ವಿದೇಶಗಳಲ್ಲಿ ಮೆಕಾನಿಕಲ್, ಇಲೆಕ್ಟ್ರಿಕಲ್, ಮೆಕಾಟ್ರೋನಿಕ್ಸ್ ಉದ್ಯೋಗಾವಕಾಶ, ಅರ್ಜಿ ಆಹ್ವಾನ

Thursday, February 1st, 2024
Abroad Job

ಮಂಗಳೂರು : ಹಂಗೇರಿ ಯೂರೋಪ್ ದೇಶಗಳಲ್ಲಿ ಮೆಕಾನಿಕಲ್, ಇಲೆಕ್ಟ್ರಿಕಲ್, ಮೆಕಾಟ್ರೋನಿಕ್ಸ್ ಇಂಜಿನಿಯರಿಂಗ್ ಅಭ್ಯಥಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ವೇತನ ರೂ. 1.50 ಲಕ್ಷದವರೆಗೆ ಇದ್ದು, ಹೆಚ್ಚುವರಿಯಾಗಿ ಫರ್ಫಾಮೆನ್ಸ್ ಲಿಂಕ್ ಇನ್ಸೆಂಟಿವ್ (PLI), ವಾರ್ಷಿಕ ಬೋನಸ್, ಸೇವಾ ಬೋನಸ್, ಕೆಫೆಟೇರಿಯಾ ಭತ್ಯೆಗಳನ್ನು ನೀಡಲಾಗುತ್ತದೆ. ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು. ಅಭ್ಯರ್ಥಿಗಳನ್ನು ಆನ್‍ಲೈನ್ ಸಂದರ್ಶನ ಹಾಗೂ ಪ್ರಾಯೋಗಿಕ ಕೌಶಲ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾವನ್ನು ಇಮೇಲ್ hr.imck@gmail.com ಗೆ ಕಳುಹಿಸಿ ಕೊಡಬಹುದು. ಹೆಚ್ಚಿನ […]

ಸೋಮೇಶ್ವರ ಕಡಲ ಕಿನಾರೆಯ ರುದ್ರಬಂಡೆ ಯಿಂದ ಹಾರಿ ಇಂಜಿನಿಯರಿಂಗ್ ಆತ್ಮಹತ್ಯೆ

Thursday, June 24th, 2021
Pawan-Bhat

ಉಳ್ಳಾಲ :  ಸೋಮೇಶ್ವರ ಕಡಲ ಕಿನಾರೆಯ ರುದ್ರಬಂಡೆ ಯಿಂದ ಹಾರಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸೋಮೇಶ್ವರ ಪುರಸಭಾ ಕಚೇರಿ ಬಳಿಯ ನಿವಾಸಿ ಪವನ್ ಭಟ್ (30) ಆತ್ಮಹತ್ಯೆಗೈದ ಯುವಕ. ಗಣೇಶ್ ಪ್ರಸನ್ನ ಮತ್ತು ರಾಜೇಶ್ವರಿ ದಂಪತಿಯ ಹಿರಿಯ ಮಗನಾದ ಪವನ್ ಮೈಸೂರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದ ಎನ್ನಲಾಗಿದೆ. ಮೈಸೂರಿನಿಂದ ಬಂದ ಬಳಿಕ ನಿತ್ಯವೂ ಸೋಮೇಶ್ವರ ದೇವಸ್ಥಾನಕ್ಕೆ ಪವನ್ ಬಂದು ಹೋಗುತ್ತಿದ್ದರೆನ್ನಲಾಗಿದೆ. ಬುಧವಾರ ಸಂಜೆ 4.30ರ ಹೊತ್ತಿಗೆ ಸಮುದ್ರ ಕಿನಾರೆಗೆ ಬಂದಿದ್ದ ಪವನ್, ರುದ್ರಪಾದೆಯ […]

ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್​ ವಿದ್ಯಾರ್ಥಿ

Monday, October 21st, 2019
harsha

ಆನೇಕಲ್ : ಈತ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಪ್ರತಿಷ್ಠಿತ ಕಂಪನಿಯೊಂದರ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿದ್ದ. ವರ್ಷಕ್ಕೆ 14 ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಅದಾಗಿತ್ತು. ಕಂಪನಿ ಕಾಲ್ ಲೆಟರ್ನ್ನೂ ಕೊಟ್ಟಿತ್ತು. ಇಷ್ಟೆಲ್ಲ ಆದ ಮೇಲೆ ಈಗ ಆ ಯುವಕ ತಾನು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ಏಳನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮೃತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಹರ್ಷ ಮೃತ ವಿದ್ಯಾರ್ಥಿ. ಈತನನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಅಷ್ಟೇ ಅಲ್ಲದೆ […]

ದೇವಸ್ಥಾನಗಳಿಗೆ ವಾರ್ಷಿಕ ಅನುದಾನ ಹೆಚ್ಚಳಕ್ಕೆ ಚಿಂತನೆ : ಕೋಟಾ ಶ್ರೀನಿವಾಸ್‌ ಪೂಜಾರಿ

Thursday, September 5th, 2019
kota

ಶಿವಮೊಗ್ಗ : ಆರ್ಥಿಕ ಸಂಕಷ್ಟದಲ್ಲಿರುವ 27 ಸಾವಿರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆ ವಾರ್ಷಿಕ ಅನುದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಪ್ರತೀ ವರ್ಷ ಆರ್ಥಿಕ ಸಂಕಷ್ಟದಲ್ಲಿರುವ 27 ಸಾವಿರ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ 48 ಸಾವಿರ ಅನುದಾನವನ್ನು ನೀಡಲಾಗುತ್ತಿದೆ. ಇದನ್ನು ಮುಂಬರುವ ದಿನಗಳಲ್ಲಿ ಹೆಚ್ಚಿಸಲಾಗುವುದು […]

ಕಿವಿಗೆ ಮೊಬೈಲ್ ಹೆಡ್‌ಫೋನ್ ಅಳವಡಿಸಿಕೊಂಡ ಯುವಕನಿಗೆ ಡೆಮೊ ರೈಲು ಬಡಿದು ಸ್ಥಳದಲ್ಲೇ ಸಾವು

Monday, October 3rd, 2016
jagat-hegde

ಕುಂದಾಪುರ: ಕಿವಿಗೆ ಮೊಬೈಲ್ ಹೆಡ್‌ಫೋನ್ ಅಳವಡಿಸಿಕೊಂಡು ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗುತ್ತಿದ್ದ ಯುವಕನಿಗೆ ಡೆಮೊ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕುಂದಬಾರಂದಾಡಿ ಸಮೀಪ ನಡೆದಿದೆ. ಬೆಂಗಳೂರಿನ ನಿವಾಸಿ ಜಗತ್ ಹೆಗ್ಡೆ(23) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಜಗತ್ ಕುಟುಂಬ ದೂರದ ಬೆಂಗಳೂರಿನಲ್ಲಿ ನೆಲೆಸಿದೆ. ಈತ ನಿನ್ನೆ ತನ್ನ ಅಜ್ಜಿಯನ್ನು ಬಿಡಲು ಬೆಂಗಳೂರಿನಿಂದ ಕುಂದಬಾರಂದಾಡಿಗೆ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ನಿನ್ನೆ ಸಂಜೆ ತನ್ನ ಅಜ್ಜಿಯನ್ನು ಮನೆಯಲ್ಲಿ ಬಿಟ್ಟು ರಾತ್ರಿ ಅದೇ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗುವವರಿದ್ದರು. ಅಷ್ಟರಲ್ಲಿಯೇ ಸ್ವಲ್ಪ […]