ಮಂಗಳೂರಿನ ಐವರು ವೈದ್ಯರಲ್ಲಿ ಕೋವಿಡ್-19 ಸೋಂಕು

Thursday, June 25th, 2020
doctors-corona

ಮಂಗಳೂರು:  ಮಂಗಳೂರಿನ ಐವರು ವೈದ್ಯರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದು ರೋಗಿಗಳಲ್ಲಿ  ಆತಂಕಕ್ಕೆ ಕಾರಣವಾಗಿದೆ. ನಗರದ ಕೋವಿಡ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ ಮತ್ತು ಖಾಸಗಿ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ವೈದ್ಯರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ. ಸೋಂಕಿತರ ಪೈಕಿ 28 ವರ್ಷದ ಯುವಕ, 28 ವರ್ಷದ ಇಬ್ಬರು ಯುವತಿಯರು ಮತ್ತು 27 ವರ್ಷದ ಇಬ್ಬರು ಯುವತಿಯರು ಎನ್ನಲಾಗಿದೆ. ಇವರಲ್ಲಿ ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ, ಮೂವರು ಲೇಡಿಗೋಷನ್ ಹೆರಿಗೆ ಆಸ್ಪತ್ರೆ, ಒಬ್ಬರು ಕೆಎಂಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಈ ಐವರಿಗೆ ಕೋವಿಡ್-19 […]

ಮ್ಯಾಗ್ನೆಟ್‌‌‌‌‌‌ ನುಂಗಿದ ಬಾಲಕಿ… ಕೆಎಂಸಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

Tuesday, May 29th, 2018
magnet

ಮಂಗಳೂರು: ಒಂಭತ್ತು ವರ್ಷ ವಯಸ್ಸಿನ ಬಾಲಕಿಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಮ್ಯಾಗ್ನೆಟ್(ಆಯಸ್ಕಾಂತ)ವೊಂದನ್ನು ಹೊರತೆಗೆಯುವ ಮೂಲಕ ಇಲ್ಲಿನ ಕೆಎಂಸಿ ಆಸ್ಪತ್ರೆ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ. ಬಾಲಕಿ ಮನೆಯಲ್ಲಿ ಆಟವಾಡುವಾಗ ಸಣ್ಣ ಮ್ಯಾಗ್ನೆಟ್‌ವೊಂದನ್ನು ನುಂಗಿದ್ದ ಕಾರಣ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಬಲ ಶ್ವಾಸಕೋಶದ ನಾಳದಲ್ಲಿ ಮ್ಯಾಗ್ನೆಟ್ ಇರುವುದನ್ನು ಎಕ್ಸ್-ರೇ ತೋರಿಸಿತ್ತು. ಕೆಎಂಸಿ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಜಯತೀರ್ಥ ಜೋಷಿ ಅವರು ತಕ್ಷಣ ಮಗುವನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ವರ್ಗಾಯಿಸಿ ಬ್ರಾಂಕೊಸ್ಕೋಪ್‌ನಿಂದ ಮ್ಯಾಗ್ನೆಟ್ ಹೊರತೆಗೆಯುವ ಚಿಕಿತ್ಸಾ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದರು. […]

ಬಾಲಕಿಯ ಚಿಕಿತ್ಸೆಗಾಗಿ ಧನ ಸಹಾಯಕ್ಕೆ ಮನವಿ

Friday, December 22nd, 2017
medicine

ಪಡುಬಿದ್ರೆ: ಕೇವಲ ಐದು ವರ್ಷ ಪ್ರಾಯದ ಬಾಲಕಿ ರಕ್ತ ಕ್ಯಾನ್ಸರ್ ರೋಗದಿಂದ ಬಳಲುತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾಳೆ. ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಕೂಲಿ ಕಾರ್ಮಿಕ ತಂದೆ ಚಿಕಿತ್ಸೆಗೆ ಖರ್ಚಾಗಲಿರುವ ಲಕ್ಷಾಂತರ ರೂ. ಭರಿಸಲು ಸಾಧ್ಯವಾಗದೆ ದಾನಿಗಳ ಸಹಕಾರಕ್ಕೆ ಸಹಾಯಕ್ಕೆ ಮನವಿ ಮಾಡಿದ್ದಾರೆ. ಪಲಿಮಾರು ಗ್ರಾಮದ ಕರ್ನಿಕರ ಕಟ್ಟೆ ಬಳಿಯ ನಿವಾಸಿ ಕೂಲಿ ಕಾರ್ಮಿಕ ವಸಂತ ಪೂಜಾರಿ ಮತ್ತು ವಸಂತಿ ದಂಪತಿಯ ಏಕೈಕ ಪುತ್ರಿ ವಂಶಿಕ (5) ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆ. ಈಕೆಯ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ […]

ವಿಶ್ವ ಹೃದಯ ದಿನದ ಓಟ: ಕೆಎಂಸಿ ಆಸ್ಪತ್ರೆಗೆ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ

Monday, September 29th, 2014
World-Heat-Day

ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಹಮ್ಮಿಕೊಂಡಿದ್ದ ‘ವಿಶ್ವ ಹೃದಯ ದಿನದ ಓಟ’ದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದರು. ಕೈಗಳನ್ನು ತೊಡೆಗೆ ಬಡಿ­ಯುತ್ತಾ ಹೃದಯ ಮಾಡುವ ಸದ್ದಿನ ಪ್ರತಿಧ್ವನಿ­ಯನ್ನು 5 ನಿಮಿಷಗಳ ಕಾಲ ಬಾಯಲ್ಲಿ ಮೂಡಿಸಿ ಏಕಕಾಲದಲ್ಲಿ ಇಷ್ಟು ಸಂಖ್ಯೆಯ ಜನ 5 ನಿಮಿಷ ನಿರಂತರವಾಗಿ ಸದ್ದು ಮಾಡಿ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದರು. ಒಟ್ಟು 2500 ಮಂದಿ ನೋಂದಣಿ ಮಾಡಿಸಿ ಕೊಂಡಿದ್ದರು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನ ಪ್ರತಿನಿಧಿಯಾಗಿ ಆಗಮಿಸಿದ […]

ಅತ್ತಾವರ ಮಣಿಪಾಲ್ ಡೆಂಟಲ್ ಕಾಲೇಜಿಗೆ ಮೂರು ವರ್ಷದಿಂದ ಆಕ್ರಮ್ ವಿದ್ಯುತ್ ಸಂಪರ್ಕ

Tuesday, December 10th, 2013
Mescom

ಮಂಗಳೂರು : ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂಬ ದೂರಿನಂತೆ ಮೆಸ್ಕಾಂ ಅಪರಾಧ ಪತ್ತೆ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದರು. ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಎಸ್.ಹನೀಫ್ ಅವರು ದೂರು ನೀಡಿದ್ದರು. ಮೆಸ್ಕಾ ಅಪರಾಧ ಪತ್ತೇದಳದ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ […]

ಕೆಎಂಸಿ: ಶಾರ್ಟ್ ಸರ್ಕ್ಯೂಟ್ ತಪ್ಪಿದ ಭಾರೀ ಅನಾಹುತ

Saturday, January 5th, 2013
KMC hospital Fire

ಮಂಗಳೂರು : ನಗರದ ಕೆಎಂಸಿ ಆಸ್ಪತ್ರೆಯ ಪ್ರಥಮ ಮಹಡಿಯಲ್ಲಿರುವ ಮೈಕ್ರೋಬಯಾಲಜಿ ಪ್ರಯೋಗ ಶಾಲೆಯಲ್ಲಿನ ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಪರಿಣಾಮ ಉಂಟಾದ ಬೆಂಕಿ ಕೆಲ ಕ್ಷಣಗಳಲ್ಲೇ ಕೋಣೆಯ ತುಂಬಾ ಹರಡಿ ಭಾರಿ ಅನಾಹುತ ಸಭಾವಿಸುತ್ತಿತ್ತು ಆದರೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಮತ್ತು ಅಗ್ನಿ ಶ್ಯಾಮಕ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ ಆಗಬಹುದಾದ ಭಾರಿ ಅನಾಹುತವೊಂದು ತಪ್ಪಿದೆ. ಶನಿವಾರ ಮುಂಜಾನೆ ಸುಮಾರು 2.30 ರ ವೇಳೆಗೆ ಎ ಸಿ ಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣದಲ್ಲಿ […]