾಪತ್ತೆಯಾಗಿದ್ದ ಶಕ್ತಿನಗರದ ವಿನಾಯಕ್‌ ಎಂಬ ಯುವಕನನ್ನು ಕೇರಳದ ಕೊಚ್ಚಿನ್‌ ಪೊಲೀಸರು ಪತ್ತೆ ಮಾಡಿ ಉರ್ವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಮಾಜಿ ಪಿಎಸ್ಐ ಮದನ್ ಮೇಲಿದ್ದ ಅನುಮಾನಕ್ಕೆ ತೆರೆ ಬಿದ್ದಿದೆ. ಶಕ್ತಿನಗರದ ನಿವಾಸಿ ಆಟೋ ಚಾಲಕ ಶಿವಕುಮಾರ್-ಸಾಕಮ್ಮ ದಂಪತಿ ಪುತ್ರ ವಿನಾಯಕ ನ.8ರಂದು ಖಾಸಗಿ ಅಪಾರ್ಟ್‌ಮೆಂಟ್‌ನಿಂದ ನಾಪತ್ತೆಯಾಗಿದ್ದ. ವಿನಾಯಕ್ ನಾಪತ್ತೆ ಆಗಿರುವುದನ್ನು ನ.15ರಂದು ಮದನ್ ಕರೆ ಮಾಡಿ ಆತನ ಪೋಷಕರಿಗೆ ತಿಳಿಸಿದ್ದರು. ಬಳಿಕ ಹೆತ್ತವರು ಉರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪುತ್ರ […]

ಸಹೋದರನ ಅನಾರೋಗ್ಯದ ಕಾರಣದಿಂದಾಗಿ‌ ದೆಹಲಿಗೆ ತೆರಳಲಿಲ್ಲ: ಡಾ.ಜಿ. ಪರಮೇಶ್ವರ್

Wednesday, July 18th, 2018
g-parameshwar

ಬೆಂಗಳೂರು: ಸಹೋದರನ ಅನಾರೋಗ್ಯದ ಕಾರಣದಿಂದಾಗಿ‌ ದೆಹಲಿಗೆ ತೆರಳಲಿಲ್ಲ. ಇದರ ಹೊರತು ಬೇರೆ ಯಾವುದೇ ಕಾರಣ ಇಲ್ಲ, ಸರಿಯಾಗಿ ಆಹ್ವಾನ ಬಂದಿರಲಿಲ್ಲ ಎನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತುಗಳು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದಾರೆ. ವಿಧಾನಸೌಧದಲ್ಲಿ‌ ಸುದ್ದಿಗಾರರ ಜೊತೆ ಮಾತನಾಡಿದ ಅವರು , ನಮ್ಮ ಅಣ್ಣನ ಆರೋಗ್ಯ ಗಂಭೀರವಾಗಿದೆ. ಹೀಗಾಗಿ ನಾನು ದೆಹಲಿಗೆ ಹೋಗಲಿಲ್ಲ. ಕಾವೇರಿ ವಿಚಾರ ಸಭೆ ಸಂಬಂಧ ಸಂಸದರಿಗೆ ಮಾಹಿತಿ ನೀಡಿಲ್ಲ ಅನ್ನೋದು ತಪ್ಪು. ಎಲ್ಲರಿಗೂ ಸರ್ಕಾರದ ವತಿಯಿಂದ ಮಾಹಿತಿ ಹೋಗಿದೆ ಅನ್ನಿಸುತ್ತದೆ ಎಂದರು. […]

ಸಿಪಿಐಎಂ ಅಭ್ಯರ್ಥಿಯಾಗಿ ಯಾದವ ಶೆಟ್ಟಿ ನಾಮಪತ್ರ ಸಲ್ಲಿಕೆ

Tuesday, April 24th, 2018
yadav-shetty

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿಯಾಗಿ ಯಾದವ ಶೆಟ್ಟಿ ಸೋಮವಾರ ನಾಮಪತ್ರ ಸಲ್ಲಿಸಿದರು. ಸಮಾಜ ಮಂದಿರದಿಂದ ತನ್ನ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಕಚೇರಿಯವರಿಗೆ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಿದರು. ಪರಸಭಾ ಸದಸ್ಯೆ ರಮಣಿ, ಜಿ. ಸಮಿತಿ ಸದಸ್ಯರಾದ ಶಿವಕುಮಾರ್, ಸದಾಶಿವದಾಸ್ ಸಾಮೂಹಿಕ ಕಾರ್ಯಕರ್ತ ಉಪಸ್ಥಿತರಿದ್ದರು.

ನಾನು, ನನ್ನ ಮತ ಮಾರಾಟಕ್ಕಿಲ್ಲ :ಬಿ. ದಾಮೋದರ ಆಚಾರ್ಯ

Thursday, February 1st, 2018
davodar-acharya

ಬೈಂದೂರು: ರಾಜ್ಯಶಾಸ್ತ್ರ ಪ್ರಾಧ್ಯಾಪಕ ಶಿವಕುಮಾರ್ ಅವರಿಂದ ಜನತಂತ್ರ ವ್ಯವಸ್ಥೆಯಲ್ಲಿ ಮತದಾನದ ಮಹತ್ವದ ಕುರಿತು ಮೊದಲ ನುಡಿಯೇ ಮಕ್ಕಳಲ್ಲಿ ಆಸಕ್ತಿ ಕೆರಳಿಸಿತು. ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನದ ಮೂಲಕ ರಾಜ್ಯದ ಗಮನ ಸೆಳೆದಿರುವ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂ ದೋಲನದ ಸಂಚಾಲಕರಲ್ಲಿ ಒಬ್ಬ ರಾದ, ಕನ್‌ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ದಾಮೋದರ ಆಚಾರ್ಯ ಅವರಿಂದ ಅಪೇಕ್ಷಿತ ರಾಜಕೀಯ, ಸಾಮಾಜಿಕ ಬದಲಾವಣೆ ಸಹಭಾಗಿತ್ವ ಗಣತಂತ್ರದ ಮೂಲಕ ಸಾಧ್ಯ ಮತ್ತು ಯುವಜನತೆ ಹೇಗೆ […]

ಮಲವಂತಿಗೆ: ಮೌಸ್ ಹಿಡಿದು ಪ್ರೋಗ್ರಾಂಗಳನ್ನು ಬರೆದ ಕೈಗಳು ಈಗ ಗದ್ದೆ- ತೋಟಗಳಲ್ಲಿ ದುಡಿಯುತ್ತಿದೆ!

Friday, October 27th, 2017
shivakumar

ಮಂಗಳೂರು: ಬೆಂಗಳೂರಿನ ಮೋಹವನ್ನು ಬಿಟ್ಟು ಪ್ರಕೃತಿಯ ಮಡಿಲಲ್ಲಿ ಕೃಷಿ ಮಾಡುತ್ತಾ ಜೀವನ ನಡೆಸುತ್ತಿರುವ ಯುವಕನೊಬ್ಬನ ಜೀವನಗಾಥೆ ಇದು. ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಮೌಸ್ ಹಿಡಿದು ಪ್ರೋಗ್ರಾಂಗಳನ್ನು ಬರೆದ ಕೈಗಳು ಈಗ ಗದ್ದೆ- ತೋಟಗಳಲ್ಲಿ ದುಡಿಯುತ್ತಿದೆ.  ಚಿಂತಾಮಣಿ ಹಸಿರನ್ನು ಕಾಪಾಡುತ್ತಿರುವ ಹಿರಿಯ.. ನಿಜಕ್ಕೂ ಕೋಟಿಗೊಬ್ಬ! ಆತ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಶಿವಕುಮಾರ್. ಮೂಲತಃ ತುಮಕೂರಿನ ಬೈರಸಂದ್ರ ನಿವಾಸಿ. ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ. ಮಜಬೂತಾದ ಸಂಬಳ, ಜೊತೆಗೆ ದೇಶದ ನಾನಾ‌ ಭಾಗಗಳಿಗೆ ಸುತ್ತುವ‌ ಅವಕಾಶ. […]