ದೇವರ ಹಣ ಕಳ್ಳತನ, ಕಳ್ಳನ ಪತ್ತೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ, ಎರಡೇ ದಿನದಲ್ಲಿ ಕಳ್ಳನನ್ನು ಕರೆಸಿಕೊಂಡ ದೇವರು

Saturday, August 1st, 2020
Mallipady

ಬೆಳ್ತಂಗಡಿ: ಕಳ್ಳನೊಬ್ಬ ದೇವರ ಹುಂಡಿಯಲ್ಲಿರುವ ಹಣವನ್ನು ಕಳುವು ಮಾಡಿರುವ ಘಟನೆ ಬೆಳ್ತಂಗಡಿ ಸಮೀಪ ನಡೆದಿದ್ದು ಕೇವಲ ಎರಡೇ ದಿನದಲ್ಲಿ ಕಳ್ಳನು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾನೆ. ಪಡಂಗಡಿಯ ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿಈ ಘಟನೆ ಸಂಭವಿಸಿದ್ದು, ಬರಾಯ ನಿವಾಸಿ ಶ್ರೀಧರ (36) ದೇವರ ಹಣ ಕದ್ದು ಸಿಕ್ಕಿಬಿದ್ದಿರುವ ವ್ಯಕ್ತಿ. ದೇವರ ಹಣ ಕಳ್ಳತನ ಆಗಿರುವ ವಿಷಯ ತಿಳಿದ ಕೂಡಲೇ ದೇವಾಲಯದ ಆಡಳಿತ ಮಂಡಳಿ ಹಾಗು ಊರವರು ಕಳ್ಳನ ಪತ್ತೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ದಿನಬೆಳಗಾಗೋ ಮುಂಚೆಯೇ […]

ಬದಿಯಡ್ಕ-ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ಅನುದಾನ

Wednesday, February 3rd, 2016
DD

ಬದಿಯಡ್ಕ: ಕಾಸರಗೋಡು ಜಿಲ್ಲೆಯ ಅನೇಕ ಜನರು ಅನಾದಿ ಕಾಲದಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಾಗಿದ್ದಾರೆ. ಹಾಗಾಗಿ ಕಾಸರಗೋಡು ಜಿಲ್ಲೆಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಂಧ್ಯಾ ವಿ.ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಸೋಮವಾರ ಬದಿಯಡ್ಕ ಸಮೀಪದ ಮುನಿಯೂರಿನ ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಲಭಿಸಿದ ಅನುದಾನ ರೂಪಾಯಿ 5 ಲಕ್ಷ ಮೌಲ್ಯದ ಡಿಡಿಯನ್ನು ಶ್ರೀ ಕ್ಷೇತ್ರದ ಮೊಕ್ತೇಸರ ಗೋಪಾಲಕೃಷ್ಣ ನಡುವಂತಿಲ್ಲಾಯ ಮುನಿಯೂರು ಅವರಿಗೆ […]

ನರಹರಿ ಬೆಟ್ಟದ ಸದಾಶಿವ ದೇವಸ್ಥಾನದಲ್ಲಿ ಅಸಂಖ್ಯಾತ ಭಕ್ತರಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ

Sunday, July 31st, 2011
Narahari-Parvata/ನರಹರಿ ಬೆಟ್ಟ ತೀರ್ಥಸ್ನಾನ

ವಿಟ್ಲ: ಭೂ ಲೋಕದ ಕೈಲಾಸ ಎಂದೇ ಪ್ರಸಿದ್ದವಾಗಿರುವ ತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಶನಿವಾರ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರದ್ದಾ ಭಕ್ತಿಯಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ ಮಾಡಿದರು. ನರಹರಿ ಬೆಟ್ಟ ಸಮುದ್ರ ಮಟ್ಟದಿಂದ ಸಾವಿರ ಅಡಿಗೂ ಹೆಚ್ಹು ಎತ್ತರದಲ್ಲಿದ್ದು ಪ್ರಕೃತಿಯ ಸೌಂದರ್ಯದ ನಡುವೆ ಸದಾಶಿವ ದೇವರ ಸಾನಿಧ್ಯವಿದೆ. ತುಳು ಪರಂಪರೆಯ ಆಟಿ ಅಮಾವಾಸ್ಯೆ ತೀರ್ಥಸ್ನಾನದ ಪವಿತ್ರ ದಿನದಂದು ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ […]