ಕಂದಾಯ ಸಚಿವರಿಂದ ರಕ್ಷಾಬಂಧನ‌ ಆಚರಣೆ

Sunday, August 22nd, 2021
Rakshabandhan

ಬೆಂಗಳೂರು : ಭಾತೃತ್ವದ ಸಂಕೇತವಾಗಿರುವ‌ ರಕ್ಷಾಬಂಧನದ ನಿಮಿತ್ತ ಕಂದಾಯ ಸಚಿವ ಆರ್‌ ಅಶೋಕ‌ ಅವರು ಹೊಸಕೆರೆಹಳ್ಳಿಯಲ್ಲಿ‌ ಮಹಿಳಾ ಕಾರ್ಯಕರ್ತರಿಂದ ರಾಖಿ ಕಟ್ಟಿಸಿಕೊಂಡು ಶುಭ ಕೋರಿದರು. ಈ ವೇಳೆ ಮಾತನಾಡಿದ ಸಚಿವರು,”ಹಿಂದೂ ಸಂಪ್ರದಾಯದಲ್ಲಿ ರಕ್ಷಾ ಬಂಧನಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಸಹೋದರಿಯ ರಕ್ಷಣೆಯ ಸೂಚಕವಾಗಿ ರಾಖಿ ಕಟ್ಟಿಸಿಕೊಳ್ಳುವ ಸಹೋದರ ಆ‌ ಮೂಲಕ ಆಕೆಗೆ ನಿರಂತರ ರಕ್ಷಣೆ ನೀಡುವ ಅಭಯ ಈ ಆಚರಣೆಯಲ್ಲಿ ಅಡಗಿದೆ”, ಎಂದು ಹೇಳಿದರು.

ವರ್ತಮಾನದಲ್ಲಿ ರಕ್ಷಾಬಂಧನ ಹಬ್ಬದ ಮಹತ್ವ

Friday, August 24th, 2018
Rakshabandhana

ಮಂಗಳೂರು :  ಭಾರತವು ಹಬ್ಬಗಳ ತವರೂರು. ಈ ಹಬ್ಬಗಳು ಪರಸ್ಪರ ಸ್ನೇಹ-ವಿಶ್ವಾಸ, ಗೌರವವನ್ನು ಇಮ್ಮಡಿಗೊಳಿಸುತ್ತಾ ಮಾನವನ ಜೀವನದಲ್ಲಿ ಸುಖ-ಶಾಂತಿಯನ್ನು ತುಂಬುತ್ತಿವೆ. ಮನುಷ್ಯನಲ್ಲಿ ಹಲವು ರೀತಿಯ ಮಾನವೀಯ ಗುಣಗಳನ್ನು ತುಂಬುತ್ತಾ ಅವನನ್ನು ಗುಣವಂತನ್ನಾಗಿ ಹಬ್ಬಗಳು ಮಾಡುತ್ತಿವೆ. ಈ ನಾಡಿನಲ್ಲಿ ಆಚರಿಸುವ ಹಬ್ಬಗಳಲ್ಲಿ ಮಾನವನ ರಕ್ಷಣೆಯು ಅಡಗಿದೆ. ಆಧುನಿಕ ವಿಜ್ಞಾನ ಯುಗದಲ್ಲಿಯೂ ಕೂಡ ಹಬ್ಬಗಳ ಆಚರಣೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಭಾರತಾದ್ಯಂತ ವಿಭಿನ್ನ ರೀತಿಯ ರಕ್ಷಾಬಂಧನ: ಉತ್ತರ ಭಾರತದಲ್ಲಿ ರಕ್ಷಾಬಂಧನವನ್ನು ದೇವರನ್ನು ಪೂಜಿಸಿ ಸಹೋದರಿಯರು ಸಹೋದರರಿಗೆ ತಿಲಕವನ್ನಿಟ್ಟು ರಕ್ಷಾಬಂಧವನ್ನು […]

ರಕ್ಷಾಬಂಧನ ಸ್ತ್ರೀಯು ಪುರುಷನಿಗೆ ಕಟ್ಟುವುವುದರಲ್ಲಿ ಶ್ರೇಷ್ಠವಿದೆ : ಸಂಗೀತಾ ಪ್ರಭು

Monday, August 7th, 2017
Rakshbandhana

ಮಂಗಳೂರು: ನಗರದ ಬೋಳೂರಿನ ಪ್ರಭು ನಿವಾಸ ಕಂಪೌಂಡ್ ನಲ್ಲಿನ ಸೇವಾಕೇಂದ್ರದಲ್ಲಿ ಪತ್ರಕರ್ತರಿಗೆ ಸೇರಿದಂತೆ ಧರ್ಮಪ್ರೇಮಿಗಳನ್ನು ಒಟ್ಟುಸೇರಿಸಿ ಶಾಸ್ತ್ರೋಕ್ತವಾಗಿ ರಾಖಿ ಕಟ್ಟಲಾಯಿತು. ಸನಾತನ ಸಂಸ್ಥೆಯ ವಕ್ತಾರರಾದ ಸೌ. ಸಂಗೀತಾ ಪ್ರಭು ಇವರು ರಕ್ಷಾಬಂಧನದ ಮಹತ್ವದ ಕುರಿತಾಗಿ ಮಾತನಾಡುತ್ತಾ, ಶ್ರಾವಣ ಮಾಸದ ಹುಣ್ಣಿಮೆಯ ದಿನ ಸೋದರನಿಗೆ ಸೋದರಿಯು ರಕ್ಷೆಯನ್ನು ಕಟ್ಟುವುದಕ್ಕೆ ರಕ್ಷಾಬಂಧನ ಎಂದು ಹೇಳುತ್ತಾರೆ, ‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’ ರಾಖಿಯನ್ನು […]

ಸಹೋದರತ್ವ ಸಾರುವ ರಾಖಿ ಹಬ್ಬ: ಮಂಗಳೂರಿನಲ್ಲಿ ಭಾವೈಕ್ಯತೆಯ ರಕ್ಷಾಬಂಧನ ಆಚರಣೆ

Friday, August 19th, 2016
Rakshabandhana

ಮಂಗಳೂರು: ಗುರುಪೂರ್ಣಿಮೆ ಉತ್ಸವ ದಿನದಂದು ರಕ್ಷಾಬಂಧನವನ್ನು ಕಟ್ಟುವುದು ಹಿಂದೂಗಳ ಸಂಪ್ರದಾಯ. ಪುರಾಣಗಳಲ್ಲಿ ಕೂಡಾ ರಾಖಿಯ ಕುರಿತ ಅನೇಕ ಕಥೆಗಳಿವೆ. ವಿಶೇಷವೆಂದರೆ ಬಿಕರ್ನಕಟ್ಟೆ ಬಾಲಯೇಸು ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಮತ್ತು ಚರ್ಚ್‌ನ ಧರ್ಮಗುರುಗಳು, ಭಕ್ತರು ಪರಸ್ಪರ ರಾಖಿಕಟ್ಟುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾದರು. ರಾಖಿ ಹಬ್ಬದ ಮಹತ್ವ ಕುರಿತು ಉಪನ್ಯಾಸ ನೀಡಿದ ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹ ಸಂಘಚಾಲಕ ಡಾ. ಪಿ.ವಿ. ವಾಮನ್ ಶೆಣೈ, ತನ್ನ ಮಾನ ಪ್ರಾಣ ರಕ್ಷಣೆಗಾಗಿ ರಾಖಿ ಕಟ್ಟುವ ಸಹೋದರಿಯ ರಕ್ಷಣೆಗೆ ಜೀವತೆತ್ತು […]