ಆಳ್ವಾಸ್ ವಿದ್ಯಾರ್ಥಿಗಳಿಂದ ’ಪ್ಲಾಗಿಂಗ್’

Monday, February 17th, 2020
alvas

ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ಓಶಿಯನಸ್-2020 ಫೆಸ್ಟ್‌ನ ಪೂರ್ವಭಾವಿಯಾಗಿ ಆದಿತ್ಯವಾರ ಇಲ್ಲಿನ ಸ್ವರಾಜ್ಯ ಮೈದಾನದಿಂದ ಆಲಂಗಾರಿನವರೆಗಿನ ರಸ್ತೆಯ ಬದಿಯಲ್ಲಿ ವಿಶೇಷ ’ಪ್ಲಾಗಿಂಗ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾನವಿಕ ವಿಭಾಗದ 150 ವಿದ್ಯಾರ್ಥಿಗಳು ಬೆಳಿಗ್ಗೆ ಏಳು ಗಂಟೆಗೆ ಸ್ವರಾಜ್ಯ ಮೈದಾನದಿಂದ ರಸ್ತೆಯ ಎರಡೂ ಬದಿಯ ಪ್ಲಾಸ್ಟಿಕ್ ಕಸಗಳನ್ನು ಚೀಲಗಳಲ್ಲಿ ತುಂಬಿ ಸ್ವಚ್ಛಗೊಳಿಸಿದರು. ಆರೋಗ್ಯಕ್ಕಾಗಿ ಜಾಗಿಂಗ್, ಸ್ವಚ್ಛತೆಗಾಗಿ ಪ್ಲಾಗಿಂಗ್ ಎಂಬ ಘೋಷವನ್ನಿರಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂಡುಬಿದಿರೆ ಪುರಸಭೆಯವರು ವಿದ್ಯಾರ್ಥಿಗಳಿಗೆ ಕಸ ವಿಲೇವಾರಿಯಲ್ಲಿ ಸಹಕರಿಸಿದರು. ರೋಟರಿ ಕ್ಲಬ್ […]

ಮೂಡುಬಿದಿರೆ : 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್

Monday, January 6th, 2020
moodbidri

ಮೂಡುಬಿದಿರೆ : 2೦ಕಿಮೀ. ನಡಿಗೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಮಂಗಳೂರು ವಿವಿಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಪ್ರತಾಪ್ ನಾಲ್ಕನೇ ದಿನ 5 ಸಾವಿರ ಮೀ. ಓಟದಲ್ಲಿಯೂ ಕೂಟ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ನ ನಾಲ್ಕನೇ ದಿನವಾದ ಭಾನುವಾರ ಪುರುಷರ ವಿಭಾಗದ 5 ಸಾವಿರ ಮೀಟರ್(5ಕಿ.ಮೀ.) ಓಟವನ್ನು 14ನಿಮಿಷ 17.77ಸೆಕೆಂಡ್ ನಲ್ಲಿ ಕ್ರಮಿಸಿದ ನರೇಂದ್ರ ಪ್ರತಾಪ್ ಸಿಂಗ್, ಪಂಜಾಬಿ ವಿವಿಯ ಸುರೇಶ್ ಕುಮಾರ್ (14 […]