ಭಜನೆ ಮಂಗಳವಾಗುತ್ತಿದ್ದಂತೆಯೇ ಹೃದಯಾಘಾತಕ್ಕೊಳಗಾದ ಭಜನಾಪಟು

Sunday, September 12th, 2021
Moohan Kodle

ಮಂಜೇಶ್ವರ : ಹೊಸಂಗಡಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ವಾರದ ಭಜನೆಯ ಮಂಗಳವಾಗುತ್ತಿದ್ದಂತೆಯೇ ಮೋಹನ್ ದಾಸ್ ಕೊಡ್ಡೆ (55) ಅವರು ಶನಿವಾರ ರಾತ್ರಿ  ಹೃದಯಾಘಾತಕ್ಕೊಳಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ  ವಿಧಿವಶರಾಗಿದ್ದಾರೆ. ಮಂಜೇಶ್ವರದ ಬಲ್ಲಂಗುಡೇಲು ನಿವಾಸಿಯಾಗಿರುವ ಅವರು ಅಲ್ಲೇ ಭಜನಾ ತಂಡವನ್ನು ರಚಿಸಿ ಹಲವಾರು ವಿದ್ಯಾರ್ಥಿಗಳನ್ನು ಸೇರಿಸಿ ತರಗತಿ ನಡೆಸುತ್ತಿದ್ದರು. ಮಂಜೇಶ್ವರ ಗಣೇಶೋತ್ಸವದಲ್ಲಿ ರಾತ್ರಿ ಹಗಲೆನ್ನದೆ ಅಹರ್ನಿಶಿ ಶ್ರಮಿಸಿದ್ದ ಅವರು ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ಗುರುತಿಸಿಕೊಂಡಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯರಾಗಿದ್ದು, ಭಜನಾ ಸಂಕೀರ್ತನಾಕಾರರಾಗಿ, ಭಜನಾ ಸಂಘಟಕರಾಗಿ ಕನಿಲ ಶ್ರೀ ಭಗವತೀ […]

ಹೊಸಂಗಡಿಯಲ್ಲಿ ಪೇಪರ್ ಬಂಡಲ್ ಹೇರಿದ ಲಾರಿ ಪಲ್ಟಿ- ಚಾಲಕ, ಕ್ಲೀನರ್ ಆಸ್ಪತ್ರೆಗೆ

Friday, May 15th, 2020
paper Lorry

ಮಂಜೇಶ್ವರ:- ರಾಷ್ಟ್ರೀಯ ಹೆದ್ದಾರಿ ಹೊಸಂಗಡಿಯಲ್ಲಿ ಪೇಪರ್ ಬಂಡಲ್ ಹೇರಿಕೊಂಡು ಮಂಗಳೂರುವಿನಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇದೀಗ 11 ಗಂಟೆ ವೇಳೆ ನಡೆದಿದೆ. ಈ ವೇಳೆ ಭಾರಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಸರ ನಿವಾಸಿಗಳು ಹಾಗೂ ಕೋವಿಡ್ ನ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಕಾರ್ಯಚರಿಸುತ್ತಿದ್ದ ಪೊಲೀಸರು ತಲುಪಿದ್ದು, ಲಾರಿ ಚಾಲಕನನ್ನು ಹಾಗೂ ಕ್ಲೀನರ್ ನನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲು ನೆರವಾದರು. ಕ್ಲಿನರ್ ಗಾಯಗಲಿಲ್ಲದೇ ಪಾರಾಗಿದ್ದಾರೆ. ಘಟನೆಯನ್ನರಿತು ಮಂಜೇಶ್ವರ ಪೊಲೀಸರು ಸ್ಥಳಕ್ಕೆ […]

ಹೊಸಂಗಡಿ : ಬೈಕ್-ಲಾರಿ ಅಪಘಾತ; ಕಾಲೇಜು ವಿದ್ಯಾರ್ಥಿ ಸಾವು

Wednesday, September 18th, 2019
hosangadi

ಹೊಸಂಗಡಿ : ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯ ಬೈಕ್ ಹಾಗೂ ಮುಂಭಾಗದಿಂದ ಬರುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ಸೆ. 18 ರ ಬುಧವಾರ ಬೆಳಗ್ಗೆ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಹೊಸಂಗಡಿಯ ಅಬಕಾರಿ ಚೆಕ್ ಪೋಸ್ಟ್ ಬಳಿ ಸಂಭವಿಸಿದೆ. ಮಂಗಳೂರು ಪದವಿ ಕಾಲೇಜಿನ ವಿದ್ಯಾರ್ಥಿಯಾದ ಬೇಕೂರು ಕುಬಣೂರು ದೇರ್ ಜಾಲು ಅಬ್ದುಲ್ ರೆಹಮಾನ್ ಅವರ ಪುತ್ರ ನವಾಬ್ (22) ಯುವಕ ಮೃತಪಟ್ಟಿದ್ದಾನೆ. ನವಾಬ್ ಇಂದು ಬೆಳಗ್ಗೆ ಕಾಲೇಜಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಾಮಂಜೂರು ಚೆಕ್ ಪೋಸ್ಟ್ […]

ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರಿಗೆ ಡಾಕ್ಟರೇಟ್

Tuesday, October 16th, 2018
Balakrishna

ಕಾಸರಗೋಡು: ಇಲ್ಲಿನ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರು ಡಾ. ರಾಧಾಕೃಷ್ಣ ಎನ್. ಬೆಳ್ಳೂರು ಅವರ ಮಾರ್ಗದರ್ಶನದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಮರ್ಪಿಸಿದ ‘ದ್ರಾವಿಡ ನವ್ಯ ಕಾವ್ಯ’ ಎಂಬ ಮಹಾಪ್ರಬಂಧವು ಡಾಕ್ಟರ್ ಆಫ್ ಫಿಲಾಸಫಿ ಪದವಿಗೆ ಅರ್ಹವಾಗಿದೆ ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅಧಿಸೂಚನೆ ತಿಳಿಸಿದೆ. ಹೊಸಂಗಡಿ ಅವರು ದ್ರಾವಿಡ ನವ್ಯ ಕಾವ್ಯ ಸಂಶೋಧನೆಯ ಸಂದರ್ಭದಲ್ಲೇ ಲಂಡನ್ ವಿಶ್ವವಿದ್ಯಾನಲಿಯದ ಟಿಎಸ್ ಎಲಿಯಟ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ […]

ಈಸ್ಟ್ ಎಳರಿ ಹಾಗೂ ಮಂಜೇಶ್ವರ ಕಾಂಗ್ರೆಸ್ ಬಂಡುಕೋರರ ಸಭೆ

Tuesday, April 12th, 2016
East Elari

ಮಂಜೇಶ್ವರ: ಜಿಲ್ಲಾ ಕಾಂಗ್ರೆಸ್ (ಡಿ ಸಿ ಸಿ) ಗೆ ತಲೆನೋವನ್ನು ಸೃಷ್ಟಿಸಿದ ಈಸ್ಟ್ ಎಳರಿ ಕಾಂಗ್ರೆಸ್ ಬಂಡುಕೋರರ ನೇತೃತ್ವ ಹೊಸ ರಾಜಕೀಯ ಪಕ್ಷವನ್ನು ರೂಪೀಕರಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ನಿಂದ ಶಿಶ್ತು ಕ್ರಮದ ಹೆಸರಲ್ಲಿ ಹೊರ ಹಾಕಲ್ಪಟ್ಟ ಸಮಾನ ಮನಸ್ಕರನ್ನು ಭೇಟಿಯಾಗಿ ಅವರೊಡನೆ ಚರ್ಚೆಗೆ ಚಾಲನೆ ನೀಡಿರುವುದಾಗಿ ಕಾಂಗ್ರೆಸ್ ಬಂಡುಕೋರ ನೇತಾರರು ತಿಳಿಸಿದ್ದಾರೆ. ಈಸ್ಟ್ ಎಳರಿಯ ಕಾಂಗ್ರೆಸ್ ಬಂಡುಕೋರ ನೇತಾರ ಜೇಮ್ಸ್ ಪದ್ಮಾಂಗನ್ ಹೊಸ ರಾಜಕೀಯ ಬೆಳವಣಿಗೆಗೆ ರೂಪು ನೀಡುತಿದ್ದಾರೆ. ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ […]

ರೈತರ ಸಾಲ ಮರುಪಾವತಿ -ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿ: ಎ.ಬಿ.ಇಬ್ರಾಹಿಂ

Thursday, August 13th, 2015
Farmers Meeting

ಮಂಗಳೂರು : ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮರುಪಾವತಿ ಅವಧಿ ಮುಗಿದಿದ್ದರೆ ಅಂತಹ ರೈತರು ತಮ್ಮ ಸಾಲದ ಅವಧಿಯನ್ನು ವಿಸ್ತರಿಸುವಂತೆ/ಸಾಲ ಮರುಹೊಂದಾಣಿಕೆ ಮಾಡಿಕೊಳ್ಳಲು ಸಂಬಂಧಿಸಿದ ಬ್ಯಾಂಕುಗಳಿಗೆ /ಸಹಕಾರ ಸಂಘಗಳಿಗೆ ಕೋರಿಕೆ ಪತ್ರಗಳನ್ನು ಸಲ್ಲಿಸಿದಲ್ಲಿ ಸಂಬಂಧಿಸಿದ ಹಣಕಾಸು ಸಂಸ್ಥೆಗಳು ಸಾಲಮರುಪಾವತಿಗೆ ರೈತರಿಗೆ ನೋಟೀಸ್‌ಗಳನ್ನು ನೀಡದಂತೆ ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ತಡೆಯಬಹುದೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರೈತರಿಗೆ ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ರೈತ ಮುಖಂಡರೊಂದಿಗೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು. […]