ಜಯಶ್ರೀಯವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ: ಹರೀಶ್‌ ಆಚಾರ್‌

Friday, August 13th, 2021
Jayashree

ಮಂಗಳೂರು: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ತಮ್ಮ 44 ನೇ ವಯಸ್ಸಿನಲ್ಲಿ ಎಸ್‌.ಎಸ್‌.ಎಲ್‌.ಸಿ ಪಾಸಾಗಿ ಅಪೂರ್ವ ಸಾಧನೆ ಮಾಡಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಗುಮಾಸ್ತರಾಗಿರುವ ಜಯಶ್ರೀ ಅವರನ್ನು ಶುಕ್ರವಾರ ಜಿಲ್ಲೆಯ ಸಹಕಾರಿ ರಂಗದ ಧುರೀಣರು ಭೇಟಿಮಾಡಿ ಆತ್ಮೀಯವಾಗಿ ಸನ್ಮಾನಿಸಿದರು. ವಿಶ್ವಕರ್ಮ ಕೋಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಮತ್ತು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಗಳ ಅಧ್ಯಕ್ಷ ಹರೀಶ್‌ ಆಚಾರ್‌, ಕರಾವಳಿ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎ ಎಸ್‌ ವೆಂಕಟೇಶ್‌, ಒಡಿಯೂರು ವಿವಿದೋದ್ಧೇಶ ಸಹಕಾರಿ ನಿಯಮಿತದ […]

ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಹೇಗೆ ?

Wednesday, July 19th, 2017
Alvas Botany

ಮೂಡುಬಿದಿರೆ: ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಮತ್ತು ಉಪಯೋಗ ಎನ್ನುವ ವಿಷಯದ ಕುರಿತು ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕೇರಳ ನೀಲಂಬೂರಿನ ಕೆಎಫ್‍ಆರ್‍ಐ ಸಹಸಂಸ್ಥೆಯ ವಿಜ್ಞಾನಿ ಡಾ.ಯು.ಎಮ್. ಚಂದ್ರಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ಬುಡಕಟ್ಟು ಜನಾಂಗದವರ ಕೃಷಿಪದ್ಧತಿ ಮತ್ತು ಅವರ ವೈಜ್ಞಾನಿಕ ದೃಷ್ಠಿಕೋನವನ್ನು ತುಲನಾತ್ಮಕ ಸಂಶೋಧನೆಗೆ ಒಳಪಡಿಸಿ ದೊರೆತಿರುವ ಫಲಿತಾಂಶದ ವಿವರವನ್ನು ವಿಮರ್ಶಾತ್ಮಕವಾಗಿ ಪ್ರಸ್ತುತ ಪಡಿಸಿದರು. ಪಾರಂಪರಿಕ ಆಹಾರ ಪದ್ಧತಿಯ ಶ್ರೇಷ್ಠತೆಯನ್ನು ಮತ್ತು ಆ […]