ಮಂಜನಾಡಿಯಲ್ಲಿ ಸತ್ತ ಕಾಗೆಗಳಿಗೆ ಹಕ್ಕಿಜ್ವರವಿಲ್ಲ – ವರದಿ

Monday, January 11th, 2021
crow

ಮಂಗಳೂರು: ಮಂಜನಾಡಿ ಗ್ರಾಮದ ಆರಂಗಡಿ ಬಳಿ ಸತ್ತು ಬಿದ್ದಿದ್ದ ಕಾಗೆಯ ಮರಣೋತ್ತರ ವರದಿ ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೈ ಸೇರಿದ್ದು, ವರದಿಯಲ್ಲಿ ನೆಗೆಟಿವ್‌ ಕಾಣಿಸಿಕೊಂಡಿದೆ. ಇದರೊಂದಿಗೆ ಸಾರ್ವಜನಿಕರಲ್ಲಿದ್ದ ದೊಡ್ಡ ಆತಂಕ ಕೂಡ ಮರೆಯಾಗಿದೆ. ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರದ ಭೀತಿ ನಡುವೆ  ಮಂಜನಾಡಿಯಲ್ಲಿ ಸತ್ತು ಬಿದ್ದ ಕಾಗೆಗಳಿಂದ ಜನ ಆತಂಕ ಗೊಂಡಿದ್ದರು. ಅದರಂತೆ  ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಇದರಲ್ಲಿ ಒಂದು ಕಾಗೆ ಹೊರತುಪಡಿಸಿ ಉಳಿದ ಕಾಗೆಗಳ ಅಸ್ತಿಪಂಜರ ಪೂರ್ಣವಾಗಿ ಕೊಳೆತು ಹೋಗಿತ್ತು. […]

ಮಂಜನಾಡಿ : ಒಂದೇ ಕಡೆ ಹಲವು ಕಾಗೆಗಳ ಸಾವು, ಸ್ಥಳೀಯರಲ್ಲಿ ಆತಂಕ

Wednesday, January 6th, 2021
crow death

ಮಂಗಳೂರು: ಮಂಜನಾಡಿ ಗ್ರಾಮದ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಕಾಗೆಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿದೆ. ಹಕ್ಕಿಜ್ವರದ ಎಚ್ಚರಿಕೆ ಹಿನ್ನೆಲೆ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಪಶು ರೋಗ ತನಿಖಾ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಶೆಟ್ಟಿ ತಿಳಿಸಿದ್ದಾರೆ. ಮಂಜನಾಡಿಯ ಅರಂಗಡಿಯ ಗುಡ್ಡ ಪ್ರದೇಶದಲ್ಲಿ ಒಂದೇ ಕಡೆ ಆರಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿರುವುದು ಮಂಗಳವಾರ ಪತ್ತೆಯಾಗಿತ್ತು. ಇದು  ವಿಷಾಹಾರದಿಂದ ಸತ್ತಿದೆಯೇ ಅಥವಾ ವಿದ್ಯುತ್ ಆಘಾತಕ್ಕೊಳಗಾಗಿ ಸತ್ತಿದೆಯೇ ಎಂದು ಸ್ಥಳೀಯರು ಸಂಶಯ […]