ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ ಯುವಕ ನದಿ ಕಿನಾರೆಯಲ್ಲಿ ಶವವಾಗಿ ಪತ್ತೆ

Wednesday, June 23rd, 2021
Pahad

ಮಂಗಳೂರು : ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬನ ಮೃತ ದೇಹ  ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿದ್ದು ಇದು ಸಹಜ ಸಾವು ಅಲ್ಲ ಕೊಲೆ ಎಂಬ ಸಂಶಯವನ್ನು  ಕುಟುಂಬಸ್ಥರು ವ್ಯಕ್ತ ಪಡಿಸಿದ್ದಾರೆ. ಕೃಷ್ಣಾಪುರ ಕ್ರಾಸ್ ನಿವಾಸಿ ಮುಹಮ್ಮದ್ ಶರೀಫ್‌ ಹಾಜಿ ಪುತ್ರ ಮುಹಮ್ಮದ್ ಫಹಾದ್ ಮೃತದೇಹ ನದಿ ಕಿನಾರೆಯಲ್ಲಿ ಗುರುತು ಸಿಗಲಾರದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 19 ವರ್ಷದ ಮುಹಮ್ಮದ್ ಫಹಾದ್ ಝಮೀರ್ ಮೃತದೇಹವು ಸೋಮವಾರ ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿತ್ತು. ಘಟನೆಯ ಬಗ್ಗೆ ಸಂಶಯವಿರುವ ಕಾರಣ ಸೂಕ್ತ ತನಿಖೆ ನಡೆಸುವಂತೆ ಮನೆ […]

ಹಳೆಯಂಗಡಿ: ನೂತನ ಸೇತುವೆಯಿಂದ ಏಕಾಏಕಿ ನಂದಿನಿ ನದಿಗೆ ಹಾರಿದ ಯುವಕ

Friday, October 6th, 2017
haleyangadi

ಮಂಗಳೂರು: ಸಸಿಹಿತ್ಲು- ಕದಿಕೆಯ ನೂತನ ಸೇತುವೆಯಿಂದ ಅಪರಿಚಿತ ಯುವಕನೋರ್ವ ನಂದಿನಿ ನದಿಗೆ ಹಾರಿದ್ದಾನೆ ಎಂಬ ಮಾಹಿತಿಯಿಂದ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ತೀವ್ರ ಶೋಧ ನಡೆಸಿದ ಘಟನೆ ಅ. 5ರಂದು ನಡೆದಿದೆ. ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆಯಿಂದ ಏಕಾಏಕಿ ಯುವಕನೋರ್ವ ನದಿಗೆ ಹಾರಿದ್ದನ್ನು ಮಹಿಳೆಯೋರ್ವರು ನೋಡಿದ್ದಾರೆ ಎಂದು ಮೂಲ್ಕಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿತ್ತು. ತತ್‌ಕ್ಷಣ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಡಿದರು ಆನಂತರ ಮಂಗಳೂರಿನಿಂದ ಬಂದ ಅಗ್ನಿಶಾಮಕ ದಳದವರು […]

ಕರಾವಳಿಯ ಪ್ರವಾಸೋದ್ಯಮದಿಂದ ದೂರ ಉಳಿದ ಸಸಿಹಿತ್ಲು !

Monday, January 28th, 2013

ಮಂಗಳೂರು : ನಂದಿನಿ ಮತ್ತು ಶಾಂಭವಿ ನದಿಗಳು ಅರಬ್ಬಿ ಸಮುದ್ರಕ್ಕೆ ಸೇರಿ ತ್ರಿವೇಣಿ ಸಂಗಮದ ಕೇಂದ್ರ ಬಿಂದು ಎಣಿಸಿರುವ ಸಸಿಹಿತ್ಲು ಎಂಬ ಪುಟ್ಟ ಗ್ರಾಮಕ್ಕೆ ತನ್ನ ಅಜ್ಞಾತವಾಸ ಮತ್ತೂ ಮುಂದುವರಿಯುವ ಆತಂಕ ಎದುರಾಗಿದೆ. ಒಂದು ಕಡೆ ನದಿ ಕಡಲಿನ ತ್ರಿವೇಣಿ ಸಂಗಮದ ಅಳಿವೆ ಬಾಗಿಲು, ಸಸಿಹಿತ್ಲು ಕಡೆಯ ಜಾಗವನ್ನು ಕಬಳಿಸುತ್ತಾ ಬರುತ್ತಿದೆ. ಮತ್ತೊಂದು ಕಡೆ ಮೂರು ದಶಕದಿಂದ ಭರವಸೆಯಾಗಿರುವ ಸಸಿಹಿತ್ಲು ನಂದಿನಿ ನದಿ ಸೇತುವೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ. ಪ್ರವಾಸೋದ್ಯಮದ ಪಟ್ಟಿಯಲ್ಲಿ ಹೆಸರು ಪಡೆದಿರುವ ಸಸಿಹಿತ್ಲು ಗ್ರಾಮದತ್ತ […]