ಹೆಚ್.ಡಿ.ದೇವೇಗೌಡರ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು: ಜಿ.ಪರಮೇಶ್ವರ್

Saturday, October 1st, 2016
devegouda

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು ಎನ್ನುವ ಭಾವನೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವ್ಯಕ್ತಪಡಿಸಿದರು. ಕಾವೇರಿ ವಿವಾದದಲ್ಲಿ ಪ್ರಧಾನಿಗಳ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ದೇವೇಗೌಡರೊಂದಿಗೆ ಕೆಲ ಕಾಲು ಮಾತುಕತೆ ನಡೆಸಿದರು. ನೀರು ಹರಿಸದಿರುವ […]

ಸುಪ್ರೀಂ ಆದೇಶದ ಪಾಲನೆ ಅನಿವಾರ್ಯ: ಸಚಿವ ರಮೇಶ್‌ ಕುಮಾರ

Friday, September 16th, 2016
ಸುಪ್ರೀಂ ಆದೇಶದ ಪಾಲನೆ ಅನಿವಾರ್ಯ: ಸಚಿವ ರಮೇಶ್‌ ಕುಮಾರ

ಮಂಗಳೂರು: ಕಾವೇರಿ ನೀರು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಅನಿವಾರ್ಯವಾದ್ದರಿಂದ ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಸಚಿವ ರಮೇಶ್‌ ಕುಮಾರ ಸಮರ್ಥನೆ ನೀಡಿದ್ದಾರೆ. ಇಂದು ನಗರದಲ್ಲಿರುವ ಸಚಿವ ಯು.ಟಿ ಖಾದರ್ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅಂತಿಮ. ಹಾಗಿರುವಾಗ ಸರ್ವೋಚ್ಛ ನ್ಯಾಯಾಲಯದ ತೀರ್ಪು ಪಾಲಿಸಬೇಕು. ಇನ್ನು ಇದು ಮಧ್ಯಂತರ ತೀರ್ಪು ಆಗಿರುವುದರಿಂದ ಸೆ.20ರಂದು ಮತ್ತೆ ವಿಚಾರಣೆ ನಡೆಯಲಿದೆ. ಆಗ […]

‘ಸುಪ್ರೀಂ ತೀರ್ಪಿನಿಂದ ರಾಜ್ಯಕ್ಕೆ ಮತ್ತಷ್ಟು ಶಿಕ್ಷೆ… ಪ್ರಧಾನಿ ಮಧ್ಯಪ್ರವೇಶ ಮಾಡಲೇಬೇಕು’

Monday, September 12th, 2016
devegoda

ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಟೀಕಿಸಲ್ಲ. ಆದರೆ ಇಂದು ಸುಪ್ರೀಂ ಕರ್ನಾಟಕಕ್ಕೆ ಮತ್ತಷ್ಟು ಶಿಕ್ಷೆ ನೀಡಿದೆ. ರಾಜ್ಯ ಸರ್ಕಾರದ ಮೇಲ್ಮನವಿಗೆ ನ್ಯಾಯ ಸಿಗುವ ಬದಲು ಶಿಕ್ಷೆ ಸಿಕ್ಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವೇರಿ ವಿವಾದ ಸಂಬಂಧ ಸುಪ್ರೀಂ ತೀರ್ಪಿನ ನಂತರ ನಗರದ ಖಾಸಗಿ ಹೋಟೆಲ್‌ನಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುಪ್ರೀಂ ಆದೇಶ ಪಾಲಿಸಿ ಎಂದು ನಾನೇ ಹೇಳಿ ನಾರಿಮನ್, ಅನಿಲ್ ದಿವಾನ್ ಹಾಗೂ ಪ್ರಧಾನಿ ಬಳಿ ಹೋಗಿ ಚರ್ಚಿಸಿದ್ದೇನೆ. ಜನ […]