ನ.19ರಿಂದ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ

Tuesday, November 15th, 2022
ನ.19ರಿಂದ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ

ಬೆಳ್ತಂಗಡಿ: ಕರ್ನಾಟಕದ ಪುಣ್ಯ ಕ್ಷೇತ್ರಗಳಲೊಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನ.19ರಿಂದ ನ.23ರ ವರೆಗೆ ನೆರವೇರಲಿದೆ. ಕಾರ್ಯಕ್ರಮಗಳು ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆಯಲಿದ್ದು ನ.19ರಂದು ಹೊಸ ಕಟ್ಟೆ ಉತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ನ. 20ರಂದು ಕರೆ ಕಟ್ಟೆ ಉತ್ಸವ, ನ. 21ರಂದು ಲಲಿತೋದ್ಯಾನ ಉತ್ಸವ ಹಾಗೂ ಲಲಿತಕಲಾ ಗೋಷ್ಠಿ, ನ.22ರಂದು […]

ಸರ್ವಧರ್ಮ ಆಶಾಕಿರಣವಾಗಿರುವ ಅತ್ತೂರು ಚರ್ಚ್‌ ಲಕ್ಷಾಂತರ ಮಂದಿಗಳ ಇಷ್ಟಾರ್ಥಗಳನ್ನು ಈಡೇರಿಸಿದೆ: ಪ್ರಮೋದ್‌ ಮಧ್ವರಾಜ್‌

Tuesday, August 2nd, 2016
Pramod-Madwaraj

ಕಾರ್ಕಳ: ಇದೊಂದು ಐತಿಹಾಸಿಕ ದಿನ. ಸರ್ವಧರ್ಮ ಆಶಾಕಿರಣವಾಗಿರುವ ಈ ಅತ್ತೂರು ಚರ್ಚ್‌ ಲಕ್ಷಾಂತರ ಮಂದಿಗಳ ಇಷ್ಟಾರ್ಥಗಳನ್ನು ಈಡೇರಿಸಿದೆ. ಏಸು ಹೇಳಿದಂತೆ ಕಷ್ಟದಲ್ಲಿರುವ ಸಹೋದರ ಸಹೋದರಿಯರಿಗೆ ಸಹಾಯ ಮಾಡಿದರೆ ಅದು ನಮಗೆ ನಾವೇ ಮಾಡಿದ ಸಹಾಯ. ನಮಗೇ ಪುಣ್ಯ ಒಲಿಯುತ್ತದೆ ಎಂದು ಮೀನುಗಾರಿಕೆ, ಕ್ರೀಡೆ ಹಾಗೂ ಯುವಜನ ಸಬಲೀಕರಣ ಖಾತೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಅವರು ಸೋಮವಾರ ಕಾರ್ಕಳದ ನಿಟ್ಟೆ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರವನ್ನು ಮಹಾದೇವಾಲಯ (ಕಿರು ಬಸಿಲಿಕ) ಎಂದು […]

ದಿನದ ಗರಿಷ್ಟ ಸಮಯವನ್ನು ಕ್ಷೇತ್ರದ ಸಮಸ್ಯೆಗೆ ಮೀಸಲಿರಿಸುವ ಮಹಮ್ಮದ್ ಮುಸ್ತಾಫ

Wednesday, February 17th, 2016
musthafa

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 16 ನೇ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಸಮರ್ಥ ಅಭ್ಯರ್ಥಿಯಾಗಿ ಮಹಮ್ಮದ್ ಮುಸ್ತಾಫ ಇವರು ಸ್ಪರ್ಧಿಸುತ್ತಿದ್ದಾರೆ. ಸಾಧನೆಯ ಹಾದಿಯೆಡೆಗೆ ಸಾಧಿಸುವ ಛಲದೊಂದಿಗೆ ಗುರಿ ಮುಟ್ಟುವ ಹಾದಿ ಮಧ್ಯೆ ಕಠಿಣ ಸವಾಲನ್ನು ಮೆಟ್ಟಿನಿಂತು ವೃತ್ತಿ ಜೀವನದ ಜೊತೆಜೊತೆಗೆ ರಾಜಕೀಯ ಆಸಕ್ತಿಯಿಂದ ಅವಕಾಶವು ತನ್ನನ್ನು ಅರಸಿಕೊಂಡು ಬಂದಾಗ ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ 2000 ನೇ ಇಸವಿಯಲ್ಲಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೆಶ […]