ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹುಟ್ಟುಹಬ್ಬ ಆಚರಣೆ

Wednesday, February 14th, 2024
ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹುಟ್ಟುಹಬ್ಬ ಆಚರಣೆ

ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರ ಜನ್ಮದಿನದ ಪ್ರಯುಕ್ತ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೇಖರ್ ಪೂಜಾರಿಯವರ ನೇತೃತ್ವದಲ್ಲಿ ಕುಂದಾಪುರ ತಾಲೂಕು ಮೂಡುಬಗೆಯ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ ಯ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವುದರ ಮೂಲಕ ಆಚರಿಸಲಾಯಿತು. ಶ್ರವಣದೋಷವುಳ್ಳ ಮಕ್ಕಳಿಂದ ಸಚಿವರಿಗೆ ವಿಷ್ಸಚಿವೆ […]

ಹುಟ್ಟುಹಬ್ಬಕ್ಕೆ ಗಂಡ ಹೊಸ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು, ಗಂಡನ ಮನೆಯಲ್ಲಿ ಬಾಲಕಿ ನೇಣು ಬಿಗಿದು ಆತ್ಮಹತ್ಯೆ

Wednesday, May 26th, 2021
hanging

ಗೌರಿಬಿದನೂರು :  ತನ್ನ ಹುಟ್ಟುಹಬ್ಬಕ್ಕೆ ಗಂಡ ಹೊಸ ಬಟ್ಟೆಯನ್ನು ತೆಗೆದುಕೊಟ್ಟಿಲ್ಲ ಎಂದು ಮನನೊಂದು 16 ವರ್ಷದ ಬಾಲಕಿ ಮಹಡಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  5ನೇ ವಾರ್ಡಿನ ಮಾರುತಿ ಸರ್ಕಲ್‌ ಬಳಿ ಬುಧವಾರ  ನಡೆದಿದೆ. ಮೃತ ಬಾಲಕಿ ಮತ್ತು ಮಹದೇವ ಅಲಿಯಾಸ್‌ ಮಣಿ ಒಂದೂವರೆ ವರ್ಷದಿಂದ ಪ್ರೀತಿಸಿದ್ದು ಒಂದು ವರ್ಷದಿಂದ ಮಹದೇವನ ಮನೆಯಲ್ಲೇ ಇದ್ದಳು. ಕಳೆದ 3 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು ಎನ್ನಲಾಗಿದೆ. ಮೃತಳು ಚಿಕ್ಕಬಳ್ಳಾಪುರ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಬಳಿಯ ಬೇವನಹಳ್ಳಿ ಗ್ರಾಮದ […]

ಹುಟ್ಟುಹಬ್ಬದ ಪಾರ್ಟಿಗೆಂದು ಕರೆಸಿ 23 ವರ್ಷದ ಯುವತಿಯನ್ನು ಅತ್ಯಾಚಾರ ಗೈದ ಕಾಮುಕರು

Sunday, October 11th, 2020
Rape Accuced

ಲಕ್ನೋ: ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು 23 ವರ್ಷದ ಯುವತಿಯ ಮೇಲೆ ಇಬ್ಬರು ಕಾಮುಕರು ಬಾರ್ರಾದ ಸಚನ್ ಸ್ಕ್ವೇರ್‌ನಲ್ಲಿರುವ ಹೋಟೆಲ್‌ನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಸಂತ್ರಸ್ತೆ ಕಲ್ಯಾಣ್ಪುರದ ನಿವಾಸಿ ಯುವತಿ ದೆಹಲಿಯ ಆರೋಗ್ಯಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ತಾಯಿಯ ಅನಾರೋಗ್ಯದಿಂದಾಗಿ ಒಂದು ವರ್ಷದ ಹಿಂದೆ ಕೆಲಸ ಬಿಟ್ಟು ಮನೆಯಲ್ಲಿದ್ದರು. ಸಂತ್ರಸ್ತೆಯ ನೆರೆಹೊರೆಯ ಮೋನಿಕಾ ಎನ್ನುವ  ಹುಡುಗಿಯೊಬ್ಬಳು ತನ್ನ ಸಹೋದರ ಅಶಿಶ್ ಹುಟ್ಟುಹಬ್ಬದ ಪಾರ್ಟಿಗೆ ಕರೆದಿದ್ದಳು. ಆಕೆಯ ತಂದೆ ಇನ್ಸ್‌ಪೆಕ್ಟರ್ ಆಗಿದ್ದರು. ನಂತರ ಸಂತ್ರಸ್ತೆ ಪಾರ್ಟಿಗೆಂದು ಸಚನ್ ಚೌರಾಹಾದ ಸೋನಾ […]

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಪಕೋಡ ಮಾರಿ ಆಚರಿಸಿದ ಎನ್ಎಸ್ ಯುಐ

Thursday, September 17th, 2020
nsui

ಮಂಗಳೂರು: ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಎನ್ಎಸ್ ಯುಐ ಸದಸ್ಯರು  ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿ ಪಕೋಡ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಎನ್ಎಸ್ಯುಐ ದ‌.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ,  ವರ್ಷಕ್ಕೆ 12 ಕೋಟಿ‌ ಉದ್ಯೋಗ ಸೃಷ್ಟಿ ಮಾಡುತ್ತದೆ ಎಂದು ಹೇಳಿದ ಕೇಂದ್ರ ಸರ್ಕಾರ, ವರ್ಷಕ್ಕೆ 2.50 ಕೋಟಿ ಉದ್ಯೋಗ ನಷ್ಟ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿದೆ. ಅವೈಜ್ಞಾನಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿ ವಿದ್ಯಾರ್ಥಿಗಳನ್ನು, ಕೃಷಿಕರನ್ನು, ಬಡವರನ್ನು ಬೀದಿಗೆ […]

ಟ್ವೀಟ್‌ ಮೂಲಕ ಬಿ.ಎಸ್ ಯಡಿಯೂರಪ್ಪಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

Thursday, February 27th, 2020
modi

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 78ನೇ ವಸಂತಕ್ಕೆ ಕಾಲಿರಿಸಿದ ಬಿಎಸ್‌ವೈಗೆ ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿದ್ದಾರೆ. ಟ್ವೀಟ್‌ ಮೂಲಕ ಯಡಿಯೂರಪ್ಪ ಜನ್ಮದಿನಕ್ಕೆ ಶುಭಾಶಯ ಸಲ್ಲಿಸಿದ ಮೋದಿ, “ಕರ್ನಾಟಕದ ಶ್ರಮಶೀಲ ಸಿಎಂ ಯಡಿಯೂರಪ್ಪ ಅವರಿಗೆ ಶುಭಾಶಯಗಳು. ಅವರು ರಾಜ್ಯದ ಪ್ರಗತಿಗೆ, ವಿಶೇಷವಾಗಿ ರೈತರ ಕಲ್ಯಾಣ, ಗ್ರಾಮೀಣಾಭಿವೃದ್ದಿಗೆ ಅಪಾರ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೀರ್ಘ ಆಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ. ಬಿಎಸ್‌ವೈ ಹುಟ್ಟುಹಬ್ಬದ ರಾಜ್ಯದ ಹಲವು ಮುಖಂಡರು ಶುಭಕೋರಿದ್ದಾರೆ. ಟ್ವಿಟ್ಟರ್‌ನಲ್ಲಿ, […]

ಅಮಿತಾಬ್‌ ಬಚ್ಚನ್‌ 75ನೇ ವಸಂತಕ್ಕೆ ಹೆಜ್ಜೆ

Wednesday, October 11th, 2017
big-b

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ 75ನೇ ವಸಂತಕ್ಕೆ ಕಾಲಿಟಿದ್ದಾರೆ. ಬಚ್ಚನ್‌ ಹುಟ್ಟುಹಬ್ಬಕ್ಕೆ ಬಾಲಿವುಡ್‌ನ ಅನೇಕ ಹಿರಿ–ಕಿರಿಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಬಚ್ಚನ್‌ ಕುಟುಂಬ ಸಮೇತ ಮಾಲ್ಡೀವ್ಸ್‌‌ಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಕಳೆದ ವರ್ಷ ಕೂಡಾ ಬಚ್ಚನ್‌ ಕುಟುಂಬದೊಂದಿಗೆ ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಬಚ್ಚನ್‌ ತಮ್ಮ ಪುತ್ರ ಅಭಿಷೇಕ್, ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯಾ ಜತೆಗೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣದೊಳಗೆ ಹೋಗುತ್ತಿರುವ ಚಿತ್ರಗಳನ್ನು ಕೆಲ […]

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ 90ನೇ ಹುಟ್ಟುಹಬ್ಬ ಆಚರಣೆ

Friday, December 26th, 2014
Atal BJP

ಮಂಗಳೂರು : ಮಾಜಿ ಪ್ರಧಾನಿ ಸನ್ಯಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ 90ನೇ ಜನ್ಮದಿನ ಹಾಗೂ ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಭಾರತರತ್ನ ಪುರಸ್ಕಾರವನ್ನು ಕೇಂದ್ರ ಸರಕಾರ ನೀಡಿದ ಬಗ್ಗೆ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣದ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಸಂಭ್ರಮವನ್ನು ಗುರುವಾರ ಆಚರಿಸಲಾಯಿತು. ಇದರ ಪ್ರಯುಕ್ತ ಪಕ್ಷದ 35 ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ರವರು ಅಟಲ್ ಬಿಹಾರಿ ವಾಜಪೇಯಿಯವರ ಜೀವನ, ಅವರ ತ್ಯಾಗ ಮತ್ತು ಆದರ್ಶದ ಬಗ್ಗೆ […]

ನಟಿ ಜೂಹಿ ಚಾವ್ಲಾ , ರಂಜಿತಾರಿಂದ ನಿತ್ಯಾನಂದನ ಪಾದಪೂಜೆ

Saturday, January 1st, 2011
Nityananda

ಬೆಂಗಳೂರು : ಹೊಸ ವರ್ಷದ ಸಂಭ್ರಮದ ನಡುವೆಯೇ  ನಿತ್ಯಾನಂದ ಸ್ವಾಮಿ  ಆನಂದೋತ್ಸವದ ಹೆಸರಿನಲ್ಲಿ ತನ್ನ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರು ಬಿಡದಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಆಶ್ರಮದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ನಿತ್ಯಾನಂದ ಸ್ವಾಮಿಯನ್ನು  ಆಶ್ರಮಕ್ಕೆ ಕರೆ ತಂದು ಪಾದಪೂಜೆ ನಡೆಸಲಾಯಿತು. ಜೂಹಿ ಚಾವ್ಲಾ ಕುಟುಂಬ ಕೂಡ […]