ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು- ಕಲ್ಲಡ್ಕ ಪ್ರಭಾಕರ ಭಟ್

Saturday, January 22nd, 2022
Kalikamba

ಮಂಗಳೂರು : ರಾಷ್ಟ್ರ ಮತ್ತು ಧರ್ಮ ವೈಶಿಷ್ಟ್ಯ ತೆಯೇ ಕಳೆದುಹೋಗಿದೆ. ನಾವು ಸೃಷ್ಟಿಯನ್ನು ಪೂಜಿಸುವವರು, ನಮಗೆ ಸಂಸ್ಕಾರ ನೀಡುವವಳೇ ತಾಯಿ, ಮಕ್ಕಳಲ್ಲೂ ತಾಯಿಯನ್ನು ಕಾಣುವ ಸಮಾಜ ನಮ್ಮದು, ಹಿಂದು ಸಮಾಜದ ಮೇಲೆ ಸಾಕಷ್ಟು ಆಕ್ರಮಣ ನಡೆದಿದೆ. ನಮ್ಮಮಕ್ಕಳಿಗೆ ನಮ್ಮತನವನ್ನು ತಿಳಿಸುವ ಕೆಲಸ ಆಗಬೇಕು, ನಮ್ಮ ಧರ್ಮ ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ, ಇವೆರಡೂ ಉಳಿದರೆ ಮಾತ್ರ ದೇಶ ಉಳಿಯಬಲ್ಲುದು, ಹಣದ ಹಿಂದೆ ಗುಣ ಬರುವುದಿಲ್ಲ, ಗುಣದ ಹಿಂದೆ ಹಣ ತನ್ನಷ್ಟಕ್ಕೆ ಬರುತ್ತದೆ. ಧರ್ಮಪ್ರಧಾನ ರಾಷ್ಟ್ರ ನಮ್ಮದಾಗಬೇಕು, ಹಿಂದು […]

ತುಳುವೆರೆ ಪಾರಂಪರಿಕ ಜ್ಞಾನ : ವಿಚಾರ ಸಂಕಿರಣ; ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು

Thursday, January 23rd, 2020
ujire

ಉಜಿರೆ : ಪ್ರಾಚೀನ ಮತ್ತು ಆಧುನಿಕತೆಯ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಮತ್ತು ವೈವಿಧ್ಯಮಯ ಹಿನ್ನೆಲೆ ಹೊಂದಿರುವ ತುಳುಭಾಷೆ ಮತ್ತು ಸಂಸ್ಕೃತಿ ಬಗ್ಯೆ ಕೇಳರಿಮೆ ಹೊಂದದೆ ಅಭಿಮಾನ, ಗೌರವದೊಂದಿಗೆ ಉಳಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ ಹೆಗ್ಗಡೆಯವರು ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಎಸ್.ಡಿ.ಎಂ.ತುಳುಪೀಠ ಮತ್ತು ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಕನ್ನಡ ವಿಭಾಗದ ತುಳು ಸಂಘದ ಜಂಟಿ ಆಶ್ರಯದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ತುಳುವೆರೆ ಪಾರಂಪರಿ ಕಜ್ಞಾನ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು […]

ಸಂಸ್ಕೃತಿಯೊಂದಿಗೆ ಬಾಷೆಯನ್ನು ಉಳಿಸಿ ಬೆಳೆಸಿದಲ್ಲಿ ಸಮ್ಮೇಳನವು ಸಾರ್ಥಕ : ಡಾ. ಸುನಿತಾ ಎಂ. ಶೆಟ್ಟಿ

Monday, January 20th, 2020
mumbai

ಮುಂಬಯಿ : ಎರಡೂ ದಿನಗಳ ಸಮ್ಮೇಳನವು ಬಹಳ ವಿಜ್ರಂಭಣೆಯಿಂದ ಜನಸಾಗರದ ಉಪಸ್ಥಿತಿಯಲ್ಲಿ ನಡೆದಿದೆ. ನಮ್ಮವರು ನಮ್ಮ ಸಂಸ್ಕೃತಿಯನ್ನು ಮರಾಠಿ ನೆಲದಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಕೇವಲ ಸಾಂಸ್ಕೃತಿಕ ಕಾರ್ಯವನ್ನು ನಡೆಸಿದರೆ ಸಾಲದು. ಪಾಲಕರು ತುಳು ಬಾಷೆಯನ್ನು ಮಾತನಾಡುತ್ತಿದ್ದರೂ ಮಕ್ಕಳು ತುಳು ಬಾಷೆಯಲ್ಲಿ ಮಾತನಾಡುವುದು ಬಹಳ ಕಡಿಮೆ. ಸ್ಥಳೀಯ ಬಾಷೆಯೊಂದಿಗೆ ನಮ್ಮ ಮಾತೃ ಬಾಷೆಯನ್ನು ಮಕ್ಕಳು ಮನೆಯಲ್ಲಿ ಮಾತನಾಡುವಂತಾಗಬೇಕು ಆಗ ಮಾತ್ರ ಇಂತಹ ಅದ್ದೂರಿಯ ಸಮ್ಮೇಳನವು ಸಾರ್ಥಕ ಎಂದು ಮುಂಬಯಿಯ ಹಿರಿಯ ಸಾಹಿತಿ ಡಾ. ಸುನಿತಾ ಎಂ. […]

ಇಂದಿನ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕಿಂತ ಹಿಂದಿನ ಗುರು ಕೇಂದ್ರಿತ ಶಿಕ್ಷಣ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗಿದೆ

Monday, January 13th, 2020
ujire

ಉಜಿರೆ : ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಹಾಗೂ ಇಂಗ್ಲೀಷ್ ಮಾಧ್ಯಮದ ವ್ಯಾಮೋಹದಿಂದ ಇಂದು ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೂಕ್ಮವಾದ ಬದುಕಿಗೆ ಜೀವನ ಮುಖಿಯಾದ ಹಾಗೂ ಸಮಾಜ ಮುಖಿಯಾದ ಶಿಕ್ಷಣ ನೀಡಬೇಕು. ಇಂದಿನ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕಿಂತ ಹಿಂದಿನ ಗುರು ಕೇಂದ್ರಿತ ಶಿಕ್ಷಣ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗಿದೆ. ಹಿಂದೆ ವಿದ್ಯಾರ್ಥಿಗಳು ಗುರುಗಳನ್ನು ಹುಡುಕಿಕೊಂಡು ಹೋಗುತ್ತಿದ್ದರೆ ಇಂದು ಗುರುಗಳೆ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗುವ ಸ್ಥಿತಿ ಬಂದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. […]

ಸಾಹಿತ್ಯ ಸಮ್ಮೇಳನ : ಬಹುತ್ವದ ಸಂಸ್ಕೃತಿಯ ಅನಾವರಣ; ಕಲ್ಕೂರ

Saturday, January 11th, 2020
kalkura

ಮಂಗಳೂರು : ತುಳುನಾಡಿನ ಬಹುತ್ವದ ಸಂಸ್ಕೃತಿಯು ಸಾಹಿತ್ಯ ಸಮ್ಮೇಳನದ ಮೂಲಕ ಅನಾವರಣಗೊಳ್ಳಲಿ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು. ಜನವರಿ 29ರಂದು ಸಂತ ಆಗ್ನೇಸ್‌ ಕಾಲೇಜಿನಲ್ಲಿ ಜರಗಲಿರುವ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮುಖ್ಯವಾಗಿ ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚು ಒಲವನ್ನು ತೋರಿಸಬೇಕು. ಈ ನೆಲೆಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವು ಪರಿಣಾಮಕಾರಿಯಾಗಿ ಯಶಸ್ಸನ್ನು ಕಾಣುವಂತಾಗಲೆಂದರು. ಈ ಸಂದರ್ಭ […]

ಹಬ್ಬಗಳಲ್ಲಿ ಪಾಲ್ಗೊಂಡು ಸಂಸ್ಕೃತಿಯನ್ನು ಜೀವಂತವಾಗಿಸಿ : ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಪೂಣಚ್ಚ ಕರೆ

Wednesday, December 25th, 2019
Bengaluru

ಮಡಿಕೇರಿ : ಕೊಡವರು ಬೆಂಗಳೂರಿನಂತಹ ದೂರದ ಪ್ರದೇಶಗಳಲ್ಲಿದ್ದರೂ ಕೂಡ, ತಮ್ಮ ವಿಶಿಷ್ಟ ಸಂಸ್ಕೃತಿಯ ಹಬ್ಬ ಹರಿದಿನಗಳ ಸಂದರ್ಭ ಕೊಡಗಿನ ತಮ್ಮ ಊರಿಗೆ ತಪ್ಪದೆ ಹಾಜರಾಗುವ ಮೂಲಕ ನಮ್ಮ ಆಚಾರ, ವಿಚಾರ, ಸಂಸ್ಕೃತಿಯ ಬೆಳವಣಿಗೆಗೆ ಕಾರಣರಾಗಬೆಕೆಂದು ಬೆಂಗಳೂರು ಕ್‌ಗ್ಗಟ್ಟ್ ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡಚಂಡ ಪೂಣಚ್ಚ ಕರೆ ನೀಡಿದ್ದಾರೆ. ಬೆಂಗಳೂರು ಕ್‌ಗ್ಗಟ್ಟ್ ನಾಡ್ ಕೊಡವ ಸಂಘದ ಸ್ಥಾಪಕ ಸದಸ್ಯರ ಒತ್ತೊರ್ಮೆ ಕೂಟ ಮಂಡಚಂಡ ಸುರೇಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಕೊಡವ ಸಮಾಜದ ಅಪ್ಪಚ್ಚಕವಿ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ […]

ಕೃಷಿಭೂಮಿ ಉಳಿದರೆ ಸಂಸ್ಕೃತಿ ಉಳಿಯುತ್ತದೆ : ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯ

Wednesday, December 25th, 2019
Ponnampete

ಮಡಿಕೇರಿ : ಕೃಷಿ ಸಂಸ್ಕೃತಿ ಹೊಂದಿರುವ ಕೊಡವರು ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲಿ ಆಯೋಜಿಸಿದ್ದ ಕೊಡವ ಸಾಂಸ್ಕೃತಿಕ ದಿನ ಮತ್ತು ಪುತ್ತರಿಕೋಲ್ ಮಂದ್ ನಮ್ಮೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೃಷಿ ಹಾಗೂ ಈ ಭೂಮಿಯೊಂದಿಗೆ ಕೊಡವರ ಅವಿನಾಭಾವ ಸಂಬಂಧವಿದೆ. […]

ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳನ್ನು ಗೌಡ ಜನಾಂಗ ಸದೃಢಗೊಳಿಸಬೇಕು : ಡಾ. ನಿರ್ಮಲಾನಂದ ಸ್ವಾಮೀಜಿ ಕರೆ

Wednesday, November 6th, 2019
madikeri

ಮಡಿಕೇರಿ : ಕೃಷಿಯನ್ನೇ ಪ್ರಧಾನ ವೃತ್ತಿಯನ್ನಾಗಿಸಿಕೊಂಡಿರುವ ಒಕ್ಕಲಿಗ ಸಮುದಾಯ ಇಂದು ಬೇರೆ ಬೇರೆ ಪ್ರಾಂತಗಳಲ್ಲಿ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಸಂಪ್ರದಾಯಗಳ ಪ್ರಭಾವದಿಂದ ವಿವಿಧ ಹೆಸರುಗಳಿಂದ ಕರೆದು ಕೊಂಡಿದ್ದಾರೆ. ಈ ನೂರಾರು ಪಂಗಡಗಳು ಮಲೆನಾಡು, ಬಯಲು ಸೀಮೆ, ಕೊಡಗು ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಮುಖಂಡತ್ವವನ್ನು ವಹಿಸಿ ಗೌಡರೆಂದು ಖ್ಯಾತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಸ್ವಾಮೀಜಿ ಕರೆ ನೀಡಿದರು. ಬೆಂಗಳೂರಿನ ಕೊಡಗು ಗೌಡ ಸಮಾಜದ […]

ಕೊಡಗಿನ ಮೂಲ ಸಂಸ್ಕೃತಿಯನ್ನು ಉಳಿಸುವುದು ಆದ್ಯ ಕರ್ತವ್ಯವಾಗಬೇಕು : ಮಾಜಿ ಸಚಿವ ಎಂ.ಸಿ.ನಾಣಯ್ಯ ಕಿವಿಮಾತು

Wednesday, October 30th, 2019
Kodava

ಮಡಿಕೇರಿ : ಕೊಡಗಿನ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕೊಡವನ ಆದ್ಯ ಕರ್ತವ್ಯವಾಗಬೇಕು ಎಂದು ಮಾಜಿ ಎಂ.ಸಿ.ನಾಣಯ್ಯ ಕಿವಿಮಾತು ಹೇಳಿದ್ದಾರೆ. ನಗರದ ಕೊಡವ ಸಮಾಜದಲ್ಲಿ ನಡೆದ 12 ಕೊಡವ ಕೇರಿಗಳ ನಡುವಿನ 6ನೇ ಕೊಡವ ಅಂತರಕೇರಿ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವಕೇರಿ ಎನ್ನುವುದು ಒಂದು ಕುಟುಂಬವಿದ್ದಂತೆ, ಪರಸ್ಪರ ಕಷ್ಟ ಸುಖಗಳಿಗೆ ಸ್ಪಂದಿಸುವ ವೇದಿಕೆ ಇದಾಗಿದ್ದು, ಸ್ವಾಭಿಮಾನಿ ಕೊಡವರು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಒಗ್ಗೂಡಬೇಕು ಎಂದರು. ಮೂಲ ನಿವಾಸಿ ಕೊಡವ ಯುವ ಸಮೂಹ ಉದ್ಯೋಗ […]

ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ: ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ

Friday, November 11th, 2016
alvas-chitrasiri

ಮಂಗಳೂರು: ಒಬ್ಬ ಚಿತ್ರ ಕಲಾವಿದ ಬಣ್ಣ ಮತ್ತು ರೇಖೆಗಳ ಮೂಲಕ ಜೀವನದ ವಿವಿಧ ಮಜಲುಗಳನ್ನು ಬಿಂಬಿಸುವ ಶಕ್ತಿಯನ್ನು ಹೊಂದಿದ್ದಾನೆ. ಕಲೆಯ ಬೆಳಕು ನಮ್ಮ ಮನಸ್ಸನ್ನು ಅರಳಿಸುವಂತಾಗಬೇಕು. ಧರ್ಮ, ನಂಬಿಕೆಗಳಿರುವ ಕಲಾವಿದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಏಕತೆಯನ್ನು ಮೂಡಿಸುವಂತಹ ಕೆಲಸವಾದಾಗ ರಾಷ್ಟ್ರ ಸಮೃದ್ಧವಾಗಿ ಬೆಳೆಯುತ್ತದೆ. ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳು ನಡೆಯಲಿರುವ […]