ಗಾಂಜಾ ಸಾಗಾಟ : ಸುಂಟಿಕೊಪ್ಪದ ನಾಲ್ವರ ಬಂಧನ; 1.50ಲಕ್ಷ ರೂ. ಮೌಲ್ಯದ ಮಾಲು ವಶ

Saturday, February 22nd, 2020
sunti-koppa

ಮಡಿಕೇರಿ : ಮೈಸೂರಿನ ಮಂಡಿ ಮೊಹಲ್ಲಾದಿಂದ ಗಾಂಜಾವನ್ನು ತಂದು ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಂಟಿಕೊಪ್ಪದ ಕೆ.ಇ.ಬಿ ಬಳಿಯ ನಿವಾಸಿ, ಪೈಂಟಿಂಗ್ ಕೆಲಸ ಮಾಡುವ ಅಮ್ಜದ್ ಶರೀಫ್(31), ಚೆಟ್ಟಳ್ಳಿ ರಸ್ತೆ ನಿವಾಸಿ, ಕೂಲಿ ಕೆಲಸ ಮಾಡುವ ಸಮೀರ್(30), ಅಪ್ಪಾರಂಡ ಬಡಾವಣೆ ನಿವಾಸಿ, ಪೈಟಿಂಗ್ ಕೆಲಸ ಮಾಡುತ್ತಿದ್ದ ಅಫ್ರಿದ್(27), ಕೆ.ಇ.ಬಿ ಬಳಿಯ ನಿವಾಸಿ ಪೈಂಟಿಂಗ್ ಕೆಲಸ ಮಾಡುವ ರವಿ(27) ಎಂಬವರುಗಳೇ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ. ಬಂಧಿತರಿಂದ 1.50ಲಕ್ಷ ರೂ.ಮೌಲ್ಯದ 6 […]

ಕಾರು ಪಲ್ಟಿ : ಸುಂಟಿಕೊಪ್ಪದ ನಿವಾಸಿ ದುರ್ಮರಣ

Friday, February 21st, 2020
accident

ಮಡಿಕೇರಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬರೆಗೆ ಡಿಕ್ಕಿಯಾಗಿ ರಸ್ತೆಗುರುಳಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಮಡಿಕೇರಿ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಸಿಂಕೋನ ಬಳಿ ನಡೆದಿದೆ. ಕಾರಿನಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಸುಂಟಿಕೊಪ್ಪದ ನಿವಾಸಿ ಬಿ.ಎಸ್.ರಫೀಕ್(38) ಎಂಬುವವರು ಮೃತ ದುರ್ದೈವಿಯಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹೊಸಕೋಟೆ ನಿವಾಸಿ ದಿವಂಗತ ಖಾದರ್ ಅವರ ಪುತ್ರಿ ಸಫ್ರಿನಾ ಸ್ಥಿತಿ ಚಿಂತಾಜನಕವಾಗಿದೆ. ಸುಂಟಿಕೊಪ್ಪ ನಿವಾಸಿ ಬಿ.ಎಸ್.ರಫೀಕ್ ತಮ್ಮ […]

ಮಡಿಕೇರಿ : ಪ್ರವಾಸಿ ಬಸ್ ಮಿನಿ ಲಾರಿಗೆ ಡಿಕ್ಕಿ

Monday, February 10th, 2020
accident

ಮಡಿಕೇರಿ : ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಪ್ರವಾಸಿ ಬಸ್ಸೊಂದು ಮಿನಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಮುಂಭಾಗದ ಕಾರಿಗೆ ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಸುಂಟಿಕೊಪ್ಪದ 7ನೇ ಮೈಲು ಬಳಿಯಲ್ಲಿ ನಡೆದಿದೆ. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೆ ಡಿಕ್ಕಿಯಾದ ಪ್ರವಾಸಿ ಬಸ್ ನಂತರ ಬರೆಗೆ ಡಿಕ್ಕಿ ಹೊಡೆದು ನಿಂತಿದೆ. ಲಾರಿ ಅಳಿಕೆಯಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ತೀವ್ರ ಗಾಯಗಳಾಗಿಲ್ಲ. ಅಪಘಾತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ […]

ರಾಮಮಂದಿರ ತೀರ್ಪು : ಪ್ರಚೋದನಕಾರಿ ಭಿತ್ತಿ ಪತ್ರ ಹಂಚಿದ ಸಂಘಟನೆ ; ದೂರು ದಾಖಲು

Wednesday, November 20th, 2019
pfi

ಮಡಿಕೇರಿ:  ಬಾಬ್ರಿ ಮಸೀದಿ ವಿವಾದಕ್ಕೆ ಸಂಭಂಧಿಸಿದಂತೆ ಕಳೆದ ನವೆಂಬರ್‌ 10 ರಂದು ಸುಪ್ರೀಂ ಕೋರ್ಟು ಐತಿಹಾಸಿಕ ತೀರ್ಪನ್ನು ನೀಡಿದ್ದು ದೇಶಾದ್ಯಂತ ಈ ತೀರ್ಪು ವಿವಿಧ ಧಾರ್ಮಿಕ ಮುಖಂಡರಿಂದ ಶ್ಲಾಘನೆಗೆ ಒಳಗಾಗಿದೆ. ದೇಶದಲ್ಲಿ ಕೋಮು ಸೌಹಅರ್ದತೆಯನ್ನು ಬೆಸೆಯುವ ತೀರ್ಪು ಎಂದು ಮೆಚ್ಚುಗೆಗೆ ಪಾತ್ರವಾಗಿರುವುದು ದೇಶಾದ್ಯಂತ ಎಲ್ಲೂ ಒಂದೂ ಅಹಿತಕರ ಘಟನೆ ನಡೆಯದಿರುವುದೇ ಸಾಕ್ಷಿಯಾಗಿದೆ. ಸುಂಟಿಕೊಪ್ಪದಲ್ಲಿ ಸಂಘಟನೆಯೊಂದು ಸಮಾಜದ ಶಾಂತಿ ಕದಡುವ ಉದ್ದೇಶದಿಂದ ತೀರ್ಪನ್ನು ವಿರೋದಿಸುವಂತೆ ಕರೆ ನೀಡಿದೆ. ಕರಪತ್ರದ ಮೂಲಕ ಮಾಡಿರುವ ಮನವಿಯಲ್ಲಿ ಬಾಬ್ರಿ ಮಸೀದಿ ತೀರ್ಪಿನಲ್ಲಿ ನ್ಯಾಯವನ್ನು […]