ಎಂಪಿಎಲ್‌: ಕ್ರಿಕೆಟ್ ತಂಡದ ಮಾಲೀಕರಾದ ಐವನ್ ಡಿಸೋಜಾ

Friday, February 16th, 2018
ivan-desouza

ಮಂಗಳೂರು: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಈಗ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. ಐವನ್ ಅವರು ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಸೀಸನ್-4ರ ಮೆಸ್ಟ್ರೋ ಟೈಟಾನ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. ಈ ತಂಡಕ್ಕೆ ಫೆ.17ರಂದು ಫಿಜಾಫೋರಂ ಮಾಲ್‌ನಲ್ಲಿ ಆಟಗಾರರ ಆಯ್ಕೆ ನಡೆಯಲಿದೆ. ತಂಡಕ್ಕೆ ಕಾನೂಟ್ ಫರ್ನಾಂಡಿಸ್ ಸಹ ಮಾಲೀಕರಾಗಿದ್ದು, ಅಲ್ಫೋನ್ಸ್ ಫರ್ನಾಂಡಿಸ್ ಪಾಲುದಾರರಾಗಿದ್ದಾರೆ. ಮಂಗಳೂರು, ಕೊಡಗು, ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರು ಪ್ರೀಮಿಯರ್ ಲೀಗ್(ಎಂಪಿಎಲ್-ಸೀಸನ್ 1,2,3) ಟಿ-20 ಕ್ರಿಕೆಟ್ ಪಂದ್ಯಗಳನ್ನು ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ […]

ಕೂಳೂರು: ಚತುಷ್ಪಥ ರಸ್ತೆ, ಕಸದ ಕೊಂಪೆ

Monday, October 9th, 2017
kuluru

ಮಂಗಳೂರು: ನಗರದ ತ್ಯಾಜ್ಯವನ್ನು ಕೂಳೂರು ಬಳಿಯ ಜಾಗದಲ್ಲಿ ತಂದು ಸುರಿಯಲಾಗುತ್ತಿದ್ದು, ಇದು ನಗರದ ಎರಡನೇ ಡಂಪಿಂಗ್‌ ಯಾರ್ಡ್‌ನಂತೆ ಕಂಡು ಬರುತ್ತಿದೆ. ಸಮೀಪದಲ್ಲೇ ಇರುವ ರಸ್ತೆಯಲ್ಲಿ ಸಾಗುವ ಜನರು ದುರ್ವಾಸನೆಯಿಂದ ಮೂಗು ಮುಚ್ಚಿ ನಡೆಯುವಂತಾಗಿದೆ. ಪಾದಚಾರಿ ಮಾರ್ಗ ಕಸದ ತೊಟ್ಟಿಯಾಗಿದ್ದು, ದಿನೇ ದಿನೇ ತ್ಯಾಜ್ಯವೂ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇದಾಗಿರುವುದರಿಂದ ಸ್ವತ್ಛತೆಗೆ ಧಕ್ಕೆ ತರುತ್ತಿದೆ. ಮಾತ್ರವಲ್ಲ, ತ್ಯಾಜ್ಯ ರಾಶಿಗೆ ನಾಯಿಗಳ ಹಿಂಡು ಬರುವುದರಿಂದ ದ್ವಿಚಕ್ರ ಸವಾರರಿಗೆ ಕಂಟಕವಾಗುತ್ತಿದೆ. ವಿವಿಧೆಡೆಯಿಂದ ರಾತ್ರಿ ವೇಳೆ ವಾಹನದಲ್ಲಿ ತಂದು ಹೆದ್ದಾರಿ ಬದಿಯೇ ನಿಲ್ಲಿಸಿ […]

ಕೇಂದ್ರ ಸರಕಾರ ಮೂರು ವರ್ಷಗಳ ಸಾಧನೆ ಬಗ್ಗೆ ಸಚಿವ ರಮಾನಾಥ ರೈ ಟೀಕೆ

Saturday, May 27th, 2017
Rai

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರು ವರ್ಷಗಳಲ್ಲಿ ಯಾವುದೇ ಸಾಧನೆಯನ್ನು ಮಾಡದೇ ಕಳಪೆ ಯೋಜನೆಗಳ  ಮೂಲಕ  ಬಾಯಿ ಬಡಾಯಿ ಸಾಧನೆಯನ್ನು ಮಾತ್ರವೇ ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಟೀಕಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರಕಾರ ಜಿಎಸ್‌ಟಿ ಜಾರಿಗೆ ತಂದಾಗ ಅದನ್ನು ವಿರೋಧಿಸಲಾಯಿತು. ಇದೀಗ ನಾವೇ ಅದನ್ನು ಜಾರಿಗೊಳಿಸಿರುವುದಾಗಿ ಎನ್‌ಡಿಎ ಸರಕಾರ ಕೊಚ್ಚಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಧಾರ್ ಬಗ್ಗೆಯೂ ಅಪಸ್ವರ […]