ಮಹೇಶ್ ಮೋಟಾರ್ಸ್ ಮಾಲೀಕ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ

Sunday, October 1st, 2023
Mahesh-Shekha

ಮಂಗಳೂರು : ಖಾಸಗಿ ಬಸ್ ಮಾಲಕರೊಬ್ಬರು ತಮ್ಮ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಕ್ಟೋಬರ್ 1 ರ ಭಾನುವಾರ ನಡೆದಿದೆ. ಮಹೇಶ್ ಮೋಟಾರ್ಸ್ ಮಾಲೀಕ ಪ್ರಕಾಶ್ ಶೇಕ (40) ಮೃತ ವ್ಯಕ್ತಿ. ಕದ್ರಿ ಕಂಬಳ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹೇಶ್ ಮೋಟಾರ್ಸ್‌ಗೆ ಸೇರಿದ ಅನೇಕ ಸಿಟಿ ಬಸ್‌ಗಳು ಪ್ರತಿದಿನ ಸಂಚರಿಸುತ್ತಿದ್ದು, ಪ್ರಯಾಣಿಕರಲ್ಲಿ ಜನಪ್ರಿಯವಾಗಿದೆ. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಮಂಗಳೂರಿನಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಿಟಿ ಬಸ್​

Tuesday, October 20th, 2020
Ganesh Prasad bus

ಮಂಗಳೂರು  : ಮಂಗಳೂರಿನ ಬಸ್ ಮಾಲೀಕ ರೊಬ್ಬರು  ಡ್ರಗ್ಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬರಹಗಳನ್ನು ‌ತಮ್ಮ ಬಸ್ನಲ್ಲಿ ಬರೆಸಿದ್ದಾರೆ. ನಗರದ ಸ್ಟೇಟ್ ಬ್ಯಾಂಕ್ನಿಂದ ಮಂಗಳಾದೇವಿಯ ನಡುವೆ ಸಂಚರಿಸುವ ‘ಶ್ರೀ ಗಣೇಶ್ ಪ್ರಸಾದ್’ ಎಂಬ 27 ನಂಬರ್ ಸಿಟಿ ಬಸ್ನಲ್ಲಿ‌ ಮಾಲೀಕ  ದಿಲ್ ರಾಜ್ ಆಳ್ವ ಅವರು ಡ್ರಗ್ಸ್ ಜಾಗೃತಿ ಬರಹ ಬರೆಸಿದ್ದಾರೆ. ಬಸ್ನ ಎರಡೂ ಬದಿಗಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ, ಡ್ರಗ್ಸ್ ಸೇವನೆಯಿಂದ ಮರಣ ಸಂಭವಿಸುತ್ತದೆ, ಕುಟುಂಬಕ್ಕೂ ತೊಂದರೆ ಎಂಬ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಈ ಹಿಂದೆಯೂ ಅವರು […]

ಸಿಟಿ ಬಸ್ ಗಳಿಗೆ ಸಿಸಿ ಕೆಮರಾ..ಪ್ರಯಾಣಿಕರ ಒತ್ತಾಯ!

Tuesday, July 31st, 2018
city-bus

ಮಂಗಳೂರು: ಸರ್‌… ನಗರದಲ್ಲಿ ಓಡಾಡುವ ಅನೇಕ ಖಾಸಗಿ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್‌ ನೀಡುವುದಿಲ್ಲ. ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುತ್ತಾರೆ. ಇದು ಗೊತ್ತಿದ್ದರೂ, ನಿರ್ವಾಹಕರು ಚಕಾರ ಎತ್ತುವುದಿಲ್ಲ’ ಎಂದು ಟ್ರಾಫಿಕ್‌ ಪೊಲೀಸ್‌, ಸಾರಿಗೆ ಇಲಾಖೆಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಸಿಟಿ ಬಸ್‌ ಮಾಲಕರ ಸಂಘ ಈಗ ಚಿಂತಿಸಿದೆ. ಖಾಸಗಿ ಸಿಟಿ ಬಸ್‌ಗಳಲ್ಲಿ ನಡೆಯುವ ಅಕ್ರಮ ಗಳಿಗೆ ಕಡಿವಾಣ ಹಾಕುವ ಸಲುವಾಗಿ ಬಸ್‌ಗಳಲ್ಲಿ ಸಿಸಿ ಕೆಮರಾ ಕಣ್ಗಾವಲನ್ನಿಡಬೇಕು ಎಂದು ಪ್ರಯಾಣಿಕರ […]

ಸಾರಿಗೆ ಸಚಿವರಿಂದ ಹುಬ್ಬಳ್ಳಿ ಸಿಬಿಟಿ ಹಾಗೂ ಹಳೇ ಬಸ್ ನಿಲ್ದಾಣಗಳಿಗೆ ಭೇಟಿ

Monday, July 30th, 2018
transport

ಹುಬ್ಬಳ್ಳಿ: ಸಾರಿಗೆ ಸಚಿವ ಡಿಸಿ ತಮ್ಮಣ್ಣ ರವಿವಾರ ಸಂಜೆ ನಗರದ ಸಿಬಿಟಿ ಹಾಗೂ ಹಳೇ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಿಟಿ ಬಸ್ ಟರ್ಮಿನಲ್ ವೀಕ್ಷೀಸಿದ ಸಚಿವರು, ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲಿಸಿ ಮೂರು ತಿಂಗಳಲ್ಲಿ ಬಸ್ ನಿಲ್ದಾಣವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಬೇಡಿಕೆ ಗಣತಿ ಆಧಾರದ ಮೇಲೆ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕು. ಅನಗತ್ಯವಾಗಿ ಹೆಚ್ಚಿನ ಅಂತಸ್ತು ಹಾಗೂ ಕಟ್ಟಡಗಳನ್ನು ನಿರ್ಮಾಣ […]

ನಂತೂರು ಜಂಕ್ಷನ್ ಬಳಿ ಖಾಸಗಿ ಸಿಟಿ ಬಸ್- ಕಂಟೈನರ್ ಟ್ರಕ್ ಭೀಕರ ಅಫಘಾತ, ಮಹಿಳೆ ಮೃತ

Thursday, December 7th, 2017
nanthoor-accident-

ಮಂಗಳೂರು : ಮಂಗಳೂರಿನ ನಂತೂರು ಜಂಕ್ಷನ್ ಬಳಿ ಗುರುವಾರ ಬೆಳಿಗ್ಗೆ  ಖಾಸಗಿ ಸಿಟಿ ಬಸ್- ಕಂಟೈನರ್ ಟ್ರಕ್ ನಡುವೆ  ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು , 21 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಗುರುಪುರ ಕೈಕಂಬದ ಕವಿತಾ (50) ಎಂದು ಗುರುತಿಸಲಾಗಿದೆ. ವೆನ್ ಲಾಕ್ ಸರಕಾರಿ ಆಸ್ಪತ್ರೆ ಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ , ಬಸ್ ನ ಮುಂಭಾಗ ಕುಳಿತಿದ್ದರು ಡಿಕ್ಕಿ ಉಂಟಾದ ತೀರ್ವವಾಗಿ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡ ಕವಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ […]

ಉಡುಪಿಯಲ್ಲಿ ನರ್ಮ್-ಕೆಎಸ್‌ಆರ್‌ಟಿಸಿ ಸಿಟಿ ಬಸ್‌ಗಳ ಓಡಾಟಕ್ಕೆ ಚಾಲನೆ

Thursday, September 8th, 2016
udupi-nurm-bus

ಉಡುಪಿ: ಉಡುಪಿ ನಗರ ಮತ್ತು ಗ್ರಾಮೀಣ ಭಾಗಗಳಿಂದ ಬೇಡಿಕೆ ಬಂದರೆ ಮತ್ತಷ್ಟು ಸರಕಾರಿ ಬಸ್‌ಗಳನ್ನು ಓಡಿಸಲು ಸರಕಾರ ಸಿದ್ಧವಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ. ಸೆ. 7ರಂದು ಉಡುಪಿಯಲ್ಲಿ ನರ್ಮ್-ಕೆಎಸ್‌ಆರ್‌ಟಿಸಿ ಸಿಟಿ ಬಸ್‌ಗಳ ಓಡಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಖಾಸಗಿ ಬಸ್‌ ಮಾಲಕರ ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಉಡುಪಿ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಆರಂಭವಾಗುತ್ತಿರುವುದು ಐತಿಹಾಸಿಕ. ಖಾಸಗಿ ಬಸ್‌ ಮಾಲಕರ ಒತ್ತಡ ಇದ್ದರೂ ಅದನ್ನು ಲೆಕ್ಕಿಸದೆ ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಧಿಗಳ ಹಿತದೃಷ್ಟಿಯಿಂದ ನರ್ಮ್ […]

ಮೀನುಗಾರಿಕೆ ಬಂದರ್ ವರೆಗೆ ಸಿಟಿ ಬಸ್

Monday, April 18th, 2011
ಮೀನುಗಾರಿಕೆ ಬಂದರ್ ವರೆಗೆ ಸಿಟಿ ಬಸ್ ಮೀನುಗಾರಿಕೆ ಬಂದರ್ ವರೆಗೆ ಸಿಟಿ ಬಸ್

ಮಂಗಳೂರು : ಮೀನುಗಾರರಿಗೆ ಅನುಕೂಲವಾಗುವಂತೆ ಈ ಹಿಂದೆ ಇದ್ದಂತೆ ರೂಟ್ ಸಂ.26,32 ಹಾಗೂ ಇನ್ನು ಕೆಲವು ಮಾರ್ಗದ ಬಸ್ಸುಗಳನ್ನು ಹಳೆ ಬಂದರು ಪ್ರದೇಶದ ಮೀನುಗಾರಿಕಾ ಬಂದರ್ ವರೆಗೆ ವಿಸ್ತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ಅವರು ಮೀನುಗಾರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೀನುಗಾರಿಕೆಗೆ ಸಂಬಂಧಿಸಿದ ವಿಷಯಗಳ ಕುರಿತ ಸಭೆಯಲ್ಲಿ ಈ ವಿಷಯ ತಿಳಿಸಿದರು. ಮೀನುಗಾರರ ಸೂಕ್ತ ರಕ್ಷಣೆಗೆ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳನ್ನು ವಿನಂತಿಸಿದರು. ಇತ್ತೀಚೆಗೆ ಮೀನುಗಾರರಿಗೆ […]