ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಬಿಜೆಪಿ

Tuesday, June 4th, 2024
suresh-gopi

ತಿರುವನಂತಪುರಂ: ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಕೊನೆಗೂ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ. ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆದಿದ್ದು, ತ್ರಿಶ್ಯೂರ್‌ನಲ್ಲಿ ನಟ, ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಜಯ ಗಳಿಸಿದ್ದಾರೆ. ಸುರೇಶ್ ಗೋಪಿ ಕಾಂಗ್ರೆಸ್‌ನ ಕೆ. ಮುರಳೀಧರನ್‌ ಮತ್ತು ಸಿಪಿಐಯ ವಿ.ಎಸ್‌. ಸುನೀಲ್‌ ಕುಮಾರ್‌ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸುರೇಶ್ ಗೋಪಿ ಬರೊಬ್ಬರಿ 69 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಇದು […]

ಏಪ್ರಿಲ್ 6ರಂದು ನಡೆಯಲಿರುವ ಕಾಸರಗೋಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ

Tuesday, March 16th, 2021
Election

ಕಾಸರಗೋಡು : ಏಪ್ರಿಲ್ 6ರಂದು ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಎಲ್.ಡಿ,ಎಫ್ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಞ೦ಗಾಡ್ ನ ಸಿಪಿಐ ಅಭ್ಯರ್ಥಿ ಇ.ಚಂದ್ರಶೇಖರನ್ , ಉದುಮ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸಿ. ಎಚ್ ಕುಞ೦ಬು , ತೃಕ್ಕರಿಪುರ ದ ಸಿಪಿಎಂ ಅಭ್ಯರ್ಥಿ ಎಂ. ರಾಜಗೋಪಾಲ್ ನಾಮಪತ್ರ ಸಲ್ಲಿಸಿದರು. ಚಂದ್ರಶೇಖರನ್ ಕಾಞ೦ ಗಾಡ್ ಕಂದಾಯಾಧಿಕಾರಿ ಹಾಗೂ ಕುಞ೦ಬು ಜಿಲ್ಲಾಧಿಕಾರಿ ಕಚೇರಿ ಹಾಗೂ ರಾಜಗೋಪಾಲ್ ನೀಲೇಶ್ವರ ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ […]

ಒಳಚರಂಡಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಒತ್ತಾಯಿಸಿ ಸಿಪಿಐ(ಎಂ)ನಿಂದ ನಗರಪಾಲಿಕೆ ಚಲೋ

Tuesday, February 20th, 2018
corporation

ಮಂಗಳೂರು: ಕುಡ್ಸೆಂಪ್ (ಒಳಚರಂಡಿ) ಯೋಜನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಉನ್ನತ ತನಿಖೆಗೆ ಒತ್ತಾಯಿಸಿ, ಅಮೃತ್ ಯೋಜನೆಯಿಂದ ಭ್ರಷ್ಟ ಗುತ್ತಿಗೆದಾರರನ್ನು ಹೊರಗಿಡಲು ಆಗ್ರಹಿಸಿ ಹಾಗೂ ನಿಯಮ ಉಲ್ಲಂಘಿಸಿ ನಡೆದಿರುವ ನಗರದ ಹೊಸ ಪಂಪ್‌ಲೈನ್ ಕಾಮಗಾರಿ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಿಪಿಐ(ಎಂ) ನೇತೃತ್ವದಲ್ಲಿ ನಗರದಲ್ಲಿ ಇಂದು (ತಾ. 20-02-2018) ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಬಲ್ಲಾಳ್‌ಬಾಗ್‌ನಿಂದ ಮೆರವಣಿಗೆಯಲ್ಲಿ ಹೊರಟ ಸಿಪಿಐ(ಎಂ) ಪಕ್ಷದ ನೂರಾರು ಕಾರ್ಯಕರ್ತರು, ’ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಶಾಸಕರಿಗೆ ಧಿಕ್ಕಾರ, ಕುಡ್ಸೆಂಪ್ ಹಗರಣ ಮಂಗಳೂರು ನಗರಕ್ಕೊಂದು […]

ಸ್ನೇಹಿತನ ಸಾವಿನ ಸುದ್ದಿಯಿಂದ ಶಾಕ್‌… ಸಿಪಿಐ ಮುಖಂಡ ವಿಶ್ವನಾಥ್‌ ನಿಧನ

Thursday, January 18th, 2018
vishwanath-nayak

ಮಂಗಳೂರು: ಸಿಪಿಐ ಮುಖಂಡ ಪಿ. ಸಂಜೀವ ಅವರ ನಿಧನ ಸುದ್ದಿ ಕೇಳಿದ ಶಾಕ್‌ನಲ್ಲೇ ಆಸ್ಪತ್ರೆ ಸೇರಿದ್ದ ಹಿರಿಯ ಸಿಪಿಐ ಮುಖಂಡ ವಿಶ್ವನಾಥ್ ನಾಯಕ್ ಕೂಡ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡ ಪಿ.ಸಂಜೀವ ನಿನ್ನೆ ಬೆಳಗ್ಗೆ ನಿಧನರಾಗಿದ್ದರು. ಆತ್ಮೀಯ ಗೆಳೆಯನ ಅಗಲಿಕೆಯ ವಿಚಾರವನ್ನು ಕೇಳಿದ ಶಾಕ್‌ನಿಂದ ವಿಶ್ವನಾಥ್ ನಾಯಕ್ (75) ಅಸ್ವಸ್ಥರಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಪಿ ಸಂಜೀವ ಹಾಗೂ ವಿಶ್ವನಾಥ್ ನಾಯಕ್ ಅವರು […]

ಸಾವಿನಲ್ಲೂ ಬಿಜೆಪಿಯಿಂದ ರಾಜಕಾರಣ… ಯೆಚೂರಿ ಆರೋಪ

Friday, January 5th, 2018
sitaram-yechury

ಮಂಗಳೂರು: ಕರಾವಳಿ ಹಾಗೂ ಇತರೆಡೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಾವಿನಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ. ಮೂಡುಬಿದಿರೆಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಸಿಪಿಐ(ಎಂ)ನ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಕಳೆದ ಮೂರು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ ಎಂದರು. ಈ ಹಿಂದಿನ ಸರ್ಕಾರಕ್ಕಿಂತಲೂ ಪ್ರಬಲವಾಗಿ ನವ ಉದಾರೀಕರಣ ಆರ್ಥಿಕ ನೀತಿಯನ್ನು […]

ಸಿಪಿಐ(ಎಂ) ಹಿರಿಯ ಸದಸ್ಯ ಶೀನ ಬಂಗೇರ ನಿಧನ

Thursday, November 2nd, 2017
sheena bangera

ಮಂಗಳೂರು: ಬಜಾಲ್ ಪ್ರದೇಶದ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯರಾದ ಶೀನ ಬಂಗೇರ (65 ವರ್ಷ) ಅವರು ಅನಾರೋಗ್ಯದಿಂದಾಗಿ ಬಜಾಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದು, ಸಿಪಿಐ(ಎಂ) ಮಂಗಳೂರು ದಕ್ಷಿಣ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ಎಳೆಯ ಪ್ರಾಯದಲ್ಲೇ ಕಮ್ಯೂನಿಸ್ಟ್ ಚಳುವಳಿಗೆ ಆಕರ್ಷಿತರಾಗಿ, ಅಂದು ಬಜಾಲ್ ಪ್ರದೇಶದಲ್ಲಿ ಸಕ್ರೀಯವಾಗಿದ್ದ ರೈತ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ್ದ ಶೀನ ಬಂಗೇರರವರು, ಎಡಪಂಥೀಯ ವಿಚಾರಧಾರೆಯ ಶಿಸ್ತಿನ ಸಿಪಾಯಿಯಾಗಿದ್ದರು. ತುರ್ತುಪರಿಸ್ಥಿತಿಯ ಕಾಲಾವಧಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿಷೇಧವಿದ್ದಾಗಲೂ ಬಜಾಲ್‌ನಲ್ಲಿ ದುಡಿಯುವ ವರ್ಗದ ಚಳುವಳಿಗೆ ಅಪಾರ […]

ಸಿಪಿಐ ಜಿಲ್ಲಾ ಸಮ್ಮೇಳನದ ಲೊಗೋ ಬಿಡುಗಡೆ

Wednesday, November 1st, 2017
CPI

ಮಂಗಳೂರು: ಭಾರತ ಕಮ್ಯನಿಸ್ಟ್ ಪಕ್ಷ (ಸಿಪಿಐ) ಇದರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 23 ನೇ ಸಮ್ಮೇಳನವು 2017 ಡಿಸೆಂಬರ್24 ರಿಂದ 26 ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಸಮ್ಮೇಳನದ ಲೊಗೋವನ್ನು ಇಂದು ಪಕ್ಷದ ಕಛೇರಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಬಿಡುಗಡೆಗೊಳಿಸಿದರು. ಕರಾವಳಿ ಜಿಲ್ಲೆಗಳು ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಜಾತಿ ಬೇಧವಿಲ್ಲದೆ ಜನರು ಜೀವನ ನಡೆಸುತ್ತಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿಯೂ ಒಬ್ಬರಿಗೊಬ್ಬರು ಸಹಕರಿಸಿ ವ್ಯವಹರಿಸುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಸ್ತಿಯನ್ ಮತ್ತಿತರ ಧರ್ಮ ಬಾಂಧವರು ಶಾಂತಿ ಸಾಮರಸ್ಯವನ್ನು ಬಯಸುವ ಶಾಂತಿಪ್ರಿಯರಾಗಿದ್ದಾರೆ. ಆದರೆ ಕೆಲವೊಂದು […]

ಡ್ರೈನೇಜ್ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಅಮಾನವೀಯ ಕೃತ್ಯ; ಮನಪಾ ಕ್ರಮವನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ

Saturday, October 21st, 2017
CPI

ಮಂಗಳೂರು: ಮನಪಾ ವ್ಯಾಪ್ತಿಯಲ್ಲಿ ವ್ಯಾಪಕಗೊಂಡಿರುವ ಡ್ರೈನೇಜ್ ಅವ್ಯವಸ್ಥೆಯನ್ನು ಸರಿಪಡಿಸುವ ನೆಪದಲ್ಲಿ ಡ್ರೈನೇಜ್‌ನ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿ ಅಮಾನವೀಯ ಕೃತ್ಯ ಎಸಗಿದ ಮಂಗಳೂರು ಮಹಾನಗರ ಪಾಲಿಕೆಯ ದುಷ್ಕೃತ್ಯಗಳ ವಿರುದ್ಧ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿ ಇಂದು ಸಿಪಿಐ(ಎಂ) ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಮಂಗಳೂರಿನ ಮಾನ ಹರಾಜು ಹಾಕಿದ ಮನಪಾಕ್ಕೆ ಧಿಕ್ಕಾರ, ಅಮಾನವೀಯ ಕೃತ್ಯ ಎಸಗಿದ ಮನಪಾಕ್ಕೆ ಧಿಕ್ಕಾರ, ಘಟನೆಯನ್ನು ಸಮರ್ಥಿಸಿದ ಮೇಯರ್ ರಾಜಿನಾಮೆ ನೀಡಲಿ ಎಂಬಿತ್ಯಾದಿ […]

ಕಮ್ಯುನಿಸ್ಟರ ಮೇಲೆ ಧಾಳಿ-ಸಂಘ ಪರಿವಾರದ ಹತಾಶೆಯ ಸಂಕೇತ :ಸುನೀಲ್‌ಕುಮಾರ್ ಬಜಾಲ್

Tuesday, October 17th, 2017
jalligudde

ಮಂಗಳೂರು: ಕಳೆದ 3 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರಮೋದಿ ನೇತೃತ್ವದ ಸರಕಾರವು ಹೆಜ್ಜೆ ಹೆಜ್ಜೆಗೂ ಜನ ವಿರೋಧಿಯಾಗಿ ವರ್ತಿಸುತ್ತಿದೆ. ಸರಕಾರದ ತಪ್ಪುಗಳನ್ನು ಎಳೆಎಳೆಯಾಗಿ ಬಿಡಿಸಿ ಜನರ ಮಧ್ಯೆ ಜಾಗೃತಿ ಮೂಡಿಸುವ ಕೆಲಸವನ್ನು ಸಿಪಿಐ(ಎಂ) ದೇಶಾದ್ಯಂತ ಜನಾಂದೋಲನದ ಮೂಲಕ ನಡೆಸುತ್ತಿದೆ. ಇದರಿಂದ ಕಂಗೆಟ್ಟ ಬಿಜೆಪಿ ಸಂಘ ಪರಿವಾರವು ದೇಶಾದ್ಯಂತ ಕಮ್ಯುನಿಸ್ಟರ ಮೇಲೆ ಧಾಳಿ, ಕೊಲೆ, ಅಪಪ್ರಚಾರಗಳು, ಕಚೇರಿಗಳ ಧ್ವಂಸ ಮುಂತಾದ ದುಷ್ಕೃತ್ಯಗಳನ್ನು ಮಾಡುತ್ತಿದ್ದು, ಇದು ಸಂಘ ಪರಿವಾರದ ಹತಾಶೆಯ ಸಂಕೇತವಾಗಿದೆ ಎಂದು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ […]

ಸಿಪಿಐ ನೇತೃತ್ವದಲ್ಲಿ ಬೆಲೆ ಏರಿಕೆಯ ವಿರುದ್ಧ ಜನಾಗ್ರಹ ಚಳವಳಿ

Saturday, March 11th, 2017
cpi

ಮಂಗಳೂರು:  ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜನಪರ ರಾಜ್ಯ ಬಜೆಟ್‌ಗೆ ಒತ್ತಾಯಿಸಿ ಸಿಪಿಐ ನೇತೃತ್ವದಲ್ಲಿ ನಡೆದ ರಾಜ್ಯವ್ಯಾಪಿ ಜನಾಗ್ರಹ ಚಳವಳಿಯ ಅಂಗವಾಗಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು. ಜನರನ್ನು ಕನಸಲ್ಲಿ ತೇಲಾಡಿಸಿ ಬಂಡವಾಳಶಾಹಿಗಳ ಪರ ವಿದೇಶಿ ನೀತಿಗಳನ್ನು ಅನುಸರಿಸಿ ದೇಶಿವಾಸಿಗಳಲ್ಲಿ ಸುಳ್ಳು ಹಬ್ಬಿಸಲಾಗುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಏರುತ್ತಿದೆ. ನಿತ್ಯೋಪಯೋಗಿ ವಸ್ತುಗಳು ಜನರ ಕೈಗೆಟುಕುತ್ತಿಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಮತ್ತು ಉಡುಪಿ […]