ದೋಣಿ ದಟ್ಟಣೆ ನಿವಾರಣೆಗೆ ಪೂರಕ: ಸಚಿವ ಪ್ರಮೋದ್‌

Friday, March 23rd, 2018
bhaskar-moily

ಮಂಗಳೂರು: ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ದೋಣಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಲ್ತಾನ್‌ ಬತ್ತೇರಿ ಬಳಿಯಲ್ಲಿ ನಿಲುಗಡೆ (ಐಡಲ್‌ಬರ್ತಿಂಗ್‌) ಜೆಟ್ಟಿಯನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಸುಲ್ತಾನ್‌ಬತ್ತೇರಿಯಲ್ಲಿ 5 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸುಸಜ್ಜಿತ ನಿಲುಗಡೆ ಜೆಟ್ಟಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಐದು ಕೋ. ರೂ. ವೆಚ್ಚದಲ್ಲಿ 102 ಮೀ. ಉದ್ದದ ಈ ಜಟ್ಟಿ ನಿರ್ಮಾಣಗೊಂಡಿದ್ದು, ಇದರಿಂದ ಈ ಪ್ರದೇಶದ ಮೀನುಗಾರರಿಗೆ ತಮ್ಮ ದೋಣಿ ನಿಲುಗಡೆಗೊಳಿಸಲು […]

ಅಕ್ರಮ ಮರದ ದಿಮ್ಮಿಗಳು ಪತ್ತೆ

Thursday, March 8th, 2018
marada-dimmi

ಮಂಗಳೂರು: ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 07 ರಂದು, ಮಂಗಳೂರಿನ ಅರ್ಜುನಕೋಡಿ ರಸ್ತೆಯ ಎಡಪದವು ಎಂಬಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾಗ, ಆ ಪ್ರದೇಶದಲ್ಲಿ ಚಲಿಸುತ್ತಿದ್ದ ಟೆಂಪೋ ನೊಂದಣೆ ಸಂಖ್ಯೆ: ಕೆಎ-20-3819ರಲ್ಲಿ ಹೆಬ್ಬಲಸು ಮತ್ತು ಮಾವು ಜಾತಿಯ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಉಪ ವಲಯ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿ ಅರಣ್ಯ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ. ಹೆಬ್ಬಲಸು ಮತ್ತು ಮಾವು ಜಾತಿಯ ಒಟ್ಟು 13 ದಿಮ್ಮಿಗಳನ್ನು ಹಾಗೂ ಸಾಗಾಟ ಮಾಡಲಾದ ಟೆಂಪೋವನ್ನು ಸರಕಾರಕ್ಕೆ ಅಮಾನತು […]

ಪಡುಕರೆಯಲ್ಲಿ 4ನೇ ಹಂತದ ಮೀನುಗಾರಿಕೆ ಬಂದರು: ಪ್ರಮೋದ್‌

Tuesday, January 23rd, 2018
pramod-madhwaraj

ಮಲ್ಪೆ: ಪಡುಕರೆ ಭಾಗದಲ್ಲಿ 4ನೇ ಹಂತದ ಮೀನುಗಾರಿಕೆ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ 20 ಕೋ. ರೂ. ಪ್ರಸ್ತಾವನೆಯನ್ನು ನಬಾರ್ಡ್‌ಗೆ ಕಳುಹಿಸಲಾಗಿದ್ದು, ಇದರಲ್ಲಿ 10 ಕೋ. ರೂ. ಅತೀ ಶೀಘ್ರದಲ್ಲಿ ಮಂಜೂರಾಗುವ ಸಾಧ್ಯತೆ ಇದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ರವಿವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಮಲ್ಪೆ ಪರ್ಸಿನ್‌ ಮೀನುಗಾರರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ವಾಂಗೀಣ ಅಭಿವೃದ್ಧಿ ರಾಜ್ಯ ಸರಕಾರವು ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಆರಂಭದಿಂದಲೂ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. […]

ಉಡುಪಿ ಜಿಲ್ಲೆಗೆ 5 ಕೋಟಿ ರೂ. ವೆಚ್ಚದ ಡಿಜಿಟಲ್ ಗ್ರಂಥಾಲಯ: ಪ್ರಮೋದ್

Friday, January 5th, 2018
pramod-madhwaraj

ಉಡುಪಿ: ಇಡೀ ರಾಜ್ಯಕ್ಕೆ ಮಾದರಿ ಎನಿಸುವಂತಹ ಡಿಜಿಟಲ್ ಗ್ರಂಥಾಲಯವನ್ನು ಸುಮಾರು 5 ಕೋಟಿ.ರೂ ಅನುದಾನದಡಿ ಅಜ್ಜರಕಾಡಿನಲ್ಲಿ ನಿರ್ಮಿಸಲಾಗುತ್ತಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ ಹಾಗೂ ರಾಜಾರಾಮ್ ಮೋಹನ್‌ರಾಯ್ ಲೈಬ್ರರಿ ಫೌಂಡೇಶನ್ ಕೊಲ್ಕತ್ತಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಂಥಾಲಯ ಮೇಲ್ವಿಚಾರಕರಿಗೆ ಮೂರು ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಗುರುವಾರ […]

ಗೋ ಮಾಂಸ ದಂಧೆ ಪತ್ತೆ

Tuesday, January 2nd, 2018
arrested

ಕುಂದಾಪುರ : ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಗೋ ಮಾಂಸವನ್ನು ಆಟೋ ರಿಕ್ಷಾದಲ್ಲಿರಿಸಿಕೊಂಡು ಕುಂಭಾಶಿ ಕಡೆಗೆ ಬರುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಸಾರ್ವಜನಿಕರು ಹಾಗೂ ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ಸದಸ್ಯರು ಪತ್ತೆ ಹಚ್ಚಿ ಪೊಲೀಸ್‌ ವಶಕ್ಕೆ ನೀಡಿದ ಘಟನೆ ರವಿವಾರ ಸಂಭವಿಸಿದೆ. ಬೇಳೂರಿನಿಂದ ಕುಂಭಾಶಿ ಕಡೆಗೆ ಬೆಳಗ್ಗೆ 8 ಗಂಟೆ ಸುಮಾರಿಗೆ ಆಟೋ ರಿಕ್ಷಾದಲ್ಲಿ ನಾಲ್ವರು ಅನುಮಾನಾಸ್ಪದ ಸ್ಥಿತಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಸ್ಥಳೀಯರು ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ […]

ಅತ್ಯಂತ ಸುಂದರ ಬೀಚ್‌ ಆಗಿ ಮಲ್ಪೆ-ಪಡುಕರೆ: ಪ್ರಮೋದ್‌ ಆಶಯ

Monday, January 1st, 2018
malpe-beach

ಉಡುಪಿ: ಒಂದೆಡೆ ಭೋರ್ಗರೆಯುವ ಸಮುದ್ರ, ಇನ್ನೊಂದೆಡೆ ಜನಸಾಗರದ ನಡುವೆ ಮಲ್ಪೆ ಕಡಲ ಕಿನಾರೆಯಲ್ಲಿ ಮೂರು ದಿನಗಳ ಕಾಲ ನಡೆದ ಉಡುಪಿ ಪರ್ಬ, ಅಡ್ವೆಂಚರ್‌ ಫೆಸ್ಟಿವಲ್‌ ರವಿವಾರ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮಲ್ಪೆ- ಪಡುಕರೆ ಜಗತ್ತಿನಲ್ಲಿ ಸುಂದರ, ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ಬೆಳೆಯಬೇಕೆಂಬುದು ನನ್ನ ಹಂಬಲವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಥಮ ಹಂತದಲ್ಲಿ ಇಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸೀ ವಾಟರ್‌ ನ್ಪೋರ್ಟ್ಸ್ ಅಡ್ವೆಂಚರ್‌ ಸೆಂಟರನ್ನು […]

ರೈತರ ಸಂಚಾರಿ ತರಕಾರಿ ಮಾರುಕಟ್ಟೆಗೆ ಸಚಿವ ಪ್ರಮೋದ್ ಚಾಲನೆ

Saturday, December 30th, 2017
udupi

ಉಡುಪಿ: ರೈತರು ಬೆಳೆದ ತಾಜಾ ತರಕಾರಿಗಳನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ನೇರವಾಗಿ ಗ್ರಾಹಕರಿಗೆ ಸಿಗುವಂತೆ ಸಂಚಾರಿ ತರಕಾರಿ ಮಾರುಕಟ್ಟೆಗೆ ಶುಕ್ರವಾರ ಮಣಿಪಾಲದಲ್ಲಿ ಚಾಲನೆ ನೀಡಲಾಯಿತು. ಮಣಿಪಾಲ ಟೈಗರ್ ಸರ್ಕಲ್‌ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್, ತರಕಾರಿ ಖರೀದಿಸುವ ಮೂಲಕ ಸಂಚಾರಿ ತರಕಾರಿ ಮಾರಾಟ ವ್ಯವಸ್ಥೆಗೆ ಚಾಲನೆ ನೀಡಿದರು. ತರಕಾರಿ ಬೆಳೆಗಾರರ ಸೌಹಾರ್ದ ಸಹಕಾರಿ ಸಂಘ ಬೆನೆಗಲ್- ಕುಕ್ಕೆಹಳ್ಳಿ- ಮಟ್ಟು, ರಾಷ್ಟ್ರೀಯ ಕೃಷಿ ಮತುತಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಕಾರದಲ್ಲಿ ಈ ಸಂಚಾರಿ […]