ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮನಾಥ ಹೆಗ್ಡೆ ಸಂತಾಪ ಸೂಚಕ ಸಭೆ

Monday, January 29th, 2024
Ramanatha-Hegde

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಪಳ್ಳಿ ರಮನಾಥ ಹೆಗ್ಡೆ ಅವರ ನಿಧನಕ್ಕೆ ದೇವಸ್ಥಾನದ ವತಿಯಿಂದ ಸಂತಾಪ ಸೂಚಕ ಸಭೆಯು ಸೋಮವಾರ ಕ್ಷೇತ್ರದ ಕಲಾಮಂಟಪದಲ್ಲಿ ನಡೆಯಿತು. ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪಳ್ಳಿ ರಮನಾಥ ಹೆಗ್ಡೆ ಅವರು, ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ನಗರದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸ್ಥಳೀಯ ಕಾರ್ಪೋರೇಟರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು […]

ಕಾಂಗ್ರೆಸ್ಸಿನಿಂದ ಪ್ರಭಲ ಸ್ಪರ್ಧಿ ಕಣಕ್ಕೆ , ವಿಧಾನ ಪರಿಷತ್ ಚುನಾವಣಾ ಸ್ಪರ್ಧಾಕಣದಿಂದ ಹಿಂದೆ ಸರಿದ ಡಾ ಎಂ. ಎನ್. ರಾಜೇಂದ್ರ ಕುಮಾರ್

Saturday, November 20th, 2021
mn Rajendra-Kumar

ಮಂಗಳೂರು  : ಅದ್ದೂರಿಯಾಗಿ ಚುನಾವಣಾ ಕಚೇರಿಯನ್ನು ತೆರೆದು ವಿಧಾನ ಪರಿಷತ್ ಚುನಾವಣೆ ಸ್ಪರ್ಧೆಗೆ ಇಳಿದಿದ್ದ ಎಸ್‍ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್ ಅವರು ಕೊನೆಯ ಕ್ಷಣದಲ್ಲಿ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದಾರೆ. ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತನಾಗಿ ಉಳಿಯುವ ಬಯಕೆ ನನ್ನದು, ಹೀಗಾಗಿ ರಾಜಕೀಯ ದಿಂದ ದೂರವಿದ್ದು, ಸಹಕಾರಿ ಕ್ಷೇತ್ರದ ಉನ್ನತಿಗೆ ಶ್ರಮಿಸುತ್ತೇನೆ ಎಂದರು. ಕಳೆದ 35 ವರ್ಷಗಳಿಂದ ಸಹಕಾರ ರಂಗದಲ್ಲಿದ್ದೇನೆ. ರಾಜಕೀಯ ಬೇಡ, ಸಹಕಾರಿ ಕ್ಷೇತ್ರಕ್ಕೂ ರಾಜಕೀಯ ತರುವುದಿಲ್ಲ […]

ಕೇಂದ್ರ ಸಂಪುಟದಲ್ಲಿ ಸಹಕಾರಿ ಸಚಿವಾಲಯ ಸ್ಥಾಪನೆ ಸ್ವಾಗತಾರ್ಹ : ಕೊಡವೂರು ರವಿರಾಜ ಹೆಗ್ಡೆ

Thursday, July 8th, 2021
Raviraja Hegde

ಮಂಗಳೂರು  : ಕೇಂದ್ರ ಸಂಪುಟದಲ್ಲಿ ಪ್ರಥಮ ಬಾರಿ ಸಹಕಾರಿ ಸಚಿವಾಲಯ ಸ್ಥಾಪಿಸಿದ್ದು, ಸಹಕಾರಿ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಸ್ವಾಗತಾರ್ಹ ಮತ್ತು ಅಭಿನಂದನೀಯ. 97ನೇ ಸಂವಿಧಾನಿಕ ತಿದ್ದುಪಡಿಯಂತೆ ರಾಜ್ಯಗಳ ಸಹಕಾರಿ ಕಾಯ್ದೆಯಲ್ಲಿ ಪುನರಪಿ ಸಂಘಗಳ ಸ್ವಾಯತ್ತತೆ ಮತ್ತು ಸ್ವ್ವಾವಲಂಬನೆಗೆೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆವಿದೆಯೆಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೊಡವೂರು ರವಿರಾಜ ಹೆಗ್ಡೆಯವರು ತಿಳಿಸಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂಸದರಾದ ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿ ಮಂಡಲಕ್ಕೆ ಸ್ಥಾನ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಿರುತ್ತಾರೆ.

ಮಾ.2ರಂದು ಬೆಂಗಳೂರಿನಲ್ಲಿ‌ ಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕ್​ಗಳ ಸಭೆ : ಸಚಿವ ಎಸ್.ಟಿ.ಸೋಮಶೇಖರ್

Thursday, February 27th, 2020
S-T-Somashekhar

ಮಂಗಳೂರು : ಸಹಕಾರಿ ಕ್ಷೇತ್ರಗಳು ಹಾಗೂ ಬ್ಯಾಂಕ್ಗಳು ಆದಾಯ ತೆರಿಗೆ ಇಲ್ಲದ ಸಂದರ್ಭ ಯಾವ ರೀತಿ ಇತ್ತು, ಆದಾಯ ತೆರಿಗೆ ಅಳವಡಿಸಿದ ಬಳಿಕ ಯಾವ ರೀತಿಯ ಪರಿಣಾಮವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಮಾರ್ಚ್ 2ರಂದು ಬೆಂಗಳೂರಿನಲ್ಲಿ‌ ಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕ್ಗಳ ಸಭೆ ಕರೆಯಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ನಗರದ ಕೊಡಿಯಾಲ್ ಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮಾಹಿತಿಗಳನ್ನು ಮುಖ್ಯಮಂತ್ರಿಯವರ ಮುಖಾಂತರ ಹಣಕಾಸು […]

ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಬಲಪಡಿಸಲು ಹರೀಶ್ ಆಚಾರ್ ಕರೆ

Friday, July 11th, 2014
Harish Achar

ಮಂಗಳೂರು : ಸಹಕಾರಿ ಕ್ಷೇತ್ರಗಳ ಎಲ್ಲಾ ರಂಗಗಳನ್ನು ಬಲಪಡಿಸಬೇಕಾಗಿದೆ. ಸಹಕಾರಿ ರಂಗದಲ್ಲಿ ಮಹಿಳಾ ಕ್ಷೇತ್ರ, ಕೈಗಾರಿಕಾ ಕ್ಷೇತ್ರ, ಮೀನುಗಾರಿಕಾ ಕ್ಷೇತ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇತ್ರಗಳನ್ನು ಹೆಚ್ಚು ಸಕ್ಷಮವಾಗಿ ಮತ್ತು ಪರಿಣಾಮಕಾರಿಯಾಗಿ ಬೆಳಸಬೇಕಾಗಿದೆ. ಇಂತಹ ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಒತ್ತು ನೀಡುವ ಮುಖಾಂತರ ಸಹಕಾರಿ ರಂಗವನ್ನು ಬಲಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳಲಿದೆ ಎಂದು ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ […]