ಪತ್ರಕರ್ತರ ನಿವೇಶನಕ್ಕೆ ಶೀಘ್ರ ಕ್ರಮ: ಸಚಿವ ಖಾದರ್

Sunday, November 18th, 2018
press house

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಇತ್ಯರ್ಥಗೊಳಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು. ನಗರದ ಪತ್ರಿಕಾಭವನದಲ್ಲಿ ಶನಿವಾರ ಸಚಿವರು ಮತ್ತು ಪತ್ರಕರ್ತರ ಜತೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಪತ್ರಕರ್ತರ ಸಂಘಕ್ಕೆ ಈ ಭರವಸೆ ನೀಡಿದರು. ಸಮಾಜದ ಮುಖ್ಯ ಅಂಗವಾಗಿರುವ ಪತ್ರಕರ್ತರಿಗೆ ನಿವೇಶನ ಬೇಡಿಕೆಗೆ ಈಡೇರಿವು ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಗರಕ್ಕೆ ಬಂದಾಗ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು […]

ಸ್ಮಾರ್ಟ್ ಸಿಟಿ ಯೋಜನೆಯನ್ನು ದೇಶಕ್ಕೆ ಮಾದರಿಯಾಗುವಂತೆ ತಯಾರು ಮಾಡಲಾಗುತ್ತಿದೆ : ಸಚಿವ ಖಾದರ್

Monday, June 25th, 2018
UT Khader

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯನ್ನು ಪರಿಪೂರ್ಣವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಯೋಜನೆಯ ಆಡಳಿತ ನಿರ್ದೇಶಕರಿ(ಎಂ.ಡಿ.)ಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗುತ್ತಿದೆ. ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ತಯಾರು ಮಾಡಲಾಗುತ್ತಿದೆ. ಇದಕ್ಕಾಗಿ ಜನರೂ ಸ್ಮಾರ್ಟ್ ಆಗಬೇಕಾಗಿದೆ. ಜನರ ಸಹಭಾಗಿತ್ವವೂ ಅಗತ್ಯವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ಯೋಜನೆಗೆ ಸಂಬಂಧಿಸಿದಂತೆ ಆಡಳಿತ ನಿರ್ದೇಶಕರು ಪ್ರತೀ 15 ದಿನಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲು ಸೂಚಿಸಲಾಗಿದೆ ಎಂದು ಸಚಿವ ಖಾದರ್ ಹೇಳಿದರು. ನಗರದ ಮಲ್ಲಿಕಟ್ಟೆಯಲ್ಲಿರುವ ಕೆಯುಐಡಿಎಫ್‌ಸಿ ಕಚೇರಿಯಲ್ಲಿಂದು ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ […]

ದೇಶಕ್ಕೆ ಉತ್ತಮ ನಾಯಕನ ಅಗತ್ಯವಿದೆ: ಸಚಿವ ಖಾದರ್‌

Monday, January 1st, 2018
kader

ಮಂಗಳೂರು: ಅಶಿಸ್ತು, ಭ್ರಷ್ಟಾಚಾರ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ದೇಶಕ್ಕೆ ಭದ್ರ ಬುನಾದಿ ನೀಡುವ ಉತ್ತಮ ನಾಯಕರ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಅವರು ರವಿವಾರ ನಗರದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಷ್ಟ್ರೀಯಮಟ್ಟದ ರೋವರ್ಸ್‌ ಮತ್ತು ರೇಂಜರ್ಸ್‌ ಶಿಬಿರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಡಾಕ್ಟರ್, ಎಂಜಿನಿಯರ್ ಆಗಲು ಒಂದೊಂದು ಶಿಕ್ಷಣ ಸಂಸ್ಥೆಗಳಿರುವಂತೆ ಉತ್ತಮ ರಾಜಕಾರಣಿ ನಿರ್ಮಾಣ ಮಾಡುವ ಶಿಕ್ಷಣ ಸಂಸ್ಥೆಯ ಅಗತ್ಯವಿದೆ. ಸ್ಕೌಟ್ಸ್ ಮತ್ತು […]

ಜೆಸಿಬಿ ಯಂತ್ರ ಚಲಾಯಿಸಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಖಾದರ್

Monday, August 14th, 2017
jcb

ಮಂಗಳೂರು : ಮಂಗಳೂರು ಶಾಸಕ  ಯು.ಟಿ. ಖಾದರ್ ತನ್ನ  ಕ್ಷೇತ್ರದ ಮುಡಿಪು ರಸ್ತೆಯ ಕಾಮಗಾರಿಗೆ ಸೋಮವಾರ ಸಚಿವರೇ ಜೆಸಿಬಿ ಯಂತ್ರ ಹತ್ತಿ ಸ್ವತಃ ತಾವೇ ಜೆ.ಸಿ.ಬಿ ವಾಹನ ಚಲಾಯಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ  ಯು.ಟಿ. ಖಾದರ್ ಜೆಸಿಬಿ ಯಂತ್ರ ಚಲಾಯಿಸುವುದನ್ನು ಕಂಡ ನೆರೆದಿದ್ದ ಜನರು ಅಚ್ಚರಿ ಗೊಂಡರು. ಖಾದರ್ ದೂರದಿಂದ ಸಚಿವರ ಮುಖ ಪರಿಚಯ ಸ್ಪಷ್ಟವಾಗಿ ತಿಳಿಯದ ವ್ಯಕ್ತಿಯೊಬ್ಬರು, “ಇದೇನು? ಜೆ.ಸಿ.ಬಿ ವಾಹನ ಡ್ರೈವರ್ ಇಷ್ಟು ಟಿಪ್ ಟಾಪ್ ಆಗಿದ್ದಾರೆ ಅಲ್ವಾ?” ಎಂದು […]

ಕಡಲ್ಕೊರೆತ ಪ್ರದೇಶಗಳ ನಿವಾಸಿಗಳಿಗೆ ಪುನರ್ವಸತಿ: ಸಚಿವ ಖಾದರ್ ಸೂಚನೆ

Thursday, July 6th, 2017
Khader

ಮಂಗಳೂರು : ಉಳ್ಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀವರ್ಷ ಕಡಲ್ಕೊರೆತ ಸಮಸ್ಯೆಯಿಂದ ಸಂತ್ರಸ್ತರಾಗುವ ಜನತೆಗೆ ಇದರಿಂದ ಮುಕ್ತಿ ನೀಡಲು ಪರ್ಯಾಯ ನಿವೇಶನ ನೀಡಿ ಪುನರ್ವಸತಿ ಕಲ್ಪಿಸಲು ಆಹಾರ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಡಲ್ಕೊರೆತ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತೀವರ್ಷ ಕಡಲ್ಕೊರೆತದಿಂದ ತೀರ ಪ್ರದೇಶದ ನಿವಾಸಿಗಳು ಅತಂತ್ರರಾಗಿ ಭಯದಿಂದ ಬದುಕು ಸಾಗಿಸಬೇಕಾಗಿದೆ. ಸಂತ್ರಸ್ತ ಕುಟುಂಬಗಳ ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸಲು ಇಲ್ಲಿನ ಸಮುದ್ರ ತೀರ ಪ್ರದೇಶದಲ್ಲಿ […]