Blog Archive

ಬಜೆಟ್​ನಲ್ಲಿ ಹಾಸನ, ಮಂಡ್ಯ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ…ಬಿಜೆಪಿ ಶಾಸಕರು ಮೇಜು ಕುಟ್ಟಿ ವ್ಯಂಗ್ಯ!

Thursday, July 5th, 2018
BJP-MLA

ಬೆಂಗಳೂರು: ಆಯವ್ಯಯ ಭಾಷಣದ ಸಂದರ್ಭ ಲೋಕೋಪಯೋಗಿ ಇಲಾಖೆಯ ಯೋಜನೆಯನ್ನು ಸಿಎಂ ಓದುತ್ತಿದ್ದ ಹಾಗೇ ಬಿಜೆಪಿ ಶಾಸಕರು ಮೇಜು ಕುಟ್ಟಿ ವ್ಯಂಗ್ಯವಾಡಿದರು. ಆಯವ್ಯಯದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಕೇವಲ ಹಾಸ್ಯಕ್ಕೆ ಸೀಮಿತಗೊಳಿಸಿರುವ ಬಗ್ಗೆ ಬಿಜೆಪಿ ಶಾಸಕರು ಮೇಜು ಕುಟ್ಟಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯಲ್ಲಿ ಹಾಸನಕ್ಕೆ ಹೊರ ವರ್ತುಲ ರಸ್ತೆ ನಿರ್ಮಾಣಕ್ಕಾಗಿ 30 ಕೋಟಿ ರೂ. ಮೀಸಲಿರಿಸಲಾಗಿದೆ. ಉಳಿದಂತೆ ಇತರ ಯಾವುದೇ ಜಿಲ್ಲೆಗಳಲ್ಲಿನ ಲೋಕೋಪಯೋಗಿ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದೇ […]

ಹಾಸನ ಜಿಲ್ಲೆಯನ್ನು ನಂ.1 ಮಾಡಿದವರಿಗೆ ಅವಾರ್ಡ್‌ : ಸಚಿವ ಹೆಚ್.ಡಿ.ರೇವಣ್ಣ

Thursday, June 14th, 2018
h-d-revanna

ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಜಿಲ್ಲೆಯೂ ಎಲ್ಲಾ ಕ್ಷೇತ್ರದಲ್ಲಿಯೂ ನಂ.1 ಮಾಡಬೇಕು. ಉತ್ತಮ ಕಾರ್ಯ ಮಾಡುವ ಪಿಡಿಓ ಮತ್ತು ಕಾರ್ಯದರ್ಶಿಗಳಿಗೆ ಅವಾರ್ಡ್ ನೀಡುವುದಾಗಿ ಸಚಿವರು ಘೋಷಿದರು. 25 ರಿಂದ 50 ಸಾವಿರ ರೂ. ವರೆಗೂ ಬಹುಮಾನದೊಂದಿಗೆ ಪ್ರಮಾಣಪತ್ರ ನೀಡುವುದಾಗಿ ತಿಳಿಸಿದರು. 600ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರಿಂದ ಹೇಮಾವತಿ ಸಂಭಾಗಣ ತುಂಬಿ ತುಳುಕುತ್ತಿತ್ತು. ಸಂಭಾಗಣದಲ್ಲಿ ಕೂರಲು ಸ್ಥಳವಿಲ್ಲದೇ ಹೊರಾಂಗಣದಲ್ಲಿ, ಮೀಟಿಂಗ್ […]

ಹಾಸನ ಡಿಸಿ ಸಿಂಧೂರಿ ವರ್ಗಾವಣೆ ವಿಚಾರ: ಇಂದು ಸಿಎಟಿಯಿಂದ ತೀರ್ಪು

Wednesday, March 21st, 2018
rohini-sinduri

ಹಾಸನ: ಡಿಸಿ‌ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ವಿಚಾರ ಸಂಬಂಧ ಇಂದು ‌ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆಯಲಿದ್ದು, ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ. ಸಿಂಧೂರಿ ‌ಹಾಸನ ಡಿಸಿಯಾಗಿ ಮುಂದುವರಿಕೆ ಇಲ್ಲವೇ ‌ವರ್ಗಾವಣೆ ಬಗ್ಗೆ ಇಂದು‌ ನಿರ್ಧಾರ ಪ್ರಕಟವಾಗಲಿದೆ. ಅವಧಿಗೂ ಮುನ್ನ ವರ್ಗಾವಣೆ ಪ್ರಶ್ನಿಸಿ ಮಾ. 8ರಂದು ಸಿಂಧೂರಿ ಸಿಎಟಿ‌ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸಿಎಟಿ ಸರ್ಕಾರದ ಆದೇಶಕ್ಕೆ‌ ತಡ ‌ನೀಡಿತ್ತು. ಮೊದಲು ಮಾ. 13ಕ್ಕೆ‌ ವಿಚಾರಣೆ ನಿಗದಿಯಾಗಿತ್ತು. ನಂತರ ಮಾ. 21ಕ್ಕೆ ಮುಂದೂಡಲಾಗಿತ್ತು. ಸಿಎಟಿಯ […]

ಮಂಗಳೂರು ಮೂಲದ ಸೋದರರಿಬ್ಬರು ಹಾಸನದಲ್ಲಿ ಆತ್ಮ ಹತ್ಯೆ

Tuesday, March 7th, 2017
youth died

ಮಂಗಳೂರು  : ವಿಪರೀತ ಸಾಲ ಮಾಡಿ ತೀರಿಸಲಾಗದೆ ಮಂಗಳೂರಿನ ಸೋದರರಿಬ್ಬರೂ ಹಾಸನದ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ಘಟನೆ ಮಂಗಳವಾರ ಬೆಳಿಗ್ಗೆ  ನಡೆದಿದೆ. ಆತ್ಮ ಹತ್ಯೆ ಮಾಡಿಕೊಂಡವರನ್ನು ಮಂಗಳೂರು ಮೂಲದ ಲೋಕನಾಥ್ (43) ಹಾಗೂ ಪುರುಷೋತ್ತಮ್ (46) ಎನ್ನಲಾಗಿದ್ದು,  ಇವರು ನಗರದ ಬಿ.ಎಂ. ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಇಬ್ಬರು ಸಹೋದರರು ಕಳೆದ ನಾಲ್ಕು ದಿನಗಳ ಹಿಂದೆ ವಸತಿಗೃಹವೊಂದರಲ್ಲಿ ರೂಂನ್ನು ಬಾಡಿಗೆಗೆ ಪಡೆದಿದ್ದು, ಮಾರ್ಚ್ 5ರ ವರೆಗೂ ಇಬ್ಬರೂ ತಿರುಗಾಡಿಕೊಂಡು ಇದ್ದರು. ನಂತರದಲ್ಲಿ ಇಬ್ಬರೂ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ವಸತಿಗೃಹ ಸಿಬ್ಬಂದಿ ಈ […]