ಎಸ್.ಡಿ.ಎಂ. ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆ: ಸುವರ್ಣ ಮಹೋತ್ಸವ ಸಂಭ್ರಮ

Sunday, October 6th, 2024
sdm

ಉಜಿರೆ: ವಿದ್ಯಾವಂತರು ವಿಚಾರವಂತರಾಗುವುದರೊಂದಿಗೆ ಆಚಾರವಂತರೂ ಆಗಬೇಕು. ಆಗ ಮಾತ್ರ ಕಲಿತ ವಿದ್ಯೆಗೆ ವಿಶೇಷ ಮಾನ್ಯತೆ, ಗೌರವ ಸಿಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಶನಿವಾರ ಉಜಿರೆಯಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಸಂದರ್ಭ ಸುವರ್ಣಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿಭೆ, ಶಕ್ತಿ-ಸಾಮರ್ಥ್ಯ ಮತ್ತು ಉತ್ಸಾಹ ಸದುಪಯೋಗ ಮಾಡಿ ಶಿಸ್ತು, ಸಮಯಪಾಲನೆಯೊಂದಿಗೆ ಉತ್ತಮ ಸಂಸ್ಕಾರ ನೀಡಿ ವ್ಯಕ್ತಿತ್ವ […]

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟಾಭಿಷೇಕದ ಸುವರ್ಣ ಮಹೋತ್ಸವ: ಕಲ್ಕೂರವರಿಂದ ಅಭಿನಂದನೆ

Wednesday, October 24th, 2018
veerendra-heggde

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟಾಭಿಷೇಕದ ಸುವರ್ಣ ಮಹೋತ್ಸವದ ಸಂದರ್ಭ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ, ಹೆಗ್ಗಡೆಯವರನ್ನು ಹೂ ಹಾರ ಫಲವಸ್ತು ನೀಡುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ಉಪ ಪ್ರಭಾರಿ ಪ್ರತಾಪ ಸಿಂಹ ನಾಯಕ್, ಸುರತ್ಕಲ್ ಬ್ಲಾಕ್‌ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ ಹಾಗೂ ಜನಾರ್ದನ ಹಂದೆ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ […]

ಶ್ರಮಿಕ ಸಂತ ಜೋಸೆಫರ ದೇವಾಲಯ, ನೀರುಮಾರ್ಗ ಸುವರ್ಣ ಮಹೋತ್ಸವ

Thursday, April 19th, 2018
neermarga

ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ನೀರುಮಾರ್ಗದಲ್ಲಿ 1935 ರಲ್ಲಿ ಪ್ರಾರಂಭಗೊಂಡ ಚರ್ಚ್ ಎಪ್ರಿಲ್ 30 ರ ಸೋಮವಾರ ತನ್ನ ಸ್ಥಾಪನೆಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಈ ಚರ್ಚ್ ಮುರಕಲ್ಲುಗಳಿಂದ ಕೂಡಿದ್ದು, ಇಂದು ಈ ಪ್ರದೇಶದಲ್ಲಿ ತೆಂಗು, ಕಂಗು, ತರಕಾರಿ ಮುಂತಾದ ಬೆಳೆಗಳಿಂದ ಹಸಿರು ಪ್ರದೇಶವಾಗಿ ಕಂಗೊಳಿಸುತ್ತಿದೆ. ಈ ಚರ್ಚ್ ನ ವಠಾರದಲ್ಲಿ ಕನ್ನಡ ಮಾಧ್ಯಮ ಶಾಲೆ ಇದ್ದು, 400ಕ್ಕೂ ಹೆಚ್ಚಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುತ್ತಿದೆ. 102 ವರ್ಷಗಳಿಂದ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿರುವ ಈ ಶಾಲೆ […]

ಧರ್ಮಸ್ಥಳ: ಹೆಗ್ಗಡೆ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ಸಿದ್ಧತೆ

Saturday, October 14th, 2017
veerendra heghde

ಉಜಿರೆ: ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ 1968ರ ಅ. 24ರಂದು ಸಂಪ್ರದಾಯದಂತೆ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಡಿ. ವೀರೇಂದ್ರ ಹೆಗ್ಗಡೆ ಅವರು 50 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು, ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ವರ್ಧಂತ್ಯುತ್ಸವವು ಇದೇ 24ರಂದು ನಡೆಯಲಿದೆ. ಧರ್ಮಸ್ಥಳದ ಸಿಬ್ಬಂದಿ, ಊರಿನ ನಾಗರಿಕರು ಹಾಗೂ ಭಕ್ತಾಭಿಮಾನಿಗಳು ಸರಳ ರೀತಿಯಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ. ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. 24ರಂದು ಸಂಜೆ 5.30ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ […]