ದೆಹಲಿಯಲ್ಲಿ ಇನ್ನೂ ಆರದ ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚು : ಮೆಟ್ರೋ ನಿಲ್ದಾಣ ಸ್ಥಗಿತ, ಟ್ರಾಫಿಕ್​ ಜಾಮ್

Thursday, December 19th, 2019
dehli

ನವ ದೆಹಲಿ : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿರುವ ಪ್ರತಿಭಟನೆಯ ಕಾವು ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಂದೂ ಸಹ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು ದೆಹಲಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ 13 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಅಧಿಕ ವಾಹನ ಸಂದಣಿ ಹೊಂದಿರುವ ದೆಹಲಿಯಲ್ಲಿ ಮೆಟ್ರೋ ಸಂಚಾರ ಪ್ರಯಾಣಿಕರ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನ ಮೆಟ್ರೋ ಸೇವೆಯನ್ನು ಅವಲಂಭಿಸಿದ್ದಾರೆ. ಆದರೆ, ಪೌರತ್ವ […]

ಮಂಗಳೂರು : ರಸ್ತೆಯಲ್ಲೇ ಸಿಲುಕಿದ ಬೃಹತ್ ಟ್ರಕ್; ಟ್ರಾಫಿಕ್ ಜಾಮ್

Thursday, December 12th, 2019
Track

ಮಂಗಳೂರು : ಬೃಹತ್ ಗಾತ್ರದ ಟ್ರಕ್ ಶರ್ಬತ್ ಕಟ್ಟೆ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಿಲುಕಿದ ಪರಿಣಾಮ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಶರ್ಬತ್ ಕಟ್ಟೆ ಬಳಿ ಟ್ರಕ್ ಚಾಲಕ ಯು-ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಅದು ಸಾಧ್ಯವಾಗದೇ ರಸ್ತೆಯಲ್ಲೇ ಸಿಲುಕಿಕೊಂಡು ಸಂಚಾರ ದಟ್ಟನೆಗೆ ಕಾರಣವಾಗಿತ್ತು. ಶಾಲಾ ಕಾಲೇಜಿಗೆ,ಕಚೇರಿಗೆ, ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ದಾವಂತದಲ್ಲಿದ್ದ ಜನರೆಲ್ಲಾ ಅನಿರೀಕ್ಷಿತ ಟ್ರಾಫಿಕ್ ಜಾಮ್ ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ […]

ಉಡುಪಿ : ರಸ್ತೆಯಲ್ಲೇ ಪಾರ್ಕಿಂಗ್‌; ಸಾರ್ವಜನಿಕರಿಗೆ ತೊಂದರೆ

Saturday, September 21st, 2019
udupi

ಉಡುಪಿ : ಜಿಲ್ಲೆಯಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಮಣಿಪಾಲದಿಂದ ಅಲೆವೂರು ಸಂಪರ್ಕಿಸುವ ರಸ್ತೆ ಮತ್ತು ಎಂ.ಜೆ. ಸಿ.ಯಿಂದ ಬರುವ ರಸ್ತೆ ಮೂರು ಕಡೆಗಳಿಂದ ಕೂಡುತ್ತವೆ. ಈ ಭಾಗದಲ್ಲಿಯೇ ಬಿಎಸ್‌ಎನ್‌ ಎಲ್‌ ಕಚೇರಿ , ಸಿಂಡಿಕೇಟ್‌ ಬ್ಯಾಂಕಿನ ಮುಖ್ಯ ಕಚೇರಿ ಇವೆ. ಈ ರಸ್ತೆಯಲ್ಲಿ ಬಸ್‌, ಕಾರು, ದ್ವಿಚಕ್ರ ವಾಹನಗಳನ್ನು ರಸ್ತೆಗೆ ಹೊಂದಿಕೊಂಡೇ ನಿಲ್ಲಿಸುವುದರಿಂದ ವಾಹನಗಳ ಸರಾಗ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು […]

ಮೂಲಸೌಕರ್ಯ ಹೊಂದಿದ ಮಂಗಳೂರಿಗೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆ

Wednesday, November 1st, 2017
smart city

ಮಂಗಳೂರು: ವಿಶ್ವದಲ್ಲಿ ವಾಸಸ್ಥಾನಕ್ಕೆ ಯೋಗ್ಯ ಸ್ಥಳ, ಉತ್ತಮ ಮೂಲಸೌಕರ್ಯ ಹೊಂದಿದ ಸ್ಥಳ ಎಂಬೆಲ್ಲಾ ಹಿರಿಮೆಯನ್ನು ಪಡೆದುಕೊಂಡ ಮಂಗಳೂರಿಗೆ, ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಒಂದು ಸವಾಲಾಗಿ ಪರಿಣಮಿಸಿದೆ. ಮಂಗಳೂರು ಸ್ಮಾರ್ಟ್‌ ಸಿಟಿ ಆಗಿ ಆಯ್ಕೆಯಾದ ಬೆನ್ನಲ್ಲೇ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಈ ಸಮಸ್ಯೆ ನಿವಾರಿಸಲು ಮಂಗಳೂರು ಮಹಾನಗರ ಪಾಲಿಕೆಯು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಂಗಳೂರು ನಗರದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಅದರಲ್ಲಿ ದೂರದ ಊರುಗಳಿಂದ ನಗರಕ್ಕೆ ಬರುವ […]

ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ಬೆಂಗಳೂರು ತತ್ತರ

Friday, July 29th, 2016
Bengaluru-rain

ಬೆಂಗಳೂರು: ಸತತ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದ್ದು, ನಿನ್ನೆ ಇಡೀ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ಪ್ರದೇಶಗಳು ಜಲಾವೃತ್ತವಾಗಿವೆ. ಬೆಂಗಳೂರಿನ ಕೆಂಗೇರಿ, ಬಾಪೂಜಿನಗರ, ಬಿಳೇಕಹಳ್ಳಿ, ಶಿವಾಜಿನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮೈಸೂರು ರಸ್ತೆಯಿಂದ ಸಿಟಿ ಮಾರುಕಟ್ಟೆ ಸಂಪರ್ಕಿಸುವ ಶ್ರೀ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ ಸೇರಿದಂತೆ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ 2 ರಿಂದ 3 ಅಡಿಗಳಷ್ಟು ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು. ಇನ್ನು ನಾಯಂಡಹಳ್ಳಿ ಸಮೀಪ […]

ರವೂಫ್ ನತ್ತ ಪೊಲೀಸ್ ಇಲಾಖೆ ಗಮನಹರಿಸಲಿ…

Saturday, January 3rd, 2015
Traffic Rauf

ಮಂಗಳೂರು : ಯಾರಿಗೆ ಏನು ಆಗಬೇಕು ಎಂದು ಮನಸ್ಸಿರತ್ತೋ ಅದೇ ಆಗುತ್ತಾ ಹೋದರೆ ದೇಶದಲ್ಲಿ ಬಡವ, ಶ್ರೀಮಂತ ಅಥವಾ ವಿದ್ಯಾವಂತ, ಅವಿದ್ಯಾವಂತ, ನಿರುದ್ಯೋಗಿ, ಉದ್ಯೋಗಿ ಎನ್ನುವ ವಿಂಗಡನೆನೆ ಇರುತ್ತಿರಲಿಲ್ಲ. ಆದರೆ ಭಗವಂತನ ಮನಸ್ಸಿನಲ್ಲಿ ಹೇಗೆ ಇದೆಯೋ ಪ್ರಪಂಚ ಹಾಗೇ ನಡೆಯುತ್ತದೆ. ನಾಸ್ತಿಕರು ಇದನ್ನು ಒಪ್ಪುತ್ತಾರೋ ಬಿಡ್ತಾರೋ ಅದು ಬೇರೆ ವಿಷಯ. ಆದರೆ ಜೆ. ಅಬ್ದುಲ್ ರವೂಫ್ ಎಂಬ 42 ವರ್ಷದ ವ್ಯಕ್ತಿಯನ್ನು ನೀವು ಸರಿಯಾಗಿ ಗಮನಿಸಿದರೆ ಭಗವಂತ ಇವರ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಕರುಣೆ ತೋರಬೇಕು ಎಂದು […]