ಕಾಳಿ ನದಿಯಿಂದ ಆಹಾರ ಅರಸಿ ಗ್ರಾಮಕ್ಕೆ ಬಂದ ಬೃಹತ್ ಮೊಸಳೆ

Friday, July 2nd, 2021
Crocodile

ಕಾರವಾರ: ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ಆಹಾರ ಅರಸಿ ಮೊಸಳೆಯೊಂದು ನುಗ್ಗಿದ ಘಟನೆ ಗುರುವಾರ ನಡೆದಿದೆ. ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ದಾಂಡೇಲಿಯ ರಸ್ತೆಯಲ್ಲಿ ಸಂಚರಿಸಿದೆ. ಮೊಸಳೆಯನ್ನು ನೋಡಿದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದ ಮೊಸಳೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ. ದಾಂಡೇಲಿಯ ಕಾಳಿ ನದಿಯಲ್ಲಿ […]

ಸಾರ್ವಜನಿಕರಿಗೆ ವಿತರಿಸಲು 1.27 ಲಕ್ಷ ಸಸಿಗಳನ್ನು ಸಿದ್ಧಪಡಿಸಿದ ಅರಣ್ಯ ಇಲಾಖೆ

Wednesday, June 3rd, 2020
plants

ಮಂಗಳೂರು: ಪಡೀಲ್‌ನಲ್ಲಿರುವ ಮಂಗಳೂರು ಅರಣ್ಯ ವಿಭಾಗದ “ಸಸ್ಯ ಕ್ಷೇತ್ರ’ದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ವಿತರಿಸಲು 1.27 ಲಕ್ಷ ಸಸಿಗಳನ್ನು ಸಿದ್ಧಪಡಿಸಿಡಲಾಗಿದೆ. ಜೂ.1ರಿಂದ ವಿತರಣೆ ಆರಂಭವಾಗಿದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, 2020-21ನೇ ಸಾಲಿನಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಿಸಲು 40,000 ಸಾಗುವಾನಿ, ನೆಲ್ಲಿ, ನುಗ್ಗೆ, ಪೇರಳೆ, ಬೀಟೆ, ಬಿಲ್ವಪತ್ರೆ, ಸೀತಾಫಲ, ಶಿವಣೆ, ಶ್ರೀಗಂಧ, ಹೂವಾಸಿ, ಹೆಬ್ಬೇವು, ಕರಿಬೇವು, ಸಂಪಿಗೆ, ಸುರಹೊನ್ನೆ, ನೇರಳೆ, ಪನ್ನೇರಳೆ ಸಹಿತ […]

ಕಾಡಾನೆ ಉಪಟಳ ತಡೆಗೆ ಆಗ್ರಹ : ಅರಣ್ಯಾಧಿಕಾರಿಗಳಿಗೆ ಸೋಮವಾರಪೇಟೆ ತಾಲೂಕು ಗ್ರಾಮಸ್ಥರಿಂದ ಮನವಿ

Tuesday, December 3rd, 2019
somavarapete

ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಐಗೂರು, ಕಾಜೂರು, ಯಡವಾರೆ, ಗರ್ವಾಲೆ ಮುಂತಾದ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರಿಗೆ ಮನವಿ ಸಲ್ಲಿಸಿದರು. ಮಡಿಕೇರಿಯ ಅರಣ್ಯ ಭವನದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ ಗ್ರಾಮಸ್ಥರು ಕಾಡಾನೆ ಹಾವಳಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಕಾಫಿ ಬೆಳೆಗಾರ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ, ಸೋಮವಾರಪೇಟೆ ತಾಲೂಕಿನ ಗರ್ವಾಲೆ, ಐಗೂರು, ಯಡವಾರೆ, ಕಾಜೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ […]

ಅರಣ್ಯಾಧಿಕಾರಿ ಆಗಮನಕ್ಕೆ ಕಾವೇರಿಸೇನೆ ಆಕ್ಷೇಪ

Wednesday, November 6th, 2019
madikeri

ಮಡಿಕೇರಿ : ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ಮರಕಡಿತಲೆಗೆ ಕಾನೂನು ಬಾಹಿರವಾಗಿ ಪರವಾನಗಿ ನೀಡಿ, ಅಮಾನತಿಗೆ ಒಳಗಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರು ಮತ್ತೆ ಕೊಡಗಿಗೆ ಬರಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಾವೇರಿಸೇನೆ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಕೆ.ಎ.ರವಿಚಂಗಪ್ಪ ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮಂಜುನಾಥ್ ಅವರು, ಕೆ. ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 800 ಕ್ಕೂ ಅಧಿಕ ಬೃಹತ್ ಗಾತ್ರದ ಮರಗಳನ್ನು ಕಡಿಯಲು ಕಾನೂನು […]