ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇ ಗೌಡ ಅವರಿಗೆ ದೆಹಲಿ ಕರ್ನಾಟಕ ಸಂಘದಿಂದ ಅಭಿನಂದನೆ
Monday, April 2nd, 2018ಮಂಗಳೂರು: ಬದುಕು ಬಹಳ ದೊಡ್ಡದು.ಪ್ರಶಸ್ತಿಗಳಿಗಿಂತ ಬದುಕುದೊಡ್ಡದುಎಂದು ನಾನು ಭಾವಿಸಿದವನು.ಬದುಕಿನಲ್ಲಿ ನಾವು ಏನು ಸಾಧನೆ ಮಾಡಬೇಕಾದರೂಕೂಡಾ ನಮ್ಮ ಮಹತ್ವಾಕಾಂಕ್ಷೆಯನ್ನು ನಾವು ಮರೆಯಬಾರದು. ನಮ್ಮಪ್ರಾಮಾಣಿಕತೆಯನ್ನು ಬಿಡಬಾರದು. ಒಂದುರೀತಿಯಲ್ಲಿಒಬ್ಬ ಬರಹಗಾರನಿಗೆಅತ್ಯುತ್ತಮ ಕೃತಿಗಳನ್ನು ಬರೆಯುವುದೇಅಥವಾತನ್ನಎಲ್ಲಾ ಅನುಭವಗಳನ್ನು ಕೂಡಾಅದನ್ನುಅಭಿವ್ಯಕ್ತಿ ರೂಪಕೊಟ್ಟುಅದನ್ನು ಸಾಹಿತ್ಯ ಕೃತಿಗಳನ್ನಾಗಿ ಮಾರ್ಪಡಿಸತಕ್ಕಂತದ್ದೇ ಅವನ ಮಹತ್ವಕಾಂಕ್ಷೆ. ಅದು ಅವನ ಕಾಯಕ.ನನಗೆ ಬರವಣಿಗೆಅನ್ನುವುದುಒಂದುತಪಸ್ಸು.1960ನೇ ಇಸವಿಯಲ್ಲಿ ಬರೆಯಲು ಪ್ರಾರಂಭಿಸಿದೆ.೬೦ರ ಸುಮಾರಿಗೆ ನನ್ನ ಮೂರು ಕವಿತೆಗಳು ಆಕಾಶವಾಣಿಯಲ್ಲಿ ಪ್ರಸಾರವಾಯಿತು. ಆಗಿನ ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟಗೊಂಡವು.ಬರೆಯುತ್ತಾ ಹೋದೆ, ಬೆಳೆಯುತ್ತಾ ಹೋದೆ, ಕನ್ನಡವನ್ನೇ ನಿಚ್ಛಳವಾಗಿ ಬಳಸುತ್ತಾ ಹೋದೆ.ನನ್ನ ಬದುಕಿನ […]