ಕೊಡಗಿನಲ್ಲಿ ಭಾರಿ ಮಳೆ ಸಾಧ್ಯತೆ : ಆರೆಂಜ್ ಆಲರ್ಟ್

Saturday, September 7th, 2019
kodagu

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮತ್ತೆ ವರುಣನ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ. ಮುಂದಿನ 48 ಗಂಟೆಗಳಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿ ಆಧರಿಸಿ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿರುವುದಾಗಿ ಹವಾಮಾನ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ. ಕೊಡಗು ಜಿಲ್ಲೆಯ ಭಾಗಮಂಡಲ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಳೆದ 24 […]

ಮಂಗಳೂರಿನಲ್ಲಿ ಧಾರಾಕಾರ ಮಳೆ; ವಾಹನಗಳ ಓಡಾಟಕ್ಕೆ ಸಮಸ್ಯೆ

Monday, August 26th, 2019
kottaara

ಮಂಗಳೂರು : ನಗರದಲ್ಲಿ ಸುರಿದ ಭಾರೀ ಮಳೆಗೆ ಮಂಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ನೀರು ತುಂಬಿದ ಪರಿಣಾಮ ಸಂಚಾರ ಅಸ್ತವ್ಯಸ್ತ ಗೊಂಡಿದೆ. ಸೋಮವಾರ ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ನಗರದ ಕೊಟ್ಟಾರ , ಕಾಪಿಕಾಡ್, ಬಿಜೈ, ನಂತೂರು, ಅಳಕೆ ಪರಿಸರದಲ್ಲಿ ನೀರು ತುಂಬಿದ್ದು ಸಂಚಾರ ದುಸ್ತರಗೊಂಡಿದೆ. ಈ ಮಧ್ಯೆ ನಗರದ ಸುಲ್ತಾನ ಬತ್ತೇರಿಯಲ್ಲೂ ನೀರು ಕೆಲವು ಅಂಗಳ ದಾಟಿವೆ. ಮಠದ ಕಣಿಯಲ್ಲಿರುವ 4 ಮನೆಗಳು ಕೂಡ ಅಪಾಯದಲ್ಲಿದೆ.    

ಅನಿರೀಕ್ಷಿತ ಮಳೆಗೆ ಜಿಲ್ಲೆಯಲ್ಲಿ ಮನೆಕುಸಿತ, ವಿದ್ಯುತ್ ವತ್ಯಯ

Saturday, September 25th, 2010
ಅತ್ತಾವರದಲ್ಲಿ ಮಳೆಗೆ ಕುಸಿದ ಮನೆ

ಮಂಗಳೂರು : ಮುಂಗಾರು ಮಳೆ ಕಡಿಮೆಯಾಗಿ ಜನರು ಸ್ವಲ್ಪ ಮಟ್ಟಿಗೆ ಓಡಾಟ ಅರಂಭಿಸುತ್ತಿರುವಾಗಲೇ ಮತ್ತೆ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಪಾರ ನಷ್ಟ, ಹಾನಿ ಸಂಭವಿಸಿದೆ. ಮಂಗಳೂರಿನ ಪಾಂಡೇಶ್ವರದಲ್ಲಿ ರುಕ್ಮಯ ಎಂಬವರ ಮನೆ, ಪಂಪ್ವೆಲ್ ಸಮೀಪ ಒಂದು ಮನೆ ಅರ್ಧದಷ್ಟು ಕುಸಿದಿದೆ, ಬೆಂದೂರುವೆಲ್ ಸಮೀಪ ಆವರಣಗೋಡೆಯೊಂದು ಕುಸಿದು ಬಿದ್ದಿದೆ.  ಅತ್ತಾವರ ಕೆಎಂಸಿ ಆಸ್ಪತ್ರೆ ಎದುರಿನಲ್ಲಿ ಹಳೆಯ ಹಂಚಿನ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಸುರತ್ಕಲ್  ಪರಿಸರದಲ್ಲಿ ಹಾನಿಯಾದ ಪ್ರದೇಶಗಳಿಗೆ […]