ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದ್ದಾರೆ : ರಾಧಾಕೃಷ್ಣ ಅಡ್ಯಂತಾಯ

Thursday, November 25th, 2021
Radhakrishna

ಮಂಗಳೂರು : ಹಿಂದೂ ಜಾಗರಣ ವೇದಿಕೆಯ  ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ ವಿರುದ್ಧ ದೂರು ದಾಖಲಿಸುವ ಮೂಲಕ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಕಾರಿಂಜ ಕ್ಷೇತ್ರದಲ್ಲಿ ಹಾಕಲಾದ ಭಗವಧ್ವಜವನ್ನು ತೆಗೆಯಬೇಕು ಎಂದು ಪುಂಜಾಲಕಟ್ಟೆ ಠಾಣೆಯ ಎಸ್ಸೈ ಸೌಮ್ಯ ಸೂಚಿಸಿದ್ದಾರೆ. ನಾವು ಆ ಧ್ವಜವನ್ನು ತೆಗೆಯುವುದಿಲ್ಲ. ಇನ್ನೊಂದು ವಾರದೊಳಗೆ ಅಂತಹ ಸಾವಿರ ಧ್ವಜ ಹಾಕಿಸುತ್ತೇವೆ. ತಾಕತ್ತಿದ್ದರೆ ಅದನ್ನು […]

ಅನ್ಯಕೋಮಿನ ಪುರುಷರೊಂದಿಗೆ ಮಹಿಳೆ, ಲಾಡ್ಜ್ ಗೆ ನುಗ್ಗಿ ಹಲ್ಲೆ

Tuesday, September 21st, 2021
Putturu Lodge

ಪುತ್ತೂರು : ಅನ್ಯಕೋಮಿನ ಪುರುಷರೊಂದಿಗೆ ಮಹಿಳೆಯೊಬ್ಬರು ಲಾಡ್ಜ್ನಲ್ಲಿ ತಂಗಿರುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲಾಡ್ಜ್ ಮೇಲೆ ದಾಳಿ ನಡೆಸಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರ ಮೇಲೆ ಹಲ್ಲೆ ಎಸಗಿರುವುದಾಗಿ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅನ್ಯಕೋಮಿನ ಪುರುಷರ ಜೊತೆ ಲಾಡ್ಜ್ನಲ್ಲಿ ತಂಗಿದ್ದ ಮಹಿಳೆ ಮೇಲೆ ಹಲ್ಲೆಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ಕಳೆದ ಎರಡು ದಿನಗಳಿಂದ ಬೆಂಗಳೂರು ಮೂಲದ ಮಹಿಳೆ ತಂಗಿದ್ದರು. ಸೆಪ್ಟಂಬರ್ 17 ರಂದು ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದು, ಸೆಪ್ಟಂಬರ್ 18 […]

ರಾಜ್ಯ ಹೊತ್ತಿಸುವುದಾಗಿ ಹೇಳಿಕೆ ನೀಡಿರುವ ಶಾಸಕ ಯು.ಟಿ.ಖಾದರ್‌ರವರ ಮಾತುಗಳೇ ಜಿಹಾದಿ ಶಕ್ತಿಗಳಿಗೆ ಪ್ರೇರಕ : ಕೆದಿಲ

Tuesday, August 17th, 2021
Vedike

ಮಂಗಳೂರು :  ರಾಜ್ಯ ಹೊತ್ತಿಸುವುದಾಗಿ ಹೇಳಿಕೆ ನೀಡಿರುವ ಶಾಸಕ ಯು.ಟಿ.ಖಾದರ್‌ರವರ ಮಾತುಗಳೇ ಜಿಹಾದಿ ಶಕ್ತಿಗಳಿಗೆ ಪ್ರೇರಕವಾಗಿದೆ  ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಗಣರಾಜ್ ಭಟ್ ಕೆದಿಲ ಹೇಳಿಕೆ ನೀಡಿದ್ದಾರೆ. ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪ ಇಂದು ಹಿಂದೂ ಜಾಗರಣ ವೇದಿಕೆಯ ಮಂಗಳೂರು ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು,  ಎಳನೀರು ಕೆತ್ತುವ, ಹೊಟೇಲ್‌ಗಳಲ್ಲಿ ಕ್ಲೀನರ್ ಆಗಿ, ರಿಕ್ಷಾದಲ್ಲಿ ಮಕ್ಕಳನ್ನು ಕರೆದೊಯ್ಯುವ, ಮೊಬೈಲ್ ಕರೆನ್ಸಿ ಹಾಕುವ ಸೇರಿದಂತೆ ನಾನಾ ರೂಪದಲ್ಲಿ ಜಿಹಾದಿ ಶಕ್ತಿಗಳಿವೆ ಎಂದರು. ವಿವಿಧ ರೂಪದಲ್ಲಿ […]

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮೇಲೆ ತಲವಾರು, ಮರದ ಸೋಂಟೆಯಿಂದ ಮಾರಣಾಂತಿಕ ಹಲ್ಲೆ

Monday, March 15th, 2021
Anil Poojary

ಕಾರ್ಕಳ : ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗಳ ದಳ ಕಾರ್ಯಕರ್ತರ ತಂಡದ ನಡುವೆ ತಲವಾರು ದಾಳಿ ನಡೆದಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನನ್ನು ಮರಣಾತಿಕ ಹಲ್ಲೆ ನಡೆಸಿ  ಕೊಲೆಗೆ ಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.14ರಂದು ರಾತ್ರಿ 10:30ರ ಸುಮಾರಿಗೆ ನಿಟ್ಟೆ ಪರಪ್ಪಾಡಿ ನಿವಾಸಿ ಅನಿಲ್ ಪೂಜಾರಿ(29) ಎಂಬವರ ಮೇಲೆ ಪರಪ್ಪಾಡಿ ಎಂಬಲ್ಲಿ ಆರೋಪಿಗಳಾದ ಬಜರಂಗದಳ ಕಾರ್ಯಕರ್ತರೆನ್ನಲಾದ ಸುನೀಲ್, ಸುಧೀರ್, ಪ್ರಸಾದ್, ಶರತ್, ಜಗದೀಶ್ ಪೂಜಾರಿ ಎಂಬವರು ಅನಿಲ್ ಮೇಲೆ ತಲವಾರು ದಾಳಿ ನಡೆಸಿದ್ದಾರೆಂದು  ಆರೋಪಿಸಲಾಗಿದೆ. […]

ಪದವಿನಂಗಡಿಯಲ್ಲಿ ಶಿವಾಜಿ ಮೂರ್ತಿ ಸ್ಥಾಪಿಸಲು ಕಟ್ಟಲಾಗಿದ್ದ ಕಟ್ಟೆ ತೆರವುಗೊಳಿಸಿದ ಪೊಲೀಸರು

Monday, December 7th, 2020
Shivaji

ಮಂಗಳೂರು :  ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದ ಹೊರವಲಯದ ಪದವಿನಂಗಡಿ ಬಳಿ ಅಶ್ವತ್ಥಮರದ ಕಟ್ಟೆ ಎದುರುಗಡೆ ಶಿವಾಜಿ ಮೂರ್ತಿ ಇರಿಸಲು ಸಿದ್ಧತೆಗಳನ್ನು ನಡೆಸಿದ್ದರು, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಮೂರ್ತಿ ಸ್ಥಾಪಿಸಲು ಕಟ್ಟಲಾಗಿದ್ದ ಕಟ್ಟೆಯನ್ನು ತೆರವುಗೊಳಿಸಿದ್ದಾರೆ. ಪದವಿನಂಗಡಿ ಅಶ್ವತ್ಥಕಟ್ಟೆಯ ಎದುರಿನ ಜಾಗದಲ್ಲಿ ಶಿವಾಜಿ ಮೂರ್ತಿ ಇರಿಸಲು ಹಿಂಜಾವೇ ಕಾರ್ಯಕರ್ತರು ಶನಿವಾರ ರಾತ್ರಿ ಕಟ್ಟೆಯೊಂದನ್ನು ಕಟ್ಟಿ ಕೆಲಸ ಆರಂಭಿಸಲು ಮುಂದಾದಾಗ ಇನ್ನೊಂದು ಗುಂಪಿನಿಂದ ವಿರೋಧ ವ್ಯಕ್ತವಾಯಿತು. ಈ ವಿಚಾರ ಪೊಲೀಸರಿಗೆ ಗೊತ್ತಾಯಿತು. ರವಿವಾರ ಸ್ಥಳಕ್ಕೆ ಆಗಮಿಸಿದ […]

ಕನ್ಹಯ್ಯ ಕುಮಾರ್ ಮಂಗಳೂರು ಆಗಮನಕ್ಕೆ ಎಬಿವಿಪಿ ಪ್ರತಿರೋಧ

Saturday, August 10th, 2019
Kannaya kumar

ಮಂಗಳೂರು :  ಶನಿವಾರ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಕನ್ಹಯ್ಯ ಕುಮಾರ್ ಭಾಗವಹಿಸಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಹಿರಿಯ ಸ್ವಾತಂತ್ರ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಯ ಧುರೀಣ ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿ ಅಂಗವಾಗಿ ಸಹೋದಯ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಭಾಷಣಕಾರರಾಗಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಭಾಗವಹಿಸಿದ್ದಾರೆ. ಕನ್ಹಯ್ಯ ಕುಮಾರ್ […]

ಗೋವಂಶ ರಕ್ಷಣೆಗೆ ಜು.3ರಂದು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ

Saturday, June 29th, 2019
Go vamsa

ಮಂಗಳೂರು : ಗೋಕಳ್ಳತನ, ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ, ಗೋಹತ್ಯೆ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಗೋಕಳ್ಳರು ಮನೆಗೇ ನುಗ್ಗಿ ಹಟ್ಟಿಗಳಿಂದ ಕಳವು ಮಾಡುತ್ತಿರುವುದು ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಸಂಪೂರ್ಣ ಗೋವಂಶ, ಗೋರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಜು.3ರಂದು ದ.ಕ. ಹಾಗೂ ಉಡುಪಿ ಜಿಲ್ಲೆಯ ತಾಲೂಕಿನಾದ್ಯಂತ ಧರಣಿ ಪ್ರತಿಭಟನಾ ಸಭೆ ನಡೆಯಲಿದೆ  ಎಂದು ವಿಹಿಂಪ ಪ್ರಾಂತ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ. ವಿಹಿಂಪ, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ  ಪ್ರತಿಭಟನಾ ಸಭೆ ನಡೆಯಲಿದೆ. ಜು.3ರಂದು ಮಂಗಳೂರಿನ ಡಿಸಿ ಕಚೇರಿ ಮುಂಭಾಗದಲ್ಲಿ […]

ಅಪಘಾತಕ್ಕೀಡಾಗಿದ್ದ ಮುಸ್ಲಿಂ ಕುಟುಂಬಕ್ಕೆ ನೇರವಾದ ಹಿಂದೂ ಯುವಕರು

Sunday, July 9th, 2017
Hindu-youths

ಮಂಗಳೂರು  : ಹಿಂದೂ ಜಾಗರಣ ವೇದಿಕೆಯ ಪುತ್ತೂರು ಘಟಕದ ಅದ್ಯಕ್ಷ ಸಚಿನ್ ಪಾಪೆಜಾಲ್ ಮತ್ತು ಸಂಘ ಪರಿವಾರದ ಸದಸ್ಯ ಹಾಗು ಅರಿಯಡ್ಕ ಗ್ರಾಮ ಪಂಚಾಯತ್ತು ಸದಸ್ಯ ಗಲಭೆಯ ನಡುವೆ ಅಪಘಾತಕ್ಕೆ ಒಳಗಾದ ಮುಸ್ಲಿಂ ಕುಟುಂಬಕ್ಕೆ ಮಂಗಳೂರು ಆಸ್ಪತ್ರೆ ತಲುಪಿಸಿದ ಮಾನವೀಯ ಘಟನೆ ಪ್ರಸಂಶೆಗೆ ಪಾತ್ರವಾಗಿದೆ . ವಿದೇಶ ಪ್ರಯಾಣಕ್ಕೆ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಹೊರಟಿದ್ದ ಮಡಿಕೇರಿ ಮೂಲದ ಮುಸ್ಲಿಂ ಸಮುದಾಯದವರಿದ್ದ ಅಲ್ಟೊ ಕಾರು ಕೌಡಿಚ್ಚಾರು ಬಳಿ ಜುಲೈ 5 ರಂದು ಅಪಘಾತಕ್ಕೀಡಾಗುತ್ತದೆ. ಕಾರು ಮತ್ತು ಬಸ್ ನಡುವೆ ನಡೆದ ಈ ಅಪಘಾತದಲ್ಲಿ ಕಾರಿನ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿ […]

ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು: ಜಗದೀಶ್ ಕಾರಂತ್

Monday, November 28th, 2016
Hindu samavesha

ಮಂಗಳೂರು: ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ಎದುರಿಸುವುದೂ ಅಲ್ಲ ಬದಲಾಗಿ ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು. ಹಿಂದೂ ಜಾಗರಣ ವೇದಿಕೆಯ ಶಕ್ತಿನಗರ ವಲಯ ಮತ್ತು ಕಣ್ಣೂರು ನಗರ ಘಟಕಗಳ ಉದ್ಘಾಟನಾ ಪ್ರಯುಕ್ತ ಶಕ್ತಿನಗರದ ಕೇಂದ್ರ ಮೈದಾನದಲ್ಲಿ ಭಾನುವಾರ ಜರುಗಿದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟ, ಸಂಘಟನೆ ಸಮಾವೇಶ ಎಂದರೆ ಸಮಸ್ಯೆಗಳ ವೈಭವೀಕರಣ ಬಿಟ್ಟು ಉತ್ತರ ಕಂಡುಕೊಳ್ಳುವಂತಾಗಬೇಕು. ಸಾಮಾಜಿಕ ಪಿಡುಗುಗಳಿಗೆ ಪರಿಹಾರ […]