ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ನಿಧನ

Thursday, November 2nd, 2023
shekar-Ajekar

ಕಾರ್ಕಳ : ಅಜೆಕಾರು ಗ್ರಾಮದ ನಿವಾಸಿ ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು (54) ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶೇಖರ್ ಅಜೆಕಾರ್ ಇವರು, ಮಕ್ಕಳ ಸಾಹಿತ್ಯದ ಕುರಿತು ಹೆಚ್ಚು ಆಸಕ್ತಿ ವಹಿಸಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು . ಬೆಳದಿಂಗಳ ಸಾಹಿತ್ಯ ಕೂಟ ಸಹಿತ ಹಲವು ಸಾಹಿತ್ಯಕೂಟಗಳನ್ನು ಸಂಘಟಿಸುವುದರ ಮೂಲಕ ಕರಾವಳಿ ಪರಿಸರದಲ್ಲಿ ಜನಪ್ರಿಯರಾಗಿದ್ದ ರಲ್ಲದೆ ಮುಂಬೈ ಸಹಿತ ಹಲವೆಡೆ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಬೆಂಗಳೂರು […]

‘ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ’ : ಸಾಹಿತಿ ರಘು ಇಡ್ಕಿದು

Sunday, October 3rd, 2021
Raghu Idkidu

ಮಂಗಳೂರು : ‘ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ. ಮನುಷ್ಯರೊಳಗಿನ ಪ್ರೇಮ ಭಾವ ಹೊರಬಾರದೇ ಹೋದರೆ ಸಮಾಜದಲ್ಲಿ ದ್ವೇಷ ಅಸೂಯೆ ಮತ್ಸರ ಮನೆ ಮಾಡುತ್ತದೆ. ಹಾಗಾಗಿ ಪ್ರೇಮ ಕವಿತೆಗಳಿಗೂ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಮ ಕವಿತೆಗಳನ್ನು ಬರೆಯುವ ಕವಿಗಳು ಕಡಿಮೆಯಾಗಿದ್ದಾರೆ. ಟೀಕೆಗಳು ಬರಬಹುದು ಎಂಬ ಕಾರಣಕ್ಕೆ ಕವಿಗಳು ಹಿಂಜರೆಯುತ್ತಿರಬಹುದು ಅಥವಾ ಸಮಾಜದ ದುಗುಡಗಳಿಂದಲೇ ಪ್ರೇಮ ಕವಿತೆಗಳು ಹುಟ್ಟದಿರಬಹುದು. ಕವಿಯಾದವನಿಗೆ ದೇಶ,ಭಾಷೆ,ಜಾತಿ,ಪಂಥ,ಕಾಲ ವಯಸ್ಸುಗಳೆಂಬ ಹಂಗುಗಳಿರುವುದಿಲ್ಲ. ಹಾಗಾಗಿ ಪ್ರೇಮ ಕವಿತೆಯನ್ನು ಯುವಕರೇ ಬರೆವಬೇಕೆಂದೇನಿಲ್ಲ ಆ ವಯಸ್ಸು ಮೀರಿದ ಮೇಲೂ ಬರೆಯಬಹುದು. […]

ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ ನಿಧನ

Friday, October 1st, 2021
Farooq Gudinabali

ಬಂಟ್ವಾಳ : ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ( 38) ಅವರು ಸುದೀರ್ಘ ಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ಗೂಡಿನಬಳಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಿವಿಧ ಪತ್ರಿಕೆಗಳಿಗೆ ಬಂಟ್ವಾಳದಿಂದ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿಯಾಗಿರುವ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗ್ರಾಪಂ.ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ ಬಗ್ಗೆಯು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ‌ ಸಾಮಾಜಿಕ ಚಟುವಟಿಕೆಯಲ್ಲಿಯು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ತಾಯಿ,ಪತ್ನಿ ಹಾಗೂ ಒಂದು ಹೆಣ್ಣುಮಗುವನ್ನು ಅಗಲಿದ್ದಾರೆ.ಇವರ ನಿಧನಕ್ಕೆ […]

ಸಾಹಿತಿ, ಕಲಾವಿದರ ಕ್ಷೇಮಾಭಿವೃದ್ಧಿ ವೇದಿಕೆಯ ಎಲ್ಲ ಅಕಾಡೆಮಿಗಳ ವಿಸರ್ಜನೆಗೆ ಖಂಡನೆ

Friday, May 28th, 2021
kalavida

ಬೆಂಗಳೂರು : ರಾಜ್ಯ ಸಾಹಿತಿ, ಕಲಾವಿದರ ಕ್ಷೇಮಾಭಿವೃದ್ಧಿ ವೇದಿಕೆಯು ಎಲ್ಲ ಅಕಾಡೆಮಿಗಳ ವಿಸರ್ಜನೆಗೆ ಖಂಡನೆ ವ್ಯಕ್ತಪಡಿಸಿದೆ. ಕರ್ನಾಟಕ ಸರಕಾರದ ಎಲ್ಲಾ ಅಕಾಡೆಮಿ, ಪ್ರಾಧಿಕಾರ ,ನಿಗಮ ಮತ್ತು ಮಂಡಳಿಗಳನ್ನು, ಸಿಬ್ಬಂದಿಗಳ ಸಂಬಳ, ಭತ್ಯೆ ಇತರೆ ವಿಸರ್ಜಿಸಲುಕೆಲವರು ಸೂಚಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದು ಅನೇಕರನ್ನು ನಿರೂದ್ಯೋಗಿಗಳಾಗಿಸುತ್ತದೆ. ಕೋವಿಡ್ ಸಮಸ್ಯೆ ಅಂತರರಾಷ್ಟ್ರೀಯವಾದುದು ಇಂದು ಬಂದಿದೆ ನಾಳೆ ಹೋಗುತ್ತದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತಾಗಿದೆ. ಸದಾ ಸ್ವಸ್ತ ಸಮಾಜ, ಸ್ವಸ್ತ ಪರಿಸರ ನಿರ್ಮಿಸಿ, ಅರಿವು-ಜಾಗೃತಿ […]

ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

Thursday, September 16th, 2010
ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು. ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ […]