ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್​ ವಿದ್ಯಾರ್ಥಿ

Monday, October 21st, 2019
harsha

ಆನೇಕಲ್ : ಈತ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಪ್ರತಿಷ್ಠಿತ ಕಂಪನಿಯೊಂದರ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿದ್ದ. ವರ್ಷಕ್ಕೆ 14 ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಅದಾಗಿತ್ತು. ಕಂಪನಿ ಕಾಲ್ ಲೆಟರ್ನ್ನೂ ಕೊಟ್ಟಿತ್ತು. ಇಷ್ಟೆಲ್ಲ ಆದ ಮೇಲೆ ಈಗ ಆ ಯುವಕ ತಾನು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ಏಳನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮೃತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಹರ್ಷ ಮೃತ ವಿದ್ಯಾರ್ಥಿ. ಈತನನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಅಷ್ಟೇ ಅಲ್ಲದೆ […]

ಹಿಂದೂರಾಷ್ಟ್ರ ಎಂದ ಯುವಕನ ಮೇಲೆ ಹಲ್ಲೆ : ಐವರು ಆರೋಪಿಗಳ ಬಂಧನ

Thursday, September 26th, 2019
5-aropigalu

ಮಂಗಳೂರು : ಮಂಗಳೂರಿನ ಮಾಲ್ ವೊಂದರಲ್ಲಿ ಹಿಂದೂರಾಷ್ಟ್ರದ ಬಗ್ಗೆ ಮಾತನಾಡಿದ ಯುವಕನಿಗೆ ಗುಂಪುಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಒಟ್ಟು ಐದು ಮಂದಿಯನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ ಪಿ ಎಸ್ ಹರ್ಷ ತಿಳಿಸಿದ್ದಾರೆ. ಮಂಜುನಾಥ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಐವರಲ್ಲಿ ಓರ್ವ ಬಾಲಾಪರಾಧಿಯಾಗಿದ್ದಾನೆ. ಅಬ್ದುಲ್ ರಹಿಮ್ ಸಾದ್, ಮುಹಿಯ್ಯುದ್ದೀನ್ ಸಫ್ವಾನ್, ಫರಾನ್ ಫಾರೂಕ್, ಮುಹಮ್ಮದ್ ಮರ್ಝಕ್ ಬಂಧಿತರು. ಇವರೆಲ್ಲರೂ ವಿದ್ಯಾರ್ಥಿಗಳಾಗಿದ್ದು ಮಾಲ್ ನಲ್ಲಿ ಮಾತನಾಡುತ್ತಿದ್ದ ಮಂಜುನಾಥ್ ಗೆ […]

ಮಂಗಳೂರು : ವಾಹನಗಳ ಕರ್ಕಶ ಹಾರ್ನ್ ವಿರುದ್ಧ ಸಂಚಾರಿ ಪೊಲೀಸರ ಕಾರ್ಯಾಚರಣೆ

Tuesday, August 20th, 2019
Karkasha-horn

ಮಂಗಳೂರು : ವಾಹನಗಳ ಕರ್ಕಶ ಹಾರ್ನ್ ವಿರುದ್ಧ ನಗರದ ಪಾಂಡೇಶ್ವರ ಸಂಚಾರಿ ಪೊಲೀಸರು ಇಂದು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಸರಕಾರಿ ವಾಹನಗಳೂ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು ಈ ಪೈಕಿ ಸುಮಾರು 15 ವಾಹನಗಳಲ್ಲಿ ಅಳವಡಿಸಲಾಗಿದ್ದ ಕರ್ಕಶ ಹಾರ್ನ್ ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಹರ್ಷ ಅವರು, ‘ಕರ್ಕಶ ಹಾರ್ನ್ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದ್ದು ಇನ್ನು ಮಂಗಳೂರು ಸ್ವಲ್ಪ […]