ಬಕ್ರೀದ್ ದಿನದಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ, ಪ್ರಾಣಿ ವಧೆ ಮತ್ತು ಬಲಿದಾನ ಮಾಡುವಂತಿಲ್ಲ

Friday, July 16th, 2021
Bakrid

ಮಂಗಳೂರು : ಕೋವಿಡ್-19 ಹಿನ್ನೆಲೆಯಲ್ಲಿ  ರಾಜ್ಯಾದ್ಯಂತ ಜು.21ರಂದು ನಡೆಯುವ ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯ ಸರಕಾರವು  ಮಾರ್ಗಸೂಚಿಯನ್ನು ಪ್ರಕಟಿಸಿದೆ. ಬಕ್ರೀದ್ ದಿನದಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಝ್)ಗೆ ನಿರ್ಬಂಧ ಹೇರಲಾಗಿದೆ. ಮಸೀದಿಗಳಲ್ಲಿ 50 ಮಂದಿಗಿಂತ ಹೆಚ್ಚು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು. ಒಂದು ವೇಳೆ ಅಧಿಕ ಮಂದಿ ಮಸೀದಿಗೆ ಆಗಮಿಸಿದರೆ ಹಂತ ಹಂತವಾಗಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಬಹುದಾಗಿದೆ. ಮಸೀದಿಗಳಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು, 65 ವರ್ಷ ಮೇಲ್ಪಟ್ಟವರು ಮತ್ತು 10 […]

ರೊಜಾರಿಯೋ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್ ಸಾಮೂಹಿಕ ಪ್ರಾರ್ಥನೆ

Friday, December 25th, 2020
Bhisop

ಮಂಗಳೂರು : ರೊಜಾರಿಯೋ ಕೆಥೆಡ್ರಲ್‌ನಲ್ಲಿ ಗುರುವಾರ ರಾತ್ರಿ ಬಿಷಪ್ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನಡೆಯಿತು. ಕೆಥೆಡ್ರಲ್‌ನ ರೆಕ್ಟರ್ ವಂ. ಆಲ್ಪ್ರೆಡ್ ಜೆ.ಪಿಂಟೋ, ಸಹಾಯಕ ಗುರು ವಂ. ವಿನೋದ್ ಲೋಬೋ, ರೊಸಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ವಿಕ್ಟರ್ ಡಿಸೋಜ ಭಾಗವಹಿಸಿದ್ದರು. ಕೊರೋನ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೆಡೆ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿದೆ. ಈ ಬಾರಿ ಸಾಂತಾಕ್ಲಾಸ್ ಸಂಭ್ರಮವೂ ಇರುವುದಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ […]

ಮಂಗಳೂರು ಶರವು ಕ್ಷೇತ್ರದಲ್ಲಿ ಪ್ರದೀಪ ಕಲ್ಕೂರ ನೇತೃತ್ವದಲ್ಲಿ ಪೇಜಾವರ ಶ್ರೀಗಳ ಚೇತರಿಕೆಗಾಗಿ ಸಾಮೂಹಿಕ ಪ್ರಾರ್ಥನೆ

Tuesday, December 24th, 2019
sharavu

ಮಂಗಳೂರು : ಪೇಜಾವರ ಶ್ರೀಗಳು ಶ್ರೀಘ್ರ ಗುಣಮುಖವಾಗಲೆಂದು ಎಸ್. ಪ್ರದೀಪಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ ನಗರದ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಡಾ. ವಾಮನ ಶೆಣೈ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖ ಎಂ. ಬಿ. ಪುರಾಣಿಕ್, ಉದ್ಯಮಿ ಹಾಗೂ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಉಪಾಧ್ಯಕ್ಷ ರಘುನಾಥ ಸೋಮಯಾಜಿ, ಮಾಜಿ ಮೇಯರ್ ಭಾಸ್ಕರ ಮೊಲಿ, […]

ಮಳೆಗಾಗಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

Wednesday, May 15th, 2019
Prayer

ಮಂಗಳೂರು : ರಂಜಾನ್ ಮಾಸದಲ್ಲಿ ದಕ್ಷಿಣ ಕನ್ನಡದ ಬರಗಾಲದ ಛಾಯೆ ಆವರಿಸಿದ್ದು ಜನ ನೀರಿಗಾಗಿ ಪರದಾಡುತ್ತಿದ್ದಾರೆ  ಹೀಗಾಗಿ ಮುಸ್ಲಿಮರು ಬುಧವಾರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ನೆಹರೂ ಮೈದಾನದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ಮುಸ್ಲಿಮರು ಶೇಖ್ ಸಕೀಬ್ ಸಲೀಂ ಉಮ್ರಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿದರು. ರಂಜಾನ್ ಮಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಈಡೇರುತ್ತದೆ ಎಂದು ಎಲ್ಲರು ಒಟ್ಟಿಗೆ ಸೇರಿ ಪ್ರಾರ್ಥನೆ ಸಲ್ಲಿಸಿರುವರು. ಅಲ್ಲಾಹು ಮನಸ್ಸು ಮಾಡಿದರೆ ಮಳೆ ಬರುವುದು. ಮಳೆ ಬಂದರೂ ಕಷ್ಟ ಬರದೇ ಇದ್ದರೂ […]

ಕಟೀಲು ದೇವಿಯ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ

Tuesday, September 6th, 2016
mass-prayers

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ರವಿವಾರ ಭಜನ ತಂಡಗಳಿಂದ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಎಕ್ಕಾರು ಭಜನ ತಂಡದವರು ಭಜನೆ ಮಾಡುತ್ತ ಪಾದಯಾತ್ರೆ ಮೂಲಕ ಕಟೀಲಿನ ಸರಸ್ವತೀ ಸದನಕ್ಕೆ ಆಗಮಿಸಿದ ಬಳಿಕ ಮಾಣಿಲದ ಶ್ರೀ ಮೋಹನದಾಸ ಸ್ವಾಮಿಜಿಯವರು ಭಜನೆ ಮಾಡುತ್ತ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕನ್ಯಾನದ ಶ್ರೀ ಮಹಾಬಲ ಸ್ವಾಮೀಜಿ, ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ| ರವೀಂದ್ರನಾಥ […]