ಆ್ಯಗ್ನೆಸ್ ಕಾಲೇಜು ಬಳಿ ಬಸ್ಸು ತಂಗುದಾಣ ನಿರ್ಮಾಣಕ್ಕೆ ಆಗ್ರಹಿಸಿ ಧರಣ

Thursday, February 22nd, 2018
st-Agnes

ಮಂಗಳೂರು: ನಗರದ ಸಂತ ಆ್ಯಗ್ನೆಸ್ ವಿದ್ಯಾಸಂಸ್ಥೆಗಳ ಬಳಿ ಬಸ್ಸು ತಂಗದಾಣವನ್ನು ನಿರ್ಮಿಸಲು ಒತ್ತಾಯಿಸಿ ಮಂಗಳೂರಿನ ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆ ಸಂಘಟನೆ ನೇತೃತ್ವದಲ್ಲಿ ಇಂದು ಬೆಳಗ್ಗೆ ಧರಣಿ ನಡೆಯಿತು. ಆ್ಯಗ್ನೆಸ್ ವಿದ್ಯಾಸಂಸ್ಥೆಯ ಎದುರಿನ ಹಳೆ ಬಸ್ಸು ತಂಗುದಾಣದಲ್ಲಿ ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜೆರಾರ್ಡ್ ಟವರ್ಸ್, ಕಳೆದ ಸುಮಾರು 60 ವರ್ಷಗಳಿಂದ ಇದ್ದ ಬಸ್ಸು ತಂಗುದಾಣವನ್ನು ಕಾಣದ ಕೈಗಳು ನಗರ ಪಾಲಿಕೆಯ ಜತೆ ಸೇರಿ ಕೆಡವಿದೆ. ಇದರಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಸಂಸ್ಥೆ ಯ ಸಾವಿರಾರು ವಿದ್ಯಾರ್ಥಿಗಳು […]

ಗೋಪಾಲ ಪೂಜಾರಿ ಕ್ರಿಯಾಶೀಲ, ಜನಪರ ಶಾಸಕ; ಸಿಎಂ ಬಹುಪರಾಕ್

Monday, January 8th, 2018
Gopal-poojary

ಬೈಂದೂರು: ಬಿಜೆಪಿಯವರು ಕೆಲಸ ಮಾಡೋದು ಕಡಿಮೆ, ಪ್ರಚಾರ ಮಾಡೋದು ಜಾಸ್ತಿ. ನಾವು(ಕಾಂಗ್ರೆಸ್) ಮಾಡಿರುವ ಅಭಿವೃದ್ಧಿ ಕೆಲಸವನ್ನು ತಾವು(ಬಿಜೆಪಿ) ಮಾಡಿದ್ದು ಎಂದು ಹೇಳಿಕೊಳ್ಳೋದು ಬಿಜೆಪಿಯವರ ಚಾಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಸೋಮವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಯ ಒಟ್ಟು 490.97 ಕೋಟಿ ಮೊತ್ತದ ಕಾಮಗಾರಿಗೆ ಶಿಲಾನ್ಯಾಸ ಹಾಗೂ ರಾಜ್ಯ ಸರಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ನಾವು ಮಾಡಿರುವ ಕೆಲಸವನ್ನು ಅವರು ಮಾಡಿರುವುದಾಗಿ ಹೇಳಿಕೊಳ್ಳುತ್ತಾರೆಂದು ಶಾಸಕ ಗೋಪಾಲ ಪೂಜಾರಿ ಅವರು ನೊಂದುಕೊಳ್ಳಬೇಕಾಗಿಲ್ಲ. ಯಾಕೆಂದರೆ […]

ಸಹಕಾರ ಕ್ಷೇತ್ರಕ್ಕೆ ಭದ್ರ ನೆಲೆ ಕಲ್ಪಿಸಿರುವ ಮೊಳಹಳ್ಳಿ ಶಿವರಾಯರು ಈ ಕ್ಷೇತ್ರದ ಪ್ರೇರಕ ಶಕ್ತಿ: ರಾಜೇಂದ್ರ ಕುಮಾರ್‌

Friday, August 5th, 2016
Molahalli-Shivaraya

ಮಂಗಳೂರು: ಸಹಕಾರ ಕ್ಷೇತ್ರಕ್ಕೆ ಭದ್ರ ನೆಲೆ ಕಲ್ಪಿಸಿರುವ ದಿ| ಮೊಳಹಳ್ಳಿ ಶಿವರಾಯರು ಈ ಕ್ಷೇತ್ರದ ಪ್ರೇರಕ ಶಕ್ತಿ. ಇಂದು ಸಹಕಾರ ಕ್ಷೇತ್ರ ಸಂಸ್ಮರಣೆ ಮಾಡುತ್ತಿರುವುದು ಅವರ ಆದರ್ಶ ವ್ಯಕ್ತಿತ್ವಕ್ಕಾಗಿ. ಎಲ್ಲರನ್ನು ಒಟ್ಟುಗೂಡಿಸಿ ಸಹಕಾರವೆಂಬ ನಂದಾದೀಪ ಬೆಳಗಿಸಿದ ಶಿವರಾಯರು ತನ್ನ ಜೀವಿತಕಾಲದ 87 ವರ್ಷಗಳಲ್ಲಿ 58 ವರ್ಷಗಳನ್ನು ಸಹಕಾರ ಕ್ಷೇತ್ರಕ್ಕಾಗಿ ಮೀಸಲಿರಿಸಿರುವುದರಿಂದ ಅವರು ಸಹಕಾರ ಕ್ಷೇತ್ರದ ಪಿತಾಮಹರಾಗಿ ಇಂದಿಗೂ ಸಹಕಾರಿಗಳೆಲ್ಲರಿಗೂ ಸ್ಮರಣೀಯರಾಗಿದ್ದಾರೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ. ಅವರು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ […]

ಪೌರ ಕಾರ್ಮಿಕರಿಗೆ ಎಡ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮ

Monday, November 22nd, 2010
ಎಡ್ಸ್ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಹಾಗೂ ಡಾ|ಎಂ.ವಿ.ಶೆಟ್ಟಿ ಕಾಲೇಜು ಜಂಟಿ ಆಶ್ರಯದಲ್ಲಿ ಪಾಲಿಕೆ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಎಡ್ಸ್ ಬಗ್ಗೆ  ವಿಶೇಷ ಜಾಗೃತಿ ಕಾರ್ಯಕ್ರಮವನ್ನು  ಉಪಮೇಯರ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪೌರ ಕಾರ್ಮಿಕರಿಗೆ ಅರಿವು ಮೂಡಿಸುವ ಈ ಕಾರ್ಯಕ್ರಮ ಸ್ತುತ್ಯರ್ಹ, ರೋಗ ರಹಿತ ಭಾರತ ನಿರ್ಮಾಣ ಮಾಡಲು ಮುಂದಾಗೋಣ ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮ.ನ.ಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತ.ಆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ […]