ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ರಾಜಕೀಯ ಪ್ರೇರಿತ ಪ್ರೇಮಾನಂದ ಶೆಟ್ಟಿ

Friday, December 4th, 2020
Premananda Shetty

ಮಂಗಳೂರು:  ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವುದನ್ನು ತಡೆಯಲು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಇದು ರಾಜಕಾರಣ ಪ್ರೇರಿತ ಎಂದು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 2003 ರಲ್ಲಿ ಅಂದಿನ ಮೇಯರ್ ಆಗಿದ್ದ ದಿವಾಕರ್ ಲೇಡಿಹಿಲ್ ಬಳಿಯಿರುವ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕೆಂದು ಮನಪಾದಲ್ಲಿ ನಿರ್ಣಯ ಮಂಡಿಸಿದ್ದರು. […]

ಪ್ರತಿಪಕ್ಷಗಳ ಆರೋಪ ನಿರಾಧಾರ -ಆರೋಗ್ಯ ಸಚಿವ ಬಿ.ಶ್ರೀರಾಮುಲು

Monday, July 20th, 2020
sriramulu

ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಚಿಕಿತ್ಸೆಗಾಗಿ ಅಗತ್ಯವಿರುವ ಆರೋಗ್ಯ ಸಂಬಂಧಿತ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎನ್ನುವ ಪ್ರತಿಪಕ್ಷಗಳ ಆರೋಪ ನಿರಾಧಾರವಾಗಿದ್ದು, ಇಂತಹ ಯಾವುದೇ ಪ್ರಕರಣಗಳು ನಡೆದಿರುವುದಿಲ್ಲ, ಅವ್ಯವಹಾರ ಸಾಭೀತದಾದಲ್ಲಿ ತಕ್ಷಣವೇ ರಾಜಿನಾಮೆ ನೀಡಲು ಸಿದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳ ಆರೋಪ ಕುರಿತು ಇಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಪಕ್ಷಗಳು ಕಳೆದ ಮಾರ್ಚ್‍ನಲ್ಲಿ ಇದ್ದ ರಾಜ್ಯದ ಪರಿಸ್ಥಿತಿಯನ್ನು […]

ಹೋಳಿ ಹಬ್ಬದ ಬಳಿಕ ದೆಹಲಿ ದಂಗೆ ಚರ್ಚೆ: ಸ್ಪೀಕರ್ ತೀರ್ಮಾನಕ್ಕೆ ಪ್ರತಿಪಕ್ಷಗಳ ಆಕ್ಷೇಪ

Tuesday, March 3rd, 2020
navadehali

ನವದೆಹಲಿ : ದೆಹಲಿ ಸಿಎಎ ದಂಗೆ ಕುರಿತು ಹೋಳಿ ಹಬ್ಬದ ನಂತರವಷ್ಟೇ ಚರ್ಚೆಗೆ ಆಸ್ಪದ ನಿಡಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ. ದೆಹಲಿ ದಂಗೆ ಕುರಿತು ಈ ಕೂಡಲೇ ಚರ್ಚೆಗೆ ಅವಕಾಶ ಕೊಡಬೇಕು ಎಂಬ ಪ್ರತಿಪಕ್ಷಗಳ ಆಗ್ರಹವನ್ನು ತಳ್ಳಿ ಹಾಕಿದ ಓಂ ಬಿರ್ಲಾ, ಹೋಳಿ ಹಬ್ಬ ಆಚರಣೆ ಬಳಿಕವಷ್ಟೇ ಚರ್ಚೆ ಮಾಡೋಣ ಎಂದು ಹೇಳಿದರು. ಸ್ಪೀಕರ್ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು, ಸರ್ಕಾರಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡಿಕೊಡುವಲ್ಲಿ ಸ್ಪೀಕರ್ ನಿರತರಾಗಿದ್ದಾರೆ […]

ಬಜೆಟ್​ ಅಧಿವೇಶನದಂದು ಸಂವಿಧಾನ ಕುರಿತು ಎಲ್ಲಾ ಸದಸ್ಯರಿಂದ ಭಾಷಣ : ಸಿಎಂ ಬಿಎಸ್​ ಯಡಿಯೂರಪ್ಪ

Wednesday, February 26th, 2020
bsy

ಕೊಪ್ಪಳ : ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರು ಸಂವಿಧಾನದ ಕುರಿತು ಮಾತನಾಡಲಿದ್ದು, ಇದೊಂದು ಐತಿಹಾಸಿಕ ಅಧಿವೇಶನ ಆಗಿರಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು. ಇಲ್ಲಿನ ಕುಕನೂರಿನಲ್ಲಿ ಮಾತನಾಡಿದ ಅವರು, ಸಂವಿಧಾನ ಕುರಿತು ಶಾಸಕರು ಮಾತನಾಡಲು ನೆರವಾಗಲು ಕನ್ನಡ ಅನುವಾದ ಪ್ರತಿ ಮುದ್ರಿಸಿ ಹಂಚಲಾಗುವುದು. ಇದರಿಂದ ಸಂವಿಧಾನವನ್ನು ಓದಿಕೊಂಡು ಬರಲು ಸಹಾಯಕವಾಗಲಿದೆ. ಬಜೆಟ್ ಮುನ್ನ ಅಂದರೆ ಮಾರ್ಚ್ 3 ಮತ್ತು 4ರಂದು ಎಲ್ಲ ಶಾಸಕರು ಸಂವಿಧಾನದ ಕುರಿತು ಭಾಷಣ ಮಾಡಲಿದ್ದಾರೆ ಎಂದರು. ಇದೇ ಮೊದಲ […]