ತಂದೆ ಹಾಗೂ ಮಗಳ ಮುಂದೆಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Wednesday, April 17th, 2024
Netravathi

ಬಂಟ್ವಾಳ : ಫರಂಗಿಪೇಟೆಯಲ್ಲಿ ಮಹಿಳೆಯೊಬ್ಬರು ತಂದೆ ಹಾಗೂ ಪುತ್ರಿಯ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ‌ ನಡೆದಿದೆ. ನದಿಗೆ ಹಾರುವುದನ್ನು ಪುತ್ರಿ ಹಾಗೂ ಮಹಿಳೆಯ ತಂದೆ ತಡೆಯಲು ಯತ್ನಿಸಿದರೂ ಅವರಿಂದ ತಪ್ಪಿಸಿಕೊಂಡು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಡರ ಪತ್ನಿ ಯಶೋಧಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಘಟನೆಯ ಕುರಿತು ಆಕೆಯ ಪುತ್ರಿ ಸಂಪ್ರೀತಾ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಶೋಧ ಅವರು ಮೂರ್ಛೆ ರೋಗದಿಂದ […]

ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

Wednesday, October 20th, 2021
Baby Girl

ಬಂಟ್ವಾಳ : ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆ ಆಂಬ್ಯುಲೆನ್ಸ್ ನಲ್ಲಿ ಮಗುವಿಗೆ  ಜನ್ಮ ನೀಡಿರುವ ಘಟನೆ ಬಂಟ್ವಾಳದ ಫರಂಗಿಪೇಟೆಯ ಸಮೀಪ ನಡೆದಿದೆ. ಅನಂತಾಡಿ ನಿವಾಸಿ ಸಂದೀಪ್ ಅವರ ಪತ್ನಿ ಸುಪ್ರಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ನಿವಾಸಿ ಗರ್ಭಿಣಿಯಾಗಿದ್ದ ಸುಪ್ರಿತಾ ಅವರನ್ನು ಹೆರಿಗೆಗಾಗಿ 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಫರಂಗಿಪೇಟೆಯ ಸಮೀಪ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಾಣಿ ವ್ಯಾಪ್ತಿಯ 108 ಆ್ಯಂಬುಲೆನ್ಸ್ ಮೂಲಕ […]

ಫರಂಗಿಪೇಟೆಯ ಸ್ಟುಡಿಯೋ ಮಾಲಕನ ಕೊಲೆ ಯತ್ನ, ಮೂವರು ಆರೋಪಿಗಳ ಬಂಧನ

Thursday, October 29th, 2020
dinesh

ಬಂಟ್ವಾಳ : ಫರಂಗಿಪೇಟೆಯ ತ್ರಿಷಾ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಅವರ ಕೊಲೆಗೆ ಯತ್ನ ನಡೆಸಿದ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮ್ಮೆಮ್ಮಾರು ನಿವಾಸಿ ಮುಹಮ್ಮದ್ ಅರ್ಷದ್(19),ಅಬ್ದುಲ್ ರಹ್ಮಾನ್(22) ಮತ್ತು ಮುಹಮ್ಮದ್ ಸೈಪುದ್ದೀನ್(22) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಸವಾದ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ  ರಾತ್ರಿ ಸುಮಾರು 7:15ರ ವೇಳೆಗೆ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ಅವರಿಗೆ ಸೇರಿದ ತ್ರಿಷಾ ಸ್ಟುಡಿಯೋಗೆ 3 ಮಂದಿ ಯುವಕರ ತಂಡ ಫೋಟೋ ತೆಗೆಸುವ […]

ಪೊಲೀಸರಿಗೆ ಮಾಹಿತಿ ನೀಡಿದ್ದೆ ಸ್ಟುಡಿಯೋ ಮಾಲೀಕ ನ ಕೊಲೆ ಯತ್ನಕ್ಕೆ ಕಾರಣವಾಯಿತೇ ?

Wednesday, October 28th, 2020
dinesh Shetty

ಬಂಟ್ವಾಳ : ಮೂವರು ದುಷ್ಕರ್ಮಿಗಳ ತಂಡ ಫರಂಗಿಪೇಟೆಯಲ್ಲಿ  ಫೊಟೋಗ್ರಾಫರ್ ಒಬ್ಬರ ಮೇಲೆ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ರಾತ್ರಿ ವೇಳೆ ನಡೆದಿದೆ. ಫರಂಗಿಪೇಟೆಯಲ್ಲಿರುವ ಪೂಂಜಾ ಕಾಂಪ್ಲೆಕ್ಸ್ ನಲ್ಲಿರುವ ತೃಷಾ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಎಂಬವರ ಮೇಲೆ ಅಪರಿಚಿತ ವ್ಯಕ್ತಿಗಳು ರಾತ್ರಿ ತಲವಾರು ದಾಳಿ ನಡೆಸಿದ್ದಾರೆ. ದಿನೇಶ ಅವರ ಹೊಟ್ಟೆಯಭಾಗಕ್ಕೆ ಮೊದಲು ಇರಿಯಲಾಗಿದೆ. ಹಲ್ಲೆಯನ್ನು ತಡೆಯಲೆತ್ನಿಸಿದ್ದಾಗ ಕೈ ಬೆರಳು ತುಂಡಾಗಿದೆ ಮತ್ತು ತಲೆಯ ಹಿಂಬದಿಗೆ ಗಂಭೀರ ಗಾಯಗಳಾಗಿದೆ. ಗಂಭೀರ ಸ್ಥಿತಿಯಲ್ಲಿ  ಗಾಯಗೊಂಡ ದಿನೇಶ್ ಅವರನ್ನು ಮಂಗಳೂರು ಎಜೆ  […]

ಕೊರೋನಾಗೆ 85 ವರ್ಷ ಪ್ರಾಯದ ವೃದ್ಧ ಬಲಿ

Saturday, July 11th, 2020
covid death

ಬಂಟ್ವಾಳ : ಕೋವಿಡ್-19 ಗೆ ಶನಿವಾರ  ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳದ 85 ವರ್ಷ ಪ್ರಾಯದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಅವರಿಗೆ ಅಸ್ತಮಾ ಸಮಸ್ಯೆ ಹೆಚ್ಚಾದ ಕಾರಣ ಜುಲೈ 7ರಂದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊವೀಡ್ ಪರೀಕ್ಷೆಗೆ ಕಳುಹಿಸಿದ್ದ ಅವರ ಗಂಟಲು ದ್ರವ ಮಾದರಿಯ ವರದಿ ಜುಲೈ 9ರಂದು ರಾತ್ರಿ ಬಂದಿದ್ದು ಕೊರೋನ ಪಾಸಿಟಿವ್ ಅಗಿದೆ. ಅವರು ಹಲವು ವರ್ಷಗಳಿಂದ ಅಸ್ತಮಾ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ […]

ಕಟ್ಟಡ ದಲ್ಲಿ ಕೆಲಸ ಮಾಡುತ್ತಿದ್ದ ಯುವಕ ವಿದ್ಯುತ್ ಆಘಾತಕ್ಕೆ ಬಲಿ, ಮತ್ತೋರ್ವ ಗಂಭೀರ

Saturday, May 30th, 2020
electric shock

ಬಂಟ್ವಾಳ : ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ವಿದ್ಯುತ್‌‌ ಶಾಕ್‌‌ನಿಂದ  ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪ ಪೇರಿಮಾರ್‌‌ನಲ್ಲಿ ಶನಿವಾರ ನಡೆದಿದೆ. ಮೃತಪಟ್ಟ ಯುವಕನನ್ನು ಮುಬಾರಕ್ ಅಮ್ಮೆಮಾರ್(23) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಫಾರೂಕ್ ಅಮ್ಮೆಮಾರ್ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಫರಂಗಿಪೇಟೆಯ ಪೇರಿಮಾರ್‌‌‌ನಲ್ಲಿ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಫರಂಗಿಪೇಟೆ: ಬಂಟರ ಸಂಗಮ ಮತ್ತು ನೂತನ ಪಧಾಧಿಕಾರಿಗಳ ಪದಾಗ್ರಹಣ

Thursday, March 1st, 2018
bantara-sangama

ಬಂಟ್ವಾಳ: ಫರಂಗಿಪೇಟೆ ವಲಯ ಬಂಟರ ಸಂಘ ಇದರ ವತಿಯಿಂದ ಬಂಟರ ಸಂಗಮ ಮತ್ತು ನೂತನ ಪಧಾಧಿಕಾರಿಗಳ ಪದಾಗ್ರಹಣ ಸಮಾರಂಭವು ಫರಂಗಿಪೇಟೆ ಸೇವಾಂಜಲಿ ಸಭಾಭವನ ದಲ್ಲಿ ಜರುಗಿತು.ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿವೇಕ್ ಶೆಟ್ಟಿ ನಗ್ರಿಗುತ್ತು, ಅಧ್ಯಕ್ಷರು, ಬಂಟರ ಸಂಘ, ಬಂಟ್ವಾಳ. ಅವರು ತಮ್ಮ ಅಧ್ಯಕ್ಷೀಯ ಭಾಷಣದ ಶುಭ ಸಂದರ್ಭದಲ್ಲಿ ಸಮಾಜದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ತಮ್ಮ ಸಂಘದ ಮೂಲಕ 32 ಲಕ್ಷ ರೂಪಾಯಿಗಳನ್ನು ವಿತರಿಸಿದ್ದು, ಇನ್ನೂ ಮುಂದಿನ ದಿನಗಳಲ್ಲಿ ವಿದ್ಯಾರ್ಜನೆಗೆ ಹೆಚ್ಚಿನ ಪ್ರೋತ್ಸಾಹ ಕೊಡುವ […]

ಫರಂಗಿಪೇಟೆ ಚೂರಿ ಇರಿತ ಪ್ರಕರಣ: ಓರ್ವನ ಬಂಧನ

Tuesday, February 27th, 2018
pharangipete

ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಹೊಳೆಬದಿಯಲ್ಲಿ ಇರ್ಫಾನ್ ಎಂಬುವರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕೈಕಂಬದಲ್ಲಿ ಆರೋಪಿ ಶಮೀರ್ ಎಂಬಾತನನ್ನು ಬಂಧಿಸಲಾಗಿದೆ. ಫೆ. 22ರಂದು ಈತ ಫರಂಗಿಪೇಟೆ ಹೊಳೆ ಬದಿಯಲ್ಲಿ ನಡೆದ ಘರ್ಷಣೆಯಲ್ಲಿ ಇರ್ಪಾನ್‌‌ಗೆ ಚೂರಿ ಇರಿದಿದ್ದ. ಬಂಟ್ವಾಳ ‌ಪೊಲೀಸರು ಆರೋಪಿಯನ್ನು ಬಂಧಿಸಿ‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಕಾಂಕ್ರಿಟ್ ರಸ್ತೆ ಉದ್ಘಾಟನೆ

Saturday, January 6th, 2018
kamagari

ಮಂಗಳೂರು: ತಾಲೂಕಿನ ಪುದು ಗ್ರಾಮದ ಕೋಡಿಮಜಲ್ ಕುಟ್ಟಿಕಳ ಕಾಂಕ್ರಿಟ್ ರಸ್ತೆಗೆ ಸುಮಾರು 50 ಲಕ್ಷ ರುಪಾಯಿ ವೆಚ್ಚದ ಕಾಮಗಾರಿಗೆ ಮತ್ತು ಫರಂಗಿಪೇಟೆಯಿಂದ ಕುಟ್ಟಿಕಳ ಸಂಪರ್ಕ ರಸ್ತೆಗೆ ಡಾಮರೀಕರಣ ಶಿಲಾನ್ಯಾಸ, ಸುಜೀರ್ ಬದಿಗುಡ್ದೆ ಕಾಂಕ್ರಿಟ್ ರಸ್ತೆಯ ಉದ್ಘಾಟನೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಶನಿವಾರ ಶಿಲಾನ್ಯಾಸಗೈದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಇಕ್ಬಾಲ್ ದರ್ಬಾರ್, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಶಿರ್ ಪೇರಿಮಾರ್, ಸದಸ್ಯರಾದ ಝಹೀರ್ […]

ಮನುಷ್ಯರಾಗಿ ಬದುಕೋಣ: ಪ್ರಕಾಶ್‌ ರೈ ಕರೆ

Wednesday, December 13th, 2017
prakash-said

ಮಂಗಳೂರು: ಈ ಜಗತ್ತಲ್ಲಿ ಹುಲ್ಲುಕಡ್ಡಿಯನ್ನೂ ಸೃಷ್ಟಿಸುವ ಶಕ್ತಿ ಹಾಗೂ ಅರ್ಹತೆಯಿಲ್ಲದ ನಮಗೆ ಯಾರನ್ನೂ ಕೊಲ್ಲುವ ಅರ್ಹತೆಯೂ ಇಲ್ಲ. ಹೀಗಾಗಿ ಮನುಷ್ಯರಾಗಿ ಬದುಕಬೇಕೇ ಹೊರತು, ದ್ವೇಷದಿಂದ ಬದುಕುವುದು ಸಲ್ಲದು ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಕರೆ ನೀಡಿದರು. ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಫರಂಗಿಪೇಟೆಯಿಂದ ಮಾಣಿವರೆಗೆ ಮಂಗಳವಾರ ನಡೆದ, ಸಾಮರಸ್ಯಕ್ಕಾಗಿ ಸೌಹಾರ್ದ ನಡಿಗೆ ಸಮಾ ರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಸಾಮರಸ್ಯ ನಡಿಗೆಯಲ್ಲಿ ನಾನೊಬ್ಬ ನಟ ಹಾಗೂ ದೇಶದ ಪ್ರಜೆಯಾಗಿ ಭಾಗವಹಿಸಿದ್ದೇನೆ. ಕಲಾವಿದ ಪ್ರತಿಭೆ […]