ಪಿಲಿಕುಳ ಮೃಗಾಲಯದ ವಿಕ್ರಮ್ ಹುಲಿ ಸಾವು

Tuesday, October 27th, 2020
Vikram

ಮಂಗಳೂರು: ಪಿಲಿಕುಳ ಮೃಗಾಲಯದ ಹಳೇ ತಲೆಮಾರಿನ ಹುಲಿ 21 ವರ್ಷ ಪ್ರಾಯದ ಹುಲಿ ವಿಕ್ರಮ್ ನಿನ್ನೆ ಸಾವನ್ನಪ್ಪಿದೆ. ವಿಕ್ರಮ್ ಹುಲಿಯನ್ನು 4 ವರ್ಷದ ಮರಿಯಾಗಿದ್ದ ಸಂದರ್ಭದಲ್ಲಿ 2003ರಲ್ಲಿ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಸಫಾರಿಯಿಂದ ತರಲಾಗಿತ್ತು. ಈ ಹುಲಿಗೆ 10 ಮರಿಗಳಿವೆ. ಕದಂಬ, ಕೃಷ್ಣ, ವಿನಯ, ಒಲಿವರ್, ಅಕ್ಷಯ, ಮಂಜು, ಅಮರ್, ಅಕ್ಬರ್, ಆಂಟನಿ ಮತ್ತು ನಿಷ ಎಂಬ ಮರಿಗಳಿವೆ‌. ಅವುಗಳನ್ನು ದೇಶದ ವಿವಿಧ ಮೃಗಾಲಯಗಳಾದ ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರ ಪ್ರದೇಶ, ಮೈಸೂರು ಮೃಗಾಲಯಗಳಿಗೆ ಕಳುಹಿಸಿಕೊಡಲಾಗಿತ್ತು. ಸಂದರ್ಶಕರಿಗೆ ಸುಲಭವಾಗಿ […]

ಕಾರ್ಮಾಡು ಗ್ರಾಮದಲ್ಲಿ ಮುಂದುವರಿದ ಹುಲಿ ಭೀತಿ

Monday, December 16th, 2019
tiger

ಮಡಿಕೇರಿ : ವಿರಾಜಪೇಟೆ ತಾಲ್ಲೂಕಿನ ಕಾರ್ಮಾಡು ಗ್ರಾಮದಲ್ಲಿ ಹುಲಿ ಭೀತಿ ಮುಂದುವರೆದಿದೆ. ಕಳೆದ ಒಂದು ವಾರದಿಂದ ಎರಡು ಹಸುಗಳನ್ನು ಬಲಿ ಪಡೆದ ಹುಲಿ ಗ್ರಾಮ ವ್ಯಾಪ್ತಿಯಲ್ಲಿ ಮತ್ತೆ ಸಂಚರಿಸಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ಕೊಟ್ಟಂಗಡ ಮಧು ಮಂಜುನಾಥ್ ರವರ ತೋಟ ಮತ್ತು ಗದ್ದೆಯಲ್ಲಿ ಹೆಜ್ಜೆ ಗುರುತು ಕಂಡು ಬಂದಿದೆ. ಹುಲಿ ಭೀತಿಯಿಂದಾಗಿ ಗ್ರಾಮಸ್ಥರು ತೋಟ ಮತ್ತು ಗದ್ದೆಗೆ ಹೋಗಲು, ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹುಲಿಯನ್ನು ಸೆರೆ ಹಿಡಿದು ಕಾಡಿಗೆ […]

ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ : ಹಸು ಬಲಿ

Wednesday, December 11th, 2019
Kodagu

ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ಹುಲಿಗಳ ಹಾವಳಿ ಅಧಿಕಗೊಂಡಿದ್ದು, ಮತ್ತೊಂದು ಹಸು ಹುಲಿ ದಾಳಿಗೆ ಬಲಿಯಾಗಿದೆ ವೀರಾಜಪೇಟೆ ತಾಲೂಕಿನ ನಿಟ್ಟೂರು ಕಾರ್ಮಾಡು ಗ್ರಾಮದ ಕೊಟ್ಟಂಗಡ ಮಧು ಅವರ ಕೊಟ್ಟಿಗೆಗೆ ಬೆಳಗ್ಗೆ5.30ರ ಸುಮಾರಿಗೆ ದಾಳಿ ಮಾಡಿದ ಹುಲಿ, ಕೊಟ್ಟಿಗೆಯಲ್ಲಿದ್ದ ಹಸುವನ್ನು ಕಚ್ಚಿ ಸ್ವಲ್ಪ ದೂರ ಸಾಗಿದೆ. ನಂತರ ಮನೆಯವರ ಕೂಗಾಟ ಕೇಳಿ ಅದನ್ನು ಅಲ್ಲೇ ಬಿಟ್ಟು ತೆರಳಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ರೈತ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು. ಮತ್ತೊಂದೆಡೆ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಐದು […]

ಕಾಕೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿ

Thursday, December 5th, 2019
dana

ಮಡಿಕೇರಿ : ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ ಹೋಬಳಿಯ ಕಾಕೂರು ಗ್ರಾಮದ ನಳಿನಿ ಮಹೇಶ್ ಎಂಬುವವರಿಗೆ ಸೇರಿದ ಹಸುವೊಂದು ಹುಲಿ ದಾಳಿಗೆ ಸಿಲುಕಿ ಸಾವನ್ನಪಿದೆ. ತೋಟದಲ್ಲಿ ಹಸು ಮೇಯುವ ವೇಳೆ ದಾಳಿ ನಡೆಸಿದ ಹುಲಿ ಹಸುವನ್ನು ಬಲಿ ತೆಗೆದುಕೊಂಡಿದೆ. ಈ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಹಲವು ಜಾನುವಾರುಗಳನ್ನು ಕೊಂದಿದೆ. ವ್ಯಾಘ್ರನ ಅಟ್ಟಹಾಸ ನಿರಂತರವಾಗಿರುವುದರಿಂದ ಕೂಡಲೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು […]

ಹೊಸಳ್ಳಿ ಗ್ರಾಮದಲ್ಲಿ ಹುಲಿ ದಾಳಿ : ಹಸುವಿಗೆ ಗಾಯ

Thursday, December 5th, 2019
hasu

ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಜಾನುವಾರಿನ ಮೇಲೆ ಹುಲಿ ದಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ನಡೆದಿದೆ. ಬಾಣಾವರ ಮೀಸಲು ಅರಣ್ಯಕ್ಕೆ ಒಳಪಡುವ ಆಡಿನಾಡೂರು ಅರಣ್ಯದ ಹೊಸಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಅರಣ್ಯದ ಅಂಚಿನಲ್ಲಿಯೇ ಇದ್ದ ಜಾನುವಾರಿನ ಮೇಲೆ ಹುಲಿ ದಾಳಿ ನಡೆಸಿದೆ. ಹಸುವಿನ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಈ ವ್ಯಾಪ್ತಿಯಲ್ಲಿ ಹುಲಿ […]

ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ : ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್

Wednesday, October 9th, 2019
tiger

ಬೆಂಗಳೂರು : ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅರಣ್ಯ ಇಲಾಖೆಯು ಹುಲಿಯನ್ನು ಸೆರೆಹಿಡಿಯುವ ಆಥವಾ ಗುಂಡಿಕ್ಕಿ ಕೊಲ್ಲುವ ಆದೇಶ ವೈರಲ್ ಆದ ಹಿನ್ನೆಲೆ ಈ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಂಡಿಪುರ ವ್ಯಾಪ್ತಿಯಲ್ಲಿ 120 ಹುಲಿಗಳಿವೆ. ಒಂದೆರಡು ಹುಲಿಗಳ ಸಮಸ್ಯೆ ಇದೆ. ಕಳೆದ ಬಾರಿ […]

ಪಿಲಿಕುಳ ಉದ್ಯಾನವನದಲ್ಲಿ ಎರಡು ಹುಲಿಗಳ ನಡುವೆ ಭೀಕರ ಕಾಳಗ

Monday, October 13th, 2014
pilikula Tigers

ಮಂಗಳೂರು : ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಪಾರ್ಕ್‌ ನಲ್ಲಿ ಎರಡು ಹುಲಿಗಳ ನಡುವೆ ಕಾಳಗ ಉಂಟಾಗಿ ಹೆಣ್ಣು ಹುಲಿ ತೀವ್ರ ಗಾಯಗೊಂಡ ಘಟನೆ ಆಕ್ಟೋಬರ್‌ 13ರ ಸೋಮವಾರದಂದು ನಡೆಯಿತು. ಪಿಲಿಕುಳದ ಉದ್ಯಾನವನದಲ್ಲಿ ಕುಮಾರ್‌ ಹಾಗೂ ಬಂಟಿ ಎಂಬ ಗಂಡು ಮತ್ತು ಹೆಣ್ಣು ಹುಲಿಗಳೆರಡು ಇದ್ದಕ್ಕಿದ್ದಂತೆಯೇ ಪರಸ್ಪರ ಕಚ್ಚಾಟಕ್ಕೆ ಇಳಿದು ನೋಡುಗರಿಗೆ ಆರಂಭದಲ್ಲಿ ಹುಲಿಗಳ ಆಟದಂತೆ ಕಂಡುಬಂದ ಈ ಕಚ್ಚಾಟ ಬರಬರುತ್ತಾ ಕಾವುಪಡೆಯತು. ಕುಮಾರ್‌ ಎಂಬ ಗಂಡು ಹುಲಿ ಮತ್ತು ನಾಲ್ಕೂವರೆ ವರ್ಷದ ಬಂಟಿ ಎಂಬ […]