ಸರ್ಕಾರಿ ಜಾಗದಲ್ಲಿ ಕ್ರೈಸ್ತರು-ಹಿಂದೂಗಳ ನಡುವೆ ಆರಾಧನೆಗೆ ಕಿತ್ತಾಟ

Saturday, September 29th, 2018
Koragajja

ಮಂಗಳೂರು : ಸರ್ಕಾರಿ ಜಾಗದಲ್ಲಿ ಕ್ರೈಸ್ತರು ಮತ್ತೆ ಹಿಂದೂಗಳ ನಡುವೆ ಆರಾಧನೆ ಮಾಡುವ ವಿಚಾರದಲ್ಲಿ ಕಿತ್ತಾಟ ಆರಂಭ ಗೊಂಡಿದ್ದು ಮೇರಿಯ ಮಾತೆಯ ಆರಾಧನೆಯ ಸ್ಥಳದಲ್ಲಿ ಶುಕ್ರವಾರ ಮಧ್ಯರಾತ್ರಿ ನಂತರ ಕೊರಗಜ್ಜ ದೈವದ ಆರಾಧನೆ ಆರಂಭ ಗೊಂಡಿದೆ. ಬಂಟ್ವಾಳ ತಾಲೂಕು ಕುಂಟ್ರಕಳದ ಸರ್ಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಮೇರಿ ಆರಾಧನೆ ಬಗ್ಗೆ ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು. ಕ್ರೈಸ್ತರು ಆರಾಧನೆ ಮಾಡುತ್ತಿದ್ದ ಸ್ಥಳದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 45 ವರ್ಷಗಳಿಂದ ಕುಂಟ್ರಕಳದಲ್ಲಿ ಮಾತೆ ಮೇರಿಯ ಮೂರ್ತಿಯನ್ನಿಟ್ಟು ಕ್ರೈಸ್ತರು  ಕೆಲವು  ಆರಾಧನೆ ಮಾಡುತ್ತಿದ್ದರು. ಸೆ.28 ಮಧ್ಯರಾತ್ರಿ  ಹಿಂದೂಗಳ ತಂಡ […]

ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರ “ಮೈನರ್‌ ಬಸಿಲಿಕ”ವಾಗಿ ಘೋಷಣೆ

Tuesday, August 2nd, 2016
St-Lawrence-Shrine

ಕಾರ್ಕಳ: ರಾಜ್ಯದ ಕರಾವಳಿಯ ಕ್ರೈಸ್ತರ ಪರಮ ಪಾವನ ಹಾಗೂ ಕಾರಣಿಕ ಕ್ಷೇತ್ರವಾಗಿರುವ ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರವನ್ನು ಸೋಮವಾರ ಕಿರಿಯ ಮಹಾದೇವಾಲಯ (ಮೈನರ್‌ ಬಸಿಲಿಕ) ಎಂಬುದಾಗಿ ಘೋಷಿಸುವ ಮೂಲಕ ಉಡುಪಿ ಜಿಲ್ಲೆಯ ಪುಟ್ಟ ತಾಲೂಕು ಕಾರ್ಕಳ ವಿಶ್ವದ ಇತಿಹಾಸದ ಪುಟದಲ್ಲಿ ಸದಾ ಗುರುತಿಸುವ ಸ್ಥಾನ ಪಡೆದುಕೊಂಡಿತು. ಇದು ಕರ್ನಾಟಕ ರಾಜ್ಯದ 2ನೇ ಮತ್ತು ರಾಜ್ಯದ 22ನೇ ಕಿರಿಯ ಹಾಗೂ ಜಗತ್ತಿನ 1742ನೇ ಮಹಾ ದೇವಾಲಯವಾಗಿದೆ. ಬೆಳಗ್ಗೆ 10 ಗಂಟೆಗೆ ಮುಂಬಯಿ ಆರ್ಚ್‌ ಬಿಷಪ್‌ ಹಾಗೂ ಸಿಸಿಬಿಐ […]

ಮಂಗಳೂರಿನ ಚರ್ಚ್‌ಗಳಲ್ಲಿ ಈಸ್ಟರ್‌ ಹಬ್ಬದ ವಿಶೇಷ ಪ್ರಾರ್ಥನೆ

Monday, April 21st, 2014
ಮಂಗಳೂರಿನ  ಚರ್ಚ್‌ಗಳಲ್ಲಿ ಈಸ್ಟರ್‌ ಹಬ್ಬದ ವಿಶೇಷ ಪ್ರಾರ್ಥನೆ

ಮಂಗಳೂರು : ಈಸ್ಟರ್‌ ಹಬ್ಬದ ಅಂಗವಾಗಿ ಕ್ರೈಸ್ತರು ಶನಿವಾರ ರಾತ್ರಿ ಮತ್ತು ರವಿವಾರ ಮಂಗಳೂರಿನ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು ಸಂಭ್ರಮದ ಬಲಿಪೂಜೆಯೊಂದಿಗೆ ಶ್ರದ್ಧೆ ಭಕ್ತಿಯಿಂದ ಆಚರಿಸಿದರು. ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಶನಿವಾರ ರಾತ್ರಿ ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ ಈಸ್ಟರ್‌ ಬಲಿ ಪೂಜೆ ಅರ್ಪಿಸಿದರು. ಮಂಗಳೂರಿನ ಬಲ್ಮಠದ ಚರ್ಚ್‌ ಆಫ್‌ ಸೌತ್‌ ಇಂಡಿಯಾದ ಬಿಷಪ್‌ ರೆ| ಜೆ.ಎಸ್‌. ಸದಾನಂದ […]

ಕ್ರೈಸ್ತರ ಮೇಲಿನ 23 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ನಿರ್ಧಾರ

Saturday, December 3rd, 2011
DVS and Fathers

ಮಂಗಳೂರು : 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಚರ್ಚ್‌ ದಾಳಿಯ ವೇಳೆ ಪ್ರತಿಭಟಿಸಿದ್ದ ಹಾಗೂ ಕ್ರೈಸ್ತರ ಮೇಲೆ ದಾಖಲಿಸಲಾಗಿದ್ದ 23 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್‌ ವರಿಷ್ಠರಿಗೆ ತಮ್ಮ ಅಹವಾಲು ಸಲ್ಲಿಸಿದ್ದರೂ ಅಮಾಯಕರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂದಕ್ಕೆ ಪಡೆದಿರಲಿಲ್ಲ. ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ಈ ನಿರ್ಧಾರವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಎಲೋಶಿಯಸ್‌ ಪಾವ್ಲ್ […]

ಮೇರಿ ಮಾತೆಯ ಜನ್ಮದಿನ (ಹೊಸ ಬೆಳೆಯ)ಮೊಂತಿ ಹಬ್ಬ ಆಚರಣೆ

Friday, September 9th, 2011
Monti-fest/ಮೇರಿ ಮಾತೆಯ ಜನ್ಮದಿನ

ಮಂಗಳೂರು : ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವನ್ನು ಸೆ. 8, ಗುರುವಾರ ಕ್ರೈಸ್ತರು ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸಿದರು. ಕರಾವಳಿ ಜಿಲ್ಲೆಗಳಲ್ಲಿ ಮೇರಿ ಮಾತೆಯ ಜನ್ಮದಿನವನ್ನು ಮೊಂತಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ‘ದೇವ ಮಾತೆ’ ಮೇರಿ ಮಾತೆ ಪವಾಡಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಕ್ಯಾಥೋಲಿಕರ ನಂಬಿಕೆ. ಕ್ರೈಸ್ತರು ಈ ದಿನವನ್ನು ಹೊಸ ಬೆಳೆಯ ಹಬ್ಬ ಎಂದು ಕರೆಯುತ್ತಾರೆ. ಬಾಲೆ ಮೇರಿಗೆ ನಮಿಸುವುದರ ಜತೆಗೆ ಹೊಸ ಭತ್ತದ ತೆನೆಯನ್ನು ಕ್ರೈಸ್ತ […]