Blog Archive

ಹೈದರಾಬಾದ್‌ಗೆ ಬಂದಿಳಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌‌ ಶಾಸಕರು!

Friday, May 18th, 2018
congressjds

ಬೆಂಗಳೂರು‌‌: ಆಪರೇಷನ್‌ ಕಮಲ ಭೀತಿಯಿಂದ ರಾಜ್ಯದ ಕಾಂಗ್ರೆಸ್‌ ಮತ್ತು ಜೆಡಿಎಸ್‌‌ ಶಾಸಕರು ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಬೆಂಗಳೂರು ಶಾಂಗ್ರಿಲಾ ಹೋಟೆಲ್‌ ಮತ್ತು ಬಿಡದಿಯ ಈಗಲ್‌ ಟನ್‌ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ರಾತ್ರಿ ಬಸ್‌ಗಳ ಪ್ರಯಾಣ ಬೆಳೆಸಿದ್ದರು. ಅಲ್ಲಿಂದ ಹೊರಡುವ ಮುನ್ನ ಶಾಸಕರು ಎಲ್ಲಿಗೆ ಹೋಗಲಿದ್ದಾರೆ ಎಂಬ ರಹಸ್ಯವನ್ನೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಇಂದು ಬೆಳಗ್ಗೆ ಹೈದರಾಬಾದ್‌ಗೆ ಕಾಂಗ್ರೆಸ್‌, ಜೆಡಿಎಸ್‌‌ ಪಕ್ಷಗಳ ಶಾಸಕರು ಆಗಮಿಸಿದ್ದಾರೆ. ಶಾಸಕರು ಇಲ್ಲಿನ ಪಾರ್ಕ್‌ ಹಯಾತ್‌ ಹೋಟೆಲ್‌ ಮತ್ತು ಗೋಲ್ಗೊಂಡ ರೆಸಾರ್ಟ್‌ಗೆ ತಲುಪಿದ್ದಾರೆ. ಇದೇ […]

ಮಂಗಳೂರಿನಿಂದ ಹೈದರಾಬಾದ್‌ಗೆ ಸ್ಪೈಸ್ ಜೆಟ್ ಡಿ. 24ರಿಂದ ಪ್ರತಿ ದಿನ ವಿಮಾನಯಾನ

Monday, December 12th, 2016
Flight

ಮಂಗಳೂರು: ನಗರದಿಂದ ಹೈದರಾಬಾದ್‌ಗೆ ಸ್ಪೈಸ್ ಜೆಟ್ ಡಿ. 24ರಿಂದ ಪ್ರತಿ ದಿನ ವಿಮಾನಯಾನ ಸೇವೆ ಆರಂಭಿಸಲಿದೆ. ಪ್ರತಿ ದಿನ ಮಧ್ಯಾಹ್ನ ಹೈದರಾಬಾದ್‌‌‌‌ನಿಂದ 1 ಗಂಟೆಗೆ ಹೊರಡುವ ವಿಮಾನ 2.30ಕ್ಕೆ ಮಂಗಳೂರಿಗೆ ತಲುಪಲಿದೆ. ಅಲ್ಲದೆ ಮಂಗಳೂರಿನಿಂದ 2.50ಕ್ಕೆ ಹೊರಡುವ ವಿಮಾನ ಸಂಜೆ 4.20ಕ್ಕೆ ಹೈದರಾಬಾದ್ ತಲುಪಲಿದೆ.

ತಾಯ್ನಾಡಿಗೆ ಆಗಮಿಸಿದ ಪಿ.ವಿ. ಸಿಂಧು ಅವರಿಗೆ ಹೈದರಾಬಾದ್‌ನಲ್ಲಿ ಅದ್ದೂರಿ ಸ್ವಾಗತ

Monday, August 22nd, 2016
Hyderabad-reception

ಹೈದರಾಬಾದ್‌: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದು, ಸೋಮವಾರ ತಾಯ್ನಾಡಿಗೆ ಆಗಮಿಸಿರುವ ಪಿ.ವಿ. ಸಿಂಧು ಅವರನ್ನು ಹೈದರಾಬಾದ್‌ನಲ್ಲಿ ಸಂಭ್ರಮದಿಂದ ಸ್ವಾಗತಕೋರಿ, ಮೆರವಣಿಗೆ ನಡೆಸಲಾಯಿತು. ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಿಗ್ಗೆ ಬಂದಿಳಿದ ಸಿಂಧು ಹಾಗೂ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಸ್ವಾಗತಿಸಿ, ಹೂವುಗಳಿಂದ ಅಲಂಕರಿಸಿರುವ ತೆರೆದ ವಾಹನದಲ್ಲಿ ವಿಮಾನನಿಲ್ದಾಣದಿಂದ ಗಚ್ಚಿಬೌಲಿ ಮೈದಾನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತಂದೆ ಪಿ.ವಿ. ರಮಣ ಹಾಗೂ ಪಿ. ವಿಜಯಾ ಮತ್ತು ತೆಲಂಗಾಣ ಸರ್ಕಾರದ ಸಚಿವರು ಸೇರಿದಂತೆ ಉಪ […]

ಕಾಂಗ್ರೆಸ್‌ನಲ್ಲಿ ವಿಲೀನ ಇಲ್ಲ: ಕೆಸಿಆರ್ ಹೇಳಿಕೆ

Tuesday, March 4th, 2014
Candrasekhara-Rao

ಹೈದರಾಬಾದ್: ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ ಎಂದು ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರರಾವ್ ಅವರು ಹೇಳಿದ್ದಾರೆ. ಹೈದರಾಬಾದ್ ನಲ್ಲಿ ಮಾತನಾಡಿದ ಕೆಸಿಆರ್, ತೆಲಂಗಾಣ ರಾಜ್ಯ ರಚನೆ ನಂತರ ಟಿಆರ್‌ಎಸ್ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಲು ಉತ್ಸುಕತೆ ತೋರಿದ್ದ ಕೆಸಿಆರ್ ಅವರು, ಪಕ್ಷದಲ್ಲಿನ ಭಿನ್ನಮತ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಯಿಂದಾಗಿ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ಟಿಆರ್‌ಎಸ್ ಪಕ್ಷದ ವಿರುದ್ಧ ರೆಬೆಲ್ ಆಗಿದ್ದ ಶಾಸಕರನ್ನು ಕಾಂಗ್ರೆಸ್ ನಾಯಕರು ತಮ್ಮ […]