ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ವಿಚಾರಣೆಯನ್ನು ತಿರಸ್ಕರಿಸಿದ ದೆಹಲಿಯ ಹಸಿರು ಪೀಠ

Thursday, July 28th, 2016
NGT

ಮಂಗಳೂರು: ರಾಜ್ಯದ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ವಿಚಾರಣೆಯನ್ನು ಮರಳಿ ಚೆನ್ನೈ ಹಸಿರು ಪೀಠಕ್ಕೆ ವರ್ಗಾಯಿಸಬೇಕು ಎಂಬ ಕರ್ನಾಟಕ ನೀರಾವರಿ ನಿಗಮ(ಕೆಎನ್ಎನ್ಎಲ್)ದ ಬೇಡಿಕೆಯನ್ನು ದೆಹಲಿಯ ಹಸಿರು ಪೀಠ ತಿರಸ್ಕರಿಸಿದೆ. ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧದ ಎಲ್ಲಾ ನಾಲ್ಕು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಪಂಚ ಸದಸ್ಯರ ಹಸಿರು ಪೀಠ, ಕೆಎನ್ಎನ್ಎಲ್ ಪರವಾಗಿ ವಕೀಲ ನವೀನ್ ಆರ್.ನಾಥ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತು. ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧದ ನಾಲ್ಕು ಪ್ರಕರಣಗಳನ್ನು ತಾಂತ್ರಿಕ ಕಾರಣಗಳಿಗೆ ಚೆನ್ನೈ ಹಸಿರು ಪೀಠದಿಂದ ದೆಹಲಿಯ ಮುಖ್ಯ ಪೀಠಕ್ಕೆ […]

ದಾಸರ ಕೀರ್ತನೆಗಳ ಕಂಪನ್ನು ಮನೆ ಮನೆಗೆ ಮುಟ್ಟಿಸಬೇಕು

Monday, February 8th, 2016
Vishnumurty Temple

ಬದಿಯಡ್ಕ: ವೇದ, ಉಪನಿಷತ್ತುಗಳಲ್ಲಿ ಬರುವ ಜಠಿಲವಾದ ವಿಷಯಗಳನ್ನು ಸರಳವಾಗಿ ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೂ ತಿಳಿಯುವಂತೆ ತಿಳಿದು ಹೇಳಿದವರು ಪುರಂದರ ದಾಸರು. ಜಗತ್ತಿನ ಎಲ್ಲಾ ಆಗು ಹೋಗುಗಳನ್ನು ತಮ್ಮ ಕೀರ್ತನೆಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಹೇಳಿದರು. ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಪುರಂದರ ದಾಸರ ಆರಾಧನಾ ಮಹೋತ್ಸವದಂಗವಾಗಿ ಪುರಂದರದಾಸರ ಸಾಹಿತ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ದಾಸ ಪರಂಪರೆಯಲ್ಲಿ ಶ್ರೇಷ್ಠರೆನಿಸಿರುವ […]