ಸೌಜನ್ಯ ಕೊಲೆ ಪ್ರಕರಣ: ಸಿಬಿಐ ವಿಶೇಷ ತನಿಖೆಗೆ ಸೌಜನ್ಯ ಪೋಷಕರ ಸ್ವಾಗತ
Wednesday, February 15th, 2017ಮಂಗಳೂರು: ಸೌಜನ್ಯಳ ಅಸಹಜ ಸಾವಿನ ಪ್ರಕರಣವನ್ನು ಮರುತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿರುವುದನ್ನು ಮೃತಳ ಪೋಷಕರು ಸ್ವಾಗತಿಸಿದ್ದಾರೆ. ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂವರನ್ನು ತನಿಖೆಗೊಳಪಡಿಸಿದರೆ ಪ್ರಕರಣಕ್ಕೆ ನ್ಯಾಯ ಸಿಗುತ್ತದೆ ಎಂದು ಆಕೆಯ ತಾಯಿ ಕುಸುಮಾವತಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಳ ಪ್ರಕರಣ ಆರಂಭದಿಂದಲೇ ಸರಿಯಾಗಿ ತನಿಖೆಯಾಗಿರಲಿಲ್ಲ. ರಾತ್ರಿಯಾದರೂ ಮನೆಗೆ ಬಾರದ ಮಗಳನ್ನು ಅಂದು ಸಾಕಷ್ಟು ಹುಡುಕಲಾಗಿತ್ತು. ಆದರೆ, ಮರುದಿನ ಹುಡುಕಾಡಿದ ಜಾಗದಲ್ಲೇ ಅಂದರೆ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಕೂಗಳತೆ ದೂರದಲ್ಲೇ […]