ಬೆಂಗಳೂರು : ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ಪೊಲೀಸರ ದಾಳಿ

Wednesday, October 9th, 2019
parappana

ಬೆಂಗಳೂರು : ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಜೈಲಿನಲ್ಲೂ ಅಕ್ರಮ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ನಗರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಈ ದಾಳಿ ನಡೆದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ 60 ಮಂದಿ ತಂಡ ದಾಳಿ ನಡೆಸಿ ಕೈದಿಗಳ ವಿಚಾರಣೆ ನಡೆಸಿದೆ. ಜೈಲಿನೊಳಗೆ ಗಾಂಜಾ ಬಳಕೆಯಾಗುತ್ತಿದೆ ಎಂಬ ಆರೋಪದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಜೈಲಿನೊಳಗೆ ಮಾರಕಾಯುಧಗಳು […]

‘ಪೈಲ್ವಾನ್’ ಸಿನಿಮಾದ ಲಿಂಕ್​ ಶೇರ್​ ಮಾಡಿದ ಆರೋಪಿ ಸರೆ

Friday, September 20th, 2019
Rakesh-L

ಬೆಂಗಳೂರು : ಪೈಲ್ವಾನ್ ಚಿತ್ರದ ಪೈರಸಿ ಕಾಪಿಯನ್ನು ಸಾಮಾಜಿಕ ಜಾಲ ಬಳಕೆದಾರರಿಗೆ ಸಿಗುವಂತೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಕೇಶ್ ಎಲ್ ಅಲಿಯಾಸ್ ರಾಕೇಶ್ ವಿರಾಟ್ ಬಂಧಿತ ಆರೋಪಿ. ಈತ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ವಾರ್ ಗೆ ಕಾರಣನಾಗಿದ್ದ. ಈತ ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ನಿವಾಸಿಯಾಗಿದ್ದು ಇತ್ತೀಚೆಗೆ ಬಿಡುಗಡೆಯಾದ ಪೈಲ್ವಾನ್ ಕನ್ನಡ ಚಲನಚಿತ್ರದ ಪೈರಸಿ ಕಾಪಿ ಇರುವ ಲಿಂಕ್ಅನ್ನು ಜಾಲತಾಣ ಬಳಕೆದಾರರಿಗೆ ಮೆಸೆಂಜರ್ ಮೂಲಕ ಕಳುಹಿಸಿದ್ದ. ಹೀಗಾಗಿ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣ ಚಿತ್ರ […]

ಸಂದೀಪ್ ಪಾಟೀಲ್ ವರ್ಗಾವಣೆ, ನೂತನ ನಗರ ಪೊಲೀಸ್ ಕಮಿಷನರ್ ಆಗಿ ಎ ಸುಬ್ರಹ್ಮಣ್ಯೇಶ್ವರ ರಾವ್

Thursday, August 1st, 2019
subramaneshwara rao

ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು  ಡಿಐಜಿ ಮತ್ತು ಬೆಂಗಳೂರು ನಗರ ಅಪರಾಧ ಇಲಾಖೆಯ ಜಂಟಿ ಆಯುಕ್ತರಾಗಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ನೂತನ ಪೊಲೀಸ್ ಕಮಿಷನರ್ ಆಗಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ. ಸುಬ್ರಹ್ಮಣ್ಯೇಶ್ವರ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದರು. ಬಳಿಕ ಮೈಸೂರು ಕಮಿಷರನ್ ಆದರು. ಮತ್ತೆ ಬೆಂಗಳೂರು ಇಂಟೆಲಿಜನ್ಸ್ ಡಿಐಜಿಯಾಗಿ ಆಗಿ ಇದೀಗ […]

ಕಳವಾದ ಸ್ವತ್ತುಗಳನ್ನು ಮಾಲೀಕರುಗಳಿಗೆ ಮರಳಿಸಿದ ನಗರ ಪೊಲೀಸರು

Friday, April 26th, 2019
police property

ಮಂಗಳೂರು : 2018-19 ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಪತ್ತೆಯಾದ 3 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ ಸೊತ್ತು ಮಾಲೀಕರುಗಳಿಗೆ ಪ್ರಾಪರ್ಟಿ ರಿಟರ್ನ್‌ ಪರೇಡ್‌ನಲ್ಲಿ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಏ.26 ರ ನಗರದ ನೆಹರು ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಹಿಂತಿರುಗಿಸಿದರು. 2018 ನೇ ಸಾಲಿನಲ್ಲಿ ಒಟ್ಟು, 4 ಕೋಟಿಯ 30 ಲಕ್ಷದ ಮೌಲ್ಯದ ಸೊತ್ತು ಕಳವಾಗಿದ್ದು, ಅದರಲ್ಲಿ ಒಟ್ಟು 3 ಕೋಟಿ 40 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ […]