ಶಾಲೆಯನ್ನು ರೆಸ್ಟೋರೆಂಟ್ ಮಾಡಲು ಮುಂದಾಗಿರುವುದರ ವಿರುದ್ಧ ಮಾನವ ಹಕ್ಕು ಮತ್ತು ಆರ್. ಟಿ. ಐ ಕಾರ್ಯಕರ್ತರ ಪ್ರತಿಭಟನೆ

Thursday, January 19th, 2017
RTI

ಮಂಗಳೂರು: 1870ರಲ್ಲಿ ಸ್ಥಾಪನೆಯಾದ 147 ವರ್ಷ ಹಳೆಯದಾದ ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆ ಮತ್ತು ಶಾಲೆಯ ಮೈದಾನವನ್ನು ಕಾನೂನು ಉಲ್ಲಂಘಿಸಿ ರೆಸ್ಟೋರೆಂಟ್ ಮಾಡಲು ಮುಂದಾಗಿರುವುದರ ವಿರುದ್ಧ ಮಾನವ ಹಕ್ಕು ಹೋರಾಟಗಾರರು ಮತ್ತು ಆರ್. ಟಿ. ಐ ಕಾರ್ಯಕರ್ತರು ಶಾಲೆ ಇದ್ದ ಜಿಹೆಚ್ಎಸ್ ರಸ್ತೆಯ ಆಶೀರ್ವಾದ್ ಕಟ್ಟಡದ ಹಿಂಭಾಗ ಪ್ರತಿಭಟನೆ ನಡೆಸಿದರು. ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದು, ನಂತರ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚಲಾಗಿತ್ತು. ಈ ಶಾಲೆಯನ್ನು ಪುನರಾರಂಭಿಸುವುದು ನಮ್ಮ ಉದ್ದೇಶ. ಶಾಲೆಗಿರುವ […]

ಬೆಳುವಾಯಿ ಆರೋಗ್ಯ ಕೇಂದ್ರಕ್ಕೆ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಘಟನೆಯ ಸದಸ್ಯರ ಭೇಟಿ

Wednesday, September 21st, 2016
health-centre

ಮಂಗಳೂರು: ಅವ್ಯವಸ್ಥೆ ಹಾಗೂ ಸಮಸ್ಯೆಗಳ ಆಗರವಾಗಿರುವ ಬೆಳುವಾಯಿ ಮತ್ತು ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳೂರು ತಾಲೂಕು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಘಟನೆಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳುವಾಯಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ವೈದ್ಯರು ಇಲ್ಲ. ಆಸ್ಪತ್ರೆಗೆ ಬಂದ ಹಲವಾರು ರೋಗಿಗಳು ಚಿಕಿತ್ಸೆ ಇಲ್ಲದೆ ವಾಪಸ್‌ ತೆರಳುತ್ತಿರುವುದು ಇಲ್ಲಿ ಸಾಮಾನ್ಯದಂತಾಗಿತ್ತು. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಆವರಣದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿವೆ. ಕಲ್ಲಮುಂಡ್ಕೂರು ಆಸ್ಪತ್ರೆಯ ವೈದ್ಯಾಧಿಕಾರಿ ತರಬೇತಿಗೆ ತೆರಳಿರುವ […]

ಪಾಕ್‌ ಸೇನೆಯ ಗುಂಡೇಟಿಗೆ ಬಲಿಯಾದ 1,000 ಬಲೂಚಿಗಳ ಶವ ಪತ್ತೆ: ವರದಿ

Monday, September 19th, 2016
pak

ಇಸ್ಲಾಮಾಬಾದ್‌ : ಪಾಕಿಸ್ಥಾನದ ಅತೀ ದೊಡ್ಡ ಪ್ರಾಂತ್ಯವಾಗಿರುವ ಬಲೂಚಿಸ್ಥಾನದಲ್ಲಿ ಘೋರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲಿಂದ ಮಾಡಿದ್ದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳುವ ಮೂಲಕ ವಿಶ್ವ ಗಮನವನ್ನು ಸೆಳೆದಿದ್ದರು. ಇದನ್ನು ಪುಷ್ಟೀಕರಿಸುವಂತೆ ಪಾಕ್‌ ದೈನಿಕವೊಂದು, ಸರಕಾರದ ಅಂಕಿ ಅಂಶಗಳನ್ನು ಉಲ್ಲೇಖೀಸಿ, ಪ್ರಕಟಿಸಿರುವ ವರದಿಯ ಪ್ರಕಾರ ಕಳೆದ ಆರು ವರ್ಷಗಳಲ್ಲಿ ಬಲೂಚಿಸ್ಥಾನದ ವಿವಿಧೆಡೆಗಳಲ್ಲಿ ಗುಂಡೇಟಿನಿಂದ ಸತ್ತಿರುವ ಒಂದು ಸಾವಿರ ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಪಾಕಿಸ್ಥಾನದ ಈ ಪ್ರಾಂತ್ಯದಲ್ಲಿ […]

‘ಮಾನವ ಹಕ್ಕುಗಳ ಮಹತ್ವ’ದ ಬಗೆಗಿನ ವಿಚಾರ ಸ೦ಕಿರಣ

Wednesday, April 1st, 2015
Human Rights

ಮಂಗಳೂರು: ಅತ್ಯಾಚಾರ,ಅನಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ಜನರಿಗೆ ಮಾನವೀಯ ಮೌಲ್ಯಗಳು ಹಾಗೂ ಮಾನವ ಹಕ್ಕುಗಳನ್ನು ಬಳಸಿಕೊಳ್ಳುವ ರೀತಿ ನೀತಿಗಳ ಬಗ್ಗೆ ಅರಿವು ಅತ್ಯಗತ್ಯ. ಇದೇ ನಿಟ್ಟಿನಲ್ಲಿ ನಗರದ ಸ೦ತ ಅಲೋಶಿಯಸ್ ಕಾಲೇಜಿನ ಮಾಧ್ಯಮ ಮತ್ತು ಸ೦ವಹನ ವಿಭಾಗದ ವಿದ್ಯಾರ್ಥಿಗಳು ‘ಮಾನವ ಹಕ್ಕುಗಳ ಮಹತ್ವ’ದ ಬಗೆಗಿನ ವಿಚಾರ ಸ೦ಕಿರಣವನ್ನು, ಮ೦ಗಳವಾರ ದಿನಾ೦ಕ 31ಮಾರ್ಚ್,2015 ರ೦ದು ಕಾಲೇಜಿನ ಮುಖ್ಯ ಸಭಾ೦ಗಣದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಉಧ್ಗಾಟಕರು ಹಾಗೂ ಪ್ರಮುಖ ಉಪನ್ಯಾಸಕರಾಗಿ, ಭಾರತೀಯ ಮಾನವ ಹಕ್ಕು ಒಕ್ಕೂಟ (ಸರ್ಕಾರೇತರ ಸ೦ಸ್ಥೆ ) […]

ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕು ಮತ್ತು ಅದರ ಅನುಷ್ಠಾನ ಕ್ಕೆ ಕಾರ್ಯಪ್ರವೃತ್ತರಾಗಬೇಕು : ಪ್ರತಾಪ್ ರೆಡ್ಡಿ

Wednesday, March 20th, 2013
Human rights protection

ಮಂಗಳೂರು : ಮಾನವ ಹಕ್ಕುಗಳನ್ನು ರಕ್ಷಿಸುವ ಕಾರ್ಯವು  ಕೇವಲ ಕಾನೂನಿಗೆ ಮಾತ್ರ ಸಂಬಂಧಿಸಿರದೆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕು ಮತ್ತು ಅದರ ಅನುಷ್ಠಾನ ಕ್ಕೆ ಕಾರ್ಯಪ್ರವೃತ್ತರಾಗಬೇಕು. ಎಂದು ಪ್ರತಿಯೊಬ್ಬ ವ್ಯಕ್ತಿಯು ಈ ಹಕ್ಕುಗಳ ಬಗೆಗೆ ಜಾಗೃತಿಯನ್ನು ಹೊಂದುತ್ತಾನೋ ಅಂದು ಮಾನವ ಹಕ್ಕುಗಳ ಉಲ್ಲಂಘನೆ ಕಡಿಮೆಯಾಗುತ್ತದೆ ಎಂದು  ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಸಂತ ಅಲೋಶಿಯಸ್ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ಪ್ರತಿಪಾದನೆ  ವಿಷಯವಾಗಿ ಏರ್ಪಡಿಸಲಾದ […]