ಸೂರಲ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಎನ್ನೆಸ್ಸಸ್ ಶಿಬಿರ ಸಮಾರೋಪ

Tuesday, October 22nd, 2019
NSS

ಮಂಗಳೂರು : ವಿದ್ಯಾರ್ಥಿದೆಸೆಯಿಂದಲೇ ಮಕ್ಕಳಿಗೆ ನಾಯಕತ್ವ ಗುಣ, ಕೂಡಿಬಾಳುವುದು, ಸಾಮರಸ್ಯದ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ. ಇಲಾಖೆಯ ನಿರ್ದೇಶನದಂತೆ ಸೈಂಟ್ ರೈಮಂಡ್ಸ್ ಪದವಿ ಪೂರ್ವ ಕಾಲೇಜು ವಾಮಂಜೂರು ಇದರ 7 ದಿನಗಳ ವಾರ್ಷಿಕ ವಿಶೇಷ ಶಿಬಿರವು ಶುಭದ ಸಂಸ್ಥೆಯ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಲ್ಪಾಡಿಯಲ್ಲಿ ನಡೆದು ಸಮಾರೋಪಗೊಂಡಿತು. ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಶುಭದ ಸಂಸ್ಥೆಯ ನಿರ್ದೇಶಕರಾದ ವಂ| ಭಗಿನಿ ಲೀನಾ ಪಿರೇರಾರವರು ವಹಿಸಿ, ವ್ಯಕ್ತಿತ್ವ ವಿಕಸನದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಎನ್ನೆಸ್ಸಸ್ ಸಹಾಯಕ ಎಂದರು. […]

ಕದ್ದು ತಂದು 18 ಆಟೋರಿಕ್ಷಾಗಳನ್ನು ಗುಜಿರಿ ಅಂಗಡಿಯಲ್ಲಿಟ್ಟಿದ್ದ ವ್ಯಾಪಾರಿ

Wednesday, July 10th, 2019
stolen-auto

ಮಂಗಳೂರು: ಸೂರಲ್ಪಾಡಿಯಲ್ಲಿ 18 ಆಟೋರಿಕ್ಷಾಗಳನ್ನು ದಾಖಲೆ ರಹಿತವಾಗಿ ‌ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಉಳಾಯಿಬೆಟ್ಟು ನಿವಾಸಿ ಇರ್ಫಾನ್ (28) ಬಂಧಿತ ಆರೋಪಿ. ಬಜ್ಪೆ ಪೊಲೀಸ್ ಠಾಣಾ ಸರಿಹದ್ದಿನ ಬಡಗುಳಿಪ್ಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿ, ಕಾಂಪ್ಲೆಕ್ಸ್ವೊಂದರ ಸಮೀಪದ ಗುಜರಿ ಅಂಗಡಿ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಯಾವುದೇ ದಾಖಲಾತಿ ಇಲ್ಲದ ಆಟೋರಿಕ್ಷಾಗಳನ್ನು ಇರ್ಫಾನ್ ಕಳವು ಮಾಡಿ ತಂದಿರಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ನಿರೀಕ್ಷಕ ಎಸ್. ಪರಶಿವಮೂರ್ತಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು […]

ಸೂರಲ್ಪಾಡಿಯಲ್ಲಿ ಹಿಂದೂ ಮುಖಂಡನ ಮೇಲೆ ತಲವಾರು ದಾಳಿ, ಗಂಭೀರ ಸ್ಥಿತಿ

Monday, September 24th, 2018
Harish-Shetty

ಮಂಗಳೂರು :  ಹಿಂದೂ ಮುಖಂಡರೊಬ್ಬರಿಗೆ ತಲವಾರು ದಾಳಿ ನಡೆಸಿದ ಘಟನೆ ಸೋಮವಾರ  ರಾತ್ರಿ 8 ಗಂಟೆಯ ಸುಮಾರಿಗೆ ಮಂಗಳೂರು ಹೊರವಲಯದ ಸೂರಲ್ಪಾಡಿಯಲ್ಲಿ ನಡೆದಿದೆ. ಮೂಡಬಿದ್ರೆಯಲ್ಲಿ ಬೆಳಿಗ್ಗೆ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮೇಲೆ ತಲವಾರು ಬೀಸಿದ ಘಟನೆ  ಬೆನ್ನಲ್ಲೇ ಇದೀಗ ಮತ್ತೆ ಸೂರಲ್ಪಾಡಿಯಲ್ಲಿ ಭಯದ ವಾತಾವರಣ ಮರುಕಳಿಸಿದೆ. ಸೂರಲ್ಪಾಡಿ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಕೈಕಂಬದ ವಿಶ್ವಹಿಂದೂ ಪರಿಷತ್ ವಲಯಾಧ್ಯಕ್ಷ ಹರೀಶ್ ಶೆಟ್ಟಿ ಪೊಳಲಿ ದಾಳಿಗೆ ದಾಳಿ ನಡೆಸಿ ಪರಾರಿಯಾಗಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಅವರನ್ನ ನಗರದ ಖಾಸಗಿ […]