ಈಗ ಸರ್ಕಾರ ನಡೆಸುತ್ತಿರುವವರಿಗೆ ಮೀನುಗಾರರ ನೋವು ಗೊತ್ತಿಲ್ಲ : ಡಿ.ಕೆ.ಶಿವಕುಮಾರ್

Tuesday, July 6th, 2021
DK Shivakumar

ಮಂಗಳೂರು: ಕರಾವಳಿಯಲ್ಲಿ ಮೀನುಗಾರರ ಬೆಂಬಲವನ್ನೂ ದೊಡ್ಡಮಟ್ಟದಲ್ಲಿ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಆದರೆ ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಸಮುದ್ರದ ಜತೆಗಿನ ಬದುಕಿನಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಬದುಕುತ್ತಿರುವ ಸಮುದಾಯಕ್ಕೆ ಯಾವ ರೀತಿ ನೆರವಾಗಬಹುದು ಎಂದು ತಿಳಿಯಲು ಸ್ವತಃ ಬಂದಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಆಗ ಮೊಗವೀರರ ವಿವಿಧ ಸಾಲಗಳಿಗೆ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ಅವರು ಹೇಳಿದರು. ಸುಲ್ತಾನ್ ಬತ್ತೇರಿಯ ಬೋಳೂರು ಮೊಗವೀರ ಮಹಾಸಭಾ […]

ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲವಾದ ಮಹಿಳೆ, ಸಮುದ್ರಕ್ಕೆ ಹಾರಿ ಆತ್ಮಹತ್ಯೆ

Friday, October 30th, 2020
Usha

ಮಂಗಳೂರು : ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಶುಕ್ರವಾರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಚ್ಚಿಲದಲ್ಲಿ‌ ನಡೆದಿದೆ. ಇಲ್ಲಿನ ಸಂಕೊಳಿಗೆ ನಿವಾಸಿಯಾಗಿರುವ ಉಷಾ (60) ಎಂಬಾಕೆಯ ಮೃತದೇಹ ಉಚ್ಚಿಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮಾನಸಿಕವಾಗಿ ನೊಂದಿದ್ದ ಮಹಿಳೆ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎನ್ಎಂಪಿಟಿ ಗುತ್ತಿಗೆ ಬೋಟಿಗೆ ಗೆ ಸಿಲುಕಿದ್ದ ಬಲೆ ತೆಗೆಯುತ್ತಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು

Tuesday, August 11th, 2020
nmptboat

ಪಣಂಬೂರು: ನವಮಂಗಳೂರು ಬಂದರಿನಲ್ಲಿರುವ ಮಾಲಿನ್ಯ ಸ್ವಚ್ಚಗೊಳಿಸುವ ಗುತ್ತಿಗೆ ಬೋಟೊಂದರ ಪ್ರೊಫೈಲ್ಲರ್ ಗೆ ಸಿಲುಕಿದ್ದ ಬಲೆ ತೆಗೆಯಲು ಹೋದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನವಮಂಗಳೂರು ಬಂದರಿನಲ್ಲಿ ಮಂಗಳವಾರ ನಡೆದಿದೆ. ಬೈಕಂಪಾಡಿ ಸಮೀಪದ ಮೀನಕಳಿಯ ನಿವಾಸಿ ಪ್ರದೀಪ್(42) ಮೃತಪಟ್ಟವರು. ಮಂಗಳವಾರ ಮುಂಜಾನೆ ಬೋಟಿನ ಗುತ್ತಿಗೆದಾರ ಕಂಪನಿಯ ಸಿಬಂದಿ ಪ್ರದೀಪನನ್ನು ಬಲೆ ತೆಗೆಯಲು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದರೆ ನೀರಿನಲ್ಲಿ ಮುಳುಗುವಾಗ ಸಂದರ್ಭ ಸೂಕ್ತ ರಕ್ಷಣಾ ವ್ಯವಸ್ಥೆ ನೀಡದೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು ಐಪಿಸಿ […]

ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಬಾಲಕನ ಮೃತದೇಹ

Tuesday, October 8th, 2019
shahil

ಮಂಗಳೂರು : ಗೆಳೆಯರೊಂದಿಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಬಾಲಕನ ಮೃತದೇಹ ಇಂದು ಮಂಗಳೂರಿನ ಬೆಂಗರೆಯಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೆಂಗರೆ ನಿವಾಸಿ ಅಲ್ತಾಫ್ ಎಂಬವರ ಪುತ್ರ ಶಾಹಿಲ್ ( 16) ನಿನ್ನೆ ಸಮುದ್ರದಲ್ಲಿ ಗೆಳೆಯರೊಂದಿಗೆ ಆಟವಾಡುತ್ತಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು. ಮೃತ ಬಾಲಕ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಸಮುದ್ರಕ್ಕೆ ಇಳಿದಾಗ ಈ ದುರ್ಘಟನೆ […]

ಸಮುದ್ರದಲ್ಲಿ 2 ದೋಣಿಗಳು ಅಪಘಾತಕ್ಕೀಡಾಗಿ 12 ಮಂದಿ ಗಾಯ: ಲಕ್ಷಾಂತರ ರೂ.ಗಳ ನಷ್ಟ

Friday, August 26th, 2016
12-injured

ಕಾಸರಗೋಡು: ಕೀಯೂರು ಅಳಿವೆಬಾಗಿಲಿನಲ್ಲಿ ಇಂದು ಬೆಳಿಗ್ಗೆ ಎರಡು ದೋಣಿಗಳು ಅಪಘಾತಕ್ಕೀಡಾಗಿ 12 ಮಂದಿ ಗಾಯಗೊಂಡಿದ್ದಾರೆ. ದೋಣಿಗಳು ವ್ಯಾಪಕ ಹಾನಿಗೊಂಡಿದ್ದು, ಇಂಜಿನ್, ಬಲೆಗಳು ಪೂರ್ಣವಾಗಿ ನಾಶಗೊಂಡಿದೆ. ಸುಮಾರು 12 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ. ಅಪಘಾತದಲ್ಲಿ ಕೀಯೂರು ನಿಲಾಸಿಗಳಾದ ಉಮೇಶನ್ (35), ಅಬ್ದುಲ್ ಖಾದರ್ (31), ರಂಜಿತ್ (43), ವಿಜೇಶ್ (30), ಅಶೋಕನ್ 36), ಲಾಲು (30), ಸಾಯಿಬಾಬು (42), ಚಂದ್ರನ್ (40), ಶಶಿ (40), ಸಾಬಿತ್ (೩೫), ಬಿನು (35), ಕಾಸರಗೋಡು ಕಸಬ ಕಡಪ್ಪುರದ ಬಾಲನ್ (49) ಎಂಬಿವರು ಗಾಯಗೊಂಡಿದ್ದಾರೆ. […]